ಮಂಡ್ಯ: ಯುವ ಸಮೂಹ ಉತ್ತಮ ದಿಕ್ಕನ್ನು ಆಯ್ಕೆ ಮಾಡಿಕೊಂಡು ಗುರಿ ತಲುಪಿದರೆ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಆದರಿಂದ ಯುವ ಸಮೂಹ ದೇಶದ ಅಭಿವೃದ್ಧಿಯ ಸಂಕೇತ. ಅವರಿಗೆ ಉತ್ತಮ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಅವರು ಇಂದು ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಂಡ್ಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಗ್ಯಾರಂಟಿ ಯೋಜನೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವನಿಧಿ ಯೋಜನೆಯಡಿ ಡಿಪ್ಲೊಮಾ ಹಾಗೂ ಪದವಿ ಉತ್ತೀರ್ಣರಾಗಿ 180 ದಿನಗಳ ಕಾಲವದರೂ ಉದ್ಯೋಗ ದೊರೆಯದೇ ಇದ್ದಲ್ಲಿ ರೂ 1500 /- ಹಾಗೂ ರೂ 3000/- ಎರಡು ವರ್ಷಗಳ ಕಾಲ ಸಹಾಯಧನ ನೀಡಲಾಗುತ್ತಿದೆ. ಈ ಹಣವನ್ನು ಬಹಳಷ್ಟು ವಿದ್ಯಾರ್ಥಿಗಳು ಬಳಸಿಕೊಂಡು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕ ಖರೀದಿಸುತ್ತಿದ್ದಾರೆ. ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ ಎಂದರು.
ಕಟ್ಟಕಡೆಯ ವ್ಯಕ್ತಿಗೂ ಸಹ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವುದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ ಎಂದರು.

ವಿವಿಧ ಗ್ಯಾರಂಟಿ ಯೋಜನೆಗಳ ಉಳಿತಾಯದ ಹಣದ ಮೂಲಕ ಇಂದು ಕಡು ಬಡವರ ಮನೆಗಳಲ್ಲೂ ಸಹ ಫ್ರಿಡ್ಜ್, ಟಿ.ವಿ ಹಾಗೂ ಮುಂತಾದ ವಸ್ತುಗಳನ್ನು ಖರೀದಿದುವ ಸಾಮಥ್ಯ 9 ಬಂದಿದೆ. ಈ ಬಗ್ಗೆ ಮಹಿಳೆಯರು ಸಂತೋಷ ವ್ಯಕ್ತ ಪಡಿಸುತ್ತಿರುವ ಉದಾಹರಣೆಗಳಿವೆ.
ಮಹಿಳೆಯರ ಪ್ರಗತಿಯನ್ನು ಅಳತೆ ಮಾಡಿ ದೇಶದ ಅಭಿವೃದ್ಧಿಯನ್ನು ಲೆಕ್ಕಾಚಾರ ಮಾಡಬೇಕು ಎಂಬ ಹಿನ್ನಲೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿ ಗೃಹ ಲಕ್ಷ್ಮಿ ಹಾಗೂ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮಾತನಾಡಿ ಯುವಕರು ದೇಶದ ಸಂಪತ್ತು.ಅವರು ಪ್ರಶ್ನೆ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು ಆಗ ಮಾತ್ರ ಯೋಜನೆಗಳ ಮೌಲ್ಯಮಾಪನ ಸಾಧ್ಯ . ಪಂಚ ಗ್ಯಾರಂಟಿಗಳು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದರವರಿಗೆ ದನಿ ಹಾಗೂ ವರವಾಗಿದೆ.
ಜೀವನದಲ್ಲಿ ಒಂದು ಬಾರಿ ಸಹ ದೂರದ ದೇವಸ್ಥಾನವನ್ನು ನೋಡದೆ ಇರುವ ಮಹಿಳೆಯರು ದೇವರ ದರ್ಶನ ಪಡೆದು ಶಕ್ತಿ ಯೋಜನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಮಹಿಳೆಯರು ಈ ಯೋಜನೆಯಿಂದ ತಮ್ಮ ಜೀವನದಲ್ಲಿ ಆಗಿರುವ ಧನಾತ್ಮಕ ಬೆಳವಣಿಗೆಯ ಬಗ್ಗೆ ವಿವರಿಸಿರುವುದನ್ನು ವೈಯಕ್ತಿಕವಾಗಿ ಕೇಳಿದ್ದೇನೆ.

ಸಂವಾದ ಕಾರ್ಯಕ್ರಮದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶಶಾಂಕ ಮಾತನಾಡಿ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮನೆ ಯಜಮಾನಿಗೆ ರೂ 2000 ರೂ ಗಳನ್ನು ನೀಡಲಾಗುತ್ತಿದೆ ಎಂದರು.ವಿದ್ಯಾರ್ಥಿ ಅನ್ನದಾನಿ ಅವರು ಪಂಚ ಗ್ಯಾರಂಟಿ ಬಗ್ಗೆ ವಿವರಣೆ ನೀಡಿದರು.
ವಿದ್ಯಾರ್ಥಿ ಯಶ್ವಂತ್ ಅವರು ಸಂವಾದದಲ್ಲಿ ಭಾಗವಹಿಸಿ ಅನ್ನ ನೀಡುವ ರೈತನಿಗೆ ಹಾಗೂ ಬಿ.ಪಿ.ಎಲ್ ಕಾರ್ಡ್ದಾರರಿಗೆ ಕುಟುಂಬದ ಪ್ರತಿ ತಲೆಗೆ 10 ಕೆ.ಜಿ ಅಕ್ಕಿಯನ್ನು ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ವಂದನೆಗಳು ಎಂದರು.
.
ಮಂಡ್ಯದ ಶಂಕರಮಠ ನಿವಾಸಿ ಹೇಮಾವತಿ ಅವರು ತಮ್ಮ ಜೀವನದಲ್ಲಿ ಮನೆಗೆ ಆಸರೆಯಾಗಿದ್ದ ಮಗ ಹಾಗೂ ಗಂಡನನ್ನು ಕಳೆದುಕೊಂಡ ನಂತರ ಗೃಹ ಲಕ್ಷಿ ಯೋಜನೆಯಡಿ ಬರುತ್ತಿರುವ ರೂ 2000/- ಹಣದಿಂದ ಗಂದಧ ಕಡ್ಡಿ ಮಾರಾಟ ಮಾಡುತ್ತಿದ್ದೇನೆ. ಪ್ರತಿ ವಾರ ಒಂದು ಬಾರಿ ಗಂದಧ ಕಡ್ಡಿ ತಯಾರಿಸಲು ಬೇಕಿರುವ ವಸ್ತು ತರಲು ಮಾರಾಟ ಮಾಡಲು ಬೆಂಗಳೂರಿಗೆ ಹೋಗಿ ಬರಲಾಗುತ್ತದೆ ಇದರಲ್ಲಿ ಶಕ್ತಿ ಯೋಜನೆ ಬಳಸಿಕೊಂಡು ಸುಮಾರು 1600 ರೂ ಉಳಿತಾಯವಾಗುತ್ತಿದೆ. ಗೃಹ ಜ್ಯೋತಿ ಯೋಜನೆಯಡಿ ಈ ಹಿಂದೆ ರೂ 600/- ವಿದ್ಯುತ್ ಬಿಲ್ ಬರುತ್ತಿತ್ತು, ಈಗ ರೂ 100/- ಬಿಲ್ . ಬರುತ್ತಿದೆ ಇದರಿಂದ ಸುಮಾರು ರೂ 500 ಉಳಿತಾಯ ಮಾಡಲಾಗುತ್ತಿದೆ. ಇದರಿಂದ ಒಟ್ಟಾರೆ 4000 ರೂ ಪಂಚ ಗ್ಯಾರಂಟಿ ಯೋಜನೆಯಿಂದ ದೊರೆಯುತ್ತಿದೆ ಎಂದು ತಮ್ಮ ಜೀವನದಲ್ಲಿ ಪಂಚ ಗ್ಯಾರಂಟಿಯ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಿಕ್ಕವೀರಯ್ಯ, ಉಪಾಧ್ಯಕ್ಷರಾದ ಹನುಮಂತು, ಮಂಡ್ಯ ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಹೆಚ್, ಕೆ ರುದ್ರಪ್ಪ ಮತ್ತು ಜಿಲ್ಲಾಮಟ್ಟದ ಅನುಷ್ಠಾನ ಇಲಾಖೆಯ ಮುಖ್ಯಸ್ಥರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.