ಕೆ.ಆರ್.ಪೇಟೆ: ಸಹಕಾರ ಸಂಘಗಳಲ್ಲಿ ವ್ಯವಹಾರ ಅಚ್ಚುಕಟ್ಟಾಗಿ ನಡೆದಾಗ ಮಾತ್ರ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢವಾಗುತ್ತವೆ-ಡಾಲು ರವಿ

ಕೆ.ಆರ್.ಪೇಟೆ: ಸಹಕಾರ ಸಂಘಗಳಲ್ಲಿ ವ್ಯವಹಾರ ಅಚ್ಚುಕಟ್ಟಾಗಿ ನಡೆದಾಗ ಮಾತ್ರ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢವಾಗುತ್ತವೆ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಗುಬ್ಬಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮಾಂತರ ಪ್ರದೇಶದಲ್ಲಿ ಹೈನುಗಾರಿಕೆಗೆ ಬಹಳ ಮಹತ್ವವಿದೆ, ಪ್ರತಿಯೊಬ್ಬ ರೈತರು ಉತ್ತಮವಾದ ಹಾಲನ್ನು ಸರಬರಾಜು ಮಾಡುವ ಮೂಲಕ ಸಂಘದ ಏಳಿಗೆಗೆ ಹಾಗೂ ಸರ್ವ ಸದಸ್ಯರು ಏಳಿಗೆಗೆ ಕೈಜೋಡಿಸಬೇಕು ಎಂದರು. ಹೈನುಗಾರಿಕೆಗೆ ಮಂಡ್ಯ ಹಾಲು ಒಕ್ಕೂಟದಿಂದ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಸಹಕಾರ ಮಾಡುತ್ತಾ ಬಂದಿದ್ದೇವೆ.ರೈತರಿಗೆ ಅನುಕೂಲವಾಗಲು ಮ್ಯಾಟ್, ಕಟಾವು ಯಂತ್ರ, ಹಾಲಿನ ಕ್ಯಾನುಗಳನ್ನು 50% ಸಹಾಯಧನ ನೀಡಲಾಗುತ್ತಿದೆ.

ಗುಬ್ಬಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ತಾಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಎಲ್ಲರು ಹೈನುಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ರೈತರ ಸಲಹೆ ಸಹಕಾರ ಪಡೆದು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಮಾರ್ಗ ವಿಸ್ತರಣಾಧಿಕಾರಿ ಬಿ.ಸಿ ಮಧು ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್‌ನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಮಹದೇವಮ್ಮ ರುದ್ರೇಗೌಡ, ಉಪಾಧ್ಯಕ್ಷೆ ಪಾರ್ವತಮ್ಮ, ನಿರ್ದೇಶಕರಾದ ವಿಶಾಲಾಕ್ಷಿ, ಪಾರ್ವತಮ್ಮ, ಸರೋಜಮ್ಮ, ಗೌರಮ್ಮ ಭಾಗ್ಯಮ್ಮ, ರಾಜಮ್ಮ, ಪಾರ್ವತಮ್ಮ, ಅನಿತ, ಮಂಜುಳ,ಸಂಘದ ಕಾರ್ಯದರ್ಶಿ ಹರ್ಷಿತಾ ಪುಟ್ಟಸ್ವಾಮಿ, ಹಾಲು ಪರೀಕ್ಷಕಿ ರಾಧಮ್ಮ, ಇಂದ್ರಮ್ಮ,ಗ್ರಾ. ಪಂ ಸದಸ್ಯರಾದ ಚಂದ್ರಪ್ಪ, ಲಕ್ಷ್ಮಿ ಕುಮಾರ್,ಸೇರಿದಂತೆ ಇತರರು ಉಪಸ್ಥಿತರಿದ್ದರು.

————————–ಮನು ಮಾಕವಳ್ಳಿ ಕೆ ಆರ್ ಪೇಟೆ.

Leave a Reply

Your email address will not be published. Required fields are marked *

× How can I help you?