ಕೊರಟಗೆರೆ :- ಮಕ್ಕಳಲ್ಲಿ ಸಹಭೋಜನದ ಸಂಸ್ಕೃತಿಯನ್ನು ಬೆಳೆಸುವ ಮತ್ತು ಊಟದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪಟ್ಟಣದ ಕನ್ನಿಕಾ ವಿದ್ಯಾ ಪೀಠ ಶಾಲೆಯಲ್ಲಿ ಮಾತೃ ಭೋಜನ ಕಾರ್ಯಕ್ರಮ ಆಯೋಜಿಸಲಾಯಿತು.
ಶುಕ್ರವಾರ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳನ್ನು ತಮ್ಮ ತಾಯಂದಿರೊಂದಿಗೆ ಆಹಾರ ಸೇವನೆ ಮಾಡಲು ಪ್ರೋತ್ಸಾಹಿಸಲಾಯಿತು.
ಶಾಲೆಯ ಕಾರ್ಯದರ್ಶಿ ಕೆ.ಎಸ್.ವಿ. ರಘು ಕಾರ್ಯಕ್ರಮವನ್ನು ಉದ್ಘಾಟಿಸಿ,ಮಾತೃ ಭೋಜನದ ಆಚರಣೆಯ ಹಿನ್ನೆಲೆ, ಕುಟುಂಬದ ಒಗ್ಗೂಡಿಸುವಿಕೆ ಮತ್ತು ಪೋಷಕರ ಜೊತೆ ಸಹಭೋಜನದ ಮಹತ್ವ ಕುರಿತು ವಿವರಿಸಿದರು.
ಮಕ್ಕಳಲ್ಲಿ ಸಂಸ್ಕಾರ, ಸಹಾನುಭೂತಿ ಮತ್ತು ಸಹಭಾಗಿತ್ವದ ಮನೋಭಾವ ಬೆಳೆಸಲು ಈ ರೀತಿಯ ಕಾರ್ಯಕ್ರಮಗಳು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಡಿ.ಎಂ.ಶಿಕ್ಷಕಿಯರಾದ ಶಾಂತಕುಮಾರಿ,ಎಂ.ಆರ್. ದಿವ್ಯಶ್ರೀ, ಪಾಲಕರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಮಧುರ ಕ್ಷಣಗಳ ಸವಿದ ಈ ಕಾರ್ಯಕ್ರಮ ಮಕ್ಕಳು ಮತ್ತು ಪೋಷಕರಿಗೆ ಸ್ಮರಣೀಯ ಅನುಭವ ಒದಗಿಸಿತ್ತು.
– ಶ್ರೀನಿವಾಸ್ ಕೊರಟಗೆರೆ