ಮಂಡ್ಯ. ಮಾಚ್೯ 1 ರಿಂದ ಪ್ರರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಯು ಮಂಡ್ಯ ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ವಿದ್ಯರ‍್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳ ವೆಬ್ ಕ್ಯಾಸ್ಟಿಂಗ್ ನ್ನು ವೀಕ್ಷಿಸಲು ತಂಡ ರಚಿಸಿದ್ದು, ತಂಡವು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರತಿ ಪರೀಕ್ಷಾ ಕೊಠಡಿಯನ್ನು ವೀಕ್ಷಿಸುತ್ತಿದೆ.
ವೆಬ್ ಕ್ಯಾಸ್ಟಿಂಗ್ ಕೊಠಡಿಗೆ ಇಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪರೀಕ್ಷಾ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಅವರು ಮಾತನಾಡಿ ವೆಬ್ ಕ್ಯಾಸ್ಟಿಂಗ್ ಅನುಷ್ಠಾನದ ಮೂಲಕ ವಿದ್ಯರ‍್ಥಿಗಳಿಗೆ ಪರೀಕ್ಷೆಯ ಬಗ್ಗೆ ಗಂಭೀರತೆ ಹೆಚ್ಚಿದೆ ಹಾಗೂ ಹೆಚ್ಚಿನ ಜ್ಞಾರ‍್ಜನೆ ನಡೆಸುತ್ತಾರೆ. ಶಿಕ್ಷಕರು ಸಹ ವಿದ್ಯರ‍್ಥಿಗಳಿಗೆ ಹೆಚ್ಚಿನ ಪರಿಹಾರ ಬೋಧನೆಗಳನ್ನು ನಡೆಸಿ ಪರೀಕ್ಷೆಗೆ ವಿದ್ಯರ‍್ಥಿಗಳನ್ನು ಸಜ್ಜುಗೊಳಿಸುತ್ತಾರೆ ಎಂದರು.
ಇದೇ ಸಂಧರ್ಭದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಕೆ.ಆರ್ ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮರ‍್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.