ಕೆ ಆರ್ ಪೇಟೆ: ತಾಲ್ಲೂಕು ಬಳ್ಳೇಕೆರೆ ಗ್ರಾಮ ಪಂಚಾಯತಿ ನೂತನ ಉಪಾಧ್ಯಕ್ಷರಾಗಿ ಮೊಸಳೆಕೊಪ್ಪಲು ಮಂಜುನಾಥ್ ಅವರು 11ಮತಗಳನ್ನು ಪಡೆಯುವ ಆಯ್ಕೆಯಾಗಿದ್ದಾರೆ.
ಪಂಚಾಯತಿಯ ಹಿಂದಿನ ಉಪಾಧ್ಯಕ್ಷರಾಗಿದ್ದ ಹೆಮ್ಮಡಹಳ್ಳಿ ತಿಮ್ಮೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿದ್ದ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನ ಬಯಸಿ ಬಳ್ಳೇಕೆರೆ ಚಂದ್ರೇಗೌಡ ಹಾಗೂ ಮೊಸಳೆಕೊಪ್ಪಲು ಮಂಜುನಾಥ್ ಅವರು ನಾಮಪತ್ರವನ್ನು ಸಲ್ಲಿಸಿದರು. ಗ್ರಾಮ ಪಂಚಾಯತಿಯು ಒಟ್ಟು 19ಮಂದಿ ಸದಸ್ಯರ ಬಲವನ್ನು ಹೊಂದಿದೆ.

ಚುನಾವಣೆಯಲ್ಲಿ ಮೊಸಳೆಕೊಪ್ಪಲು ಮಂಜುನಾಥ್ ಪರವಾಗಿ 11ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಬಳ್ಳೇಕೆರೆ ಚಂದ್ರೇಗೌಡ 8 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಚುನಾವಣಾ ಪ್ರಕ್ರಿಯೆಯನ್ನು ಘೋಷಿಸಿದರು. ಸಹ ಚುನಾವಣಾಧಿಕಾರಿಯಾಗಿ ತಾ.ಪಂ.ವ್ಯವಸ್ಥಾಪಕ ಅನಿಲ್ ಬಾಬು ಕಾರ್ಯನಿರ್ವಹಣೆ ಮಾಡಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಮೊಸಳೆಕೊಪ್ಪಲು ಮಂಜುನಾಥ್ ಅವರ ಬೆಂಬಲಿಗರು,ಅಭಿಮಾನಿಗಳು, ಹಿತೈಷಿಗಳು, ಯುವಕರು ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.

ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊಸಳೆಕೊಪ್ಪಲು ಮಂಜುನಾಥ್ ಅವರನ್ನು ಸರ್ವ ಸದಸ್ಯರು ಪಂಚಾಯತಿ ವ್ಯಾಪ್ತಿಯ ಮುಖಂಡರು ಹಾರತುರಾಯಿಗಳನ್ನು ಹಾಕುವ ಮೂಲಕ ಅಭಿನಂದಿಸಿದರು.
ಬಳಿಕ ಮಾತನಾಡಿದ ಪಂಚಾಯತಿ ಮಾಜಿ ಅಧ್ಯಕ್ಷ ಯೋಗಣ್ಣ ಪಂಚಾಯತಿಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿ ಹೆಚ್ಚಿರುತ್ತದೆ. ಪಂಚಾಯತಿ ಕಾರ್ಯಾಲಯಕ್ಕೆ ಬರುವ ಜನರನ್ನು ಅಲೆಸಬೇಡಿ ಅವರವರ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ಮಾಡಿಕೊಡುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.ಗೆಲ್ಲುವ ತನಕ ರಾಜಕಾರಣ, ಪಕ್ಷಗಳನ್ನು ಮಾಡಿ.ಗೆದ್ದ ನಂತರ ರಾಜಕಾರಣ ಬದಿಗೊತ್ತಿ, ಪಕ್ಷಬೇಧ ಮರೆತು ಪಂಚಾಯತಿ ಅಭಿವೃದ್ಧಿಗೆ ಕಾರಣರಾಗಬೇಕು.ಜನರು ನಿಮ್ಮ ಮೇಲೆ ಭರವಸೆಯನ್ನು ಇಟ್ಟುಕೊಂಡಿರುತ್ತಾರೆ.ಅದಕ್ಕೆ ತಕ್ಕಂತೆ ಕಾರ್ಯಭಾರವನ್ನು ನಿರ್ವಹಿಸುವಂತೆ ಅಧ್ಯಕ್ಷರು ಉಪಾಧ್ಯಕ್ಷರಿಗೆ ಕಿವಿಮಾತು ಹೇಳಿದರು.

ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊಸಳೆಕೊಪ್ಪಲು ಮಂಜುನಾಥ್ ಅಭಿನಂದನೆ ಸ್ವೀಕರಿಸಿ ಮಾತನಾಡಿ ನನ್ನ ಗೆಲುವಿಗೆ ಸಹಕಾರ ಮಾಡಿದ ನನ್ನ ಸಹೋದ್ಯೋಗಿಗಳು, ನಮ್ಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಮುಖಂಡರಿಗೆ, ಹಿತೈಷಿಗಳಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ನನ್ನ ಅಧಿಕಾರದ ಅವಧಿಯಲ್ಲಿ ಪಕ್ಷ ಭೇದ ಮರೆತು ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮೂಲಭೂತ ಸೌಕರ್ಯಗಳ ಬಗ್ಗೆ ಕಾಳಜಿಯನ್ನು ವಹಿಸುತ್ತೇನೆ.ರಸ್ತೆ ಚರಂಡಿ ಅಭಿವೃದ್ಧಿ, ಶುದ್ಧ ಕುಡಿಯುವ ನೀರು ಸರಬರಾಜು, ಬೀದಿ ದೀಪಗಳ ಅಭಿವೃದ್ಧಿ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಚುನಾವಣೆಯಲ್ಲಿ ಪ್ರತ್ಯೇಕ್ಷವಾಗಿ ಪರೋಕ್ಷವಾಗಿ ಸಹಕಾರ ಮಾಡಿದ ಪಂಚಾಯತಿ ಮಾಜಿ ಅಧ್ಯಕ್ಷ ಚೌಡೇನಹಳ್ಳಿ ನಾಗರಾಜು, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಬಳ್ಳೇಕೆರೆ ಸುರೇಶ್, ಮಾಜಿ ಅಧ್ಯಕ್ಷ ಜವರೇಗೌಡ, ಪಿ.ಪ್ರವೀಣ್, ಬಿಕೆ ರಮೇಶ್, ಸಂಜೀವಪ್ಪ, ಬಸವೇಗೌಡ,ಪಂಚಾಯತಿ ಅಧ್ಯಕ್ಷೆ ರಾಣಿಪರಮೇಶ್,ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ, ಮಾಜಿ ಸದಸ್ಯ ಅಶೋಕ್, ನಾಗೇಶ್, ಹಾಲಿ ಸದಸ್ಯರಾದ ಅರ್ಪಿತಾಲೋಕೇಶ್,ಮಾಜಿ ಉಪಾಧ್ಯಕ್ಷ ಹೆಮ್ಮಡಹಳ್ಳಿ ತಿಮ್ಮೇಗೌಡ, ಅನುರಾಧಾ ಮಂಜುನಾಥ್, ಮಂಜುಳಾ,ಜಯಣ್ಣ,ಶಿವರಾಜ್,ಮಾಜಿ ಅಧ್ಯಕ್ಷ ಶಂಕರ್ ,ಹನುಮೇಗೌಡ ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ ಆರ್.