ಕೆ.ಆರ್.ಪೇಟೆ:ಡೇರಿಗಳಿಗೆ ಕಳಪೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದು ಅಕ್ಷಮ್ಯ ಅಪರಾಧ ಎಂದು ಉತ್ಪಾದಕರಿಗೆ ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು .
ತಾಲೂಕಿನ ಲಕ್ಷ್ಮಿಪುರ,ಕಾಗೇಪುರ,ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಮಾಹ ಸಭೆ ಉದ್ಘಾಟಿಸಿ ಮಾತನಾಡಿದರು.
ಹಿತಾಸಕ್ತಿಗಾಗಿ ಕೆಲವರು ಕಳಪೆ ಗುಣಮಟ್ಟದ ಹಾಲು ಹಾಕುತ್ತಾರೆ. ಸಿಬ್ಬಂದಿಗೆ ಬೆದರಿಕೆಯೊಡ್ಡುತ್ತಾರೆ. ಇಂತಹ ಕ್ರಮಗಳಿಂದ ಸಂಘದ ಅಭಿವೃದ್ಧಿ ಕುಂಠಿತವಾಗುತ್ತದೆ. ಯಾರೇ ಆಗಲಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆಯೊಡ್ಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಸಂಘ-ಸಂಸ್ಥೆಗಳಲ್ಲಿ ಹಲವು ಭಿನ್ನಾಭಿಪ್ರಾಯಗಳು ಸಹಜ. ಎಲ್ಲವನ್ನೂ ಬದಿಗೊತ್ತಿ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿ ಕೆಲಸ ಮಾಡುವುದು ಅಗತ್ಯ. ಹಾಲು ಉತ್ಪಾದಕರ ಸಹಕಾರ ಸಂಘ ಗಳಿಗೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡ ಬೇಕು.ಇದರಿಂದ ಸಂಘ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದರು.
ಸಂಘದ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾರ್ಗ ವಿಸ್ತರಣಾಧಿಕಾರಿಗಳಾದ ನಾಗಪ್ಪ ಅಲ್ಲಿಬಾದಿ, ಬಿ ಸಿ ಮಧು, ಲಕ್ಷ್ಮಿಪುರ ಸಂಘದ ಅಧ್ಯಕ್ಷ ಪ್ರಕಾಶ್,ಉಪಾಧ್ಯಕ್ಷ ಅನುಸೂಯ, ನಿರ್ದೇಶಕರಾದ ಚಂದ್ರೆಗೌಡ, ನಾಗರಾಜೇಗೌಡ, ಎಲ್. ಬಿ ಚಲುವರಾಜು, ಬಸವರಾಜು, ಎಲ್. ಬಿ ವಿಜಯಕುಮಾರ್, ರವಿ, ಬಸವರಾಜು, ಪರಮೇಶ್, ಸುಶೀಲಮ್ಮ, ಜಯಲಕ್ಷ್ಮಮ್ಮ,ಗ್ರಾ. ಪಂ ಸದಸ್ಯ ಹೇಮಂತ್ ಕುಮಾರ್,ಸಂಘದ ಕಾರ್ಯದರ್ಶಿ ರಮೇಶ್,ಹಾಲು ಪರೀಕ್ಷಕ ಮೋಹನ್ ಚಂದ್ರಕಲಾ, ಕಾಗೇಪುರ ಸಂಘದ ಅಧ್ಯಕ್ಷ ಸುಬ್ಬೇಗೌಡ, ಉಪಾಧ್ಯಕ್ಷ ಚಂದ್ರೆಗೌಡ,ನಿರ್ದೇಶಕರಾದ ವೆಂಕಟರಾಮು, ಗೋವಿಂದೇಗೌಡ, ದೇವರಾಜು, ಕೃಷ್ಣೆಗೌಡ, ಮಂಜೇಗೌಡ, ನಾಗೇಗೌಡ, ಕೃಷ್ಣಯ್ಯ, ದಮಯಂತಿ, ನಾಗಮ್ಮ, ಸಂಘದ ಕಾರ್ಯದರ್ಶಿ ಶಿವಕುಮಾರ್,ಸೇರಿದಂತೆ ಉಪಸ್ಥಿತರಿದ್ದರು.
———–-ಮನು ಮಾಕವಳ್ಳಿ ಕೆ ಆರ್ ಪೇಟೆ