ಮೂಡಿಗೆರೆ:ಸರ್ಕಾರಿ ನೌಕರರ ಮನಸ್ಸು ಮತ್ತು ದೇಹ ಸಮತೋಲನದಿಂದ ಇರಬೇಕು.ಆಗ ಮಾತ್ರ ಕೆಲಸ ಮುಗಿಸಿ ಸಂಜೆ ಉತ್ಸಾಹದಿಂದ ಮನೆಗೆ ಹೋಗಲು ಸಾಧ್ಯ.ಸರ್ಕಾರಿ ನೌಕರರು ಮಾನಸಿಕವಾಗಿ,ಬಲಿಷ್ಠರಾಗುವಂತೆ ಅವರ ಬೆಂಬಲಕ್ಕೆ ನಿಲ್ಲಬೇಕಾದದ್ದು ಸರಕಾರಿ ನೌಕರರ ಸಂಘದ ಜವಾಬ್ದಾರಿಯಾಗುತ್ತದೆ ಎಂದು ರಾಜಶೇಖರ್ ಮೂರ್ತಿ ಹೇಳಿದರು.
ಅವರು ಸೋಮವಾರ ಸಂಜೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1982ರಲ್ಲಿ ರಾಜ್ಯಲ್ಲಿ 3 ಕೋಟಿ ಜನಸಂಖ್ಯೆಯಿತ್ತು. ಆಗ 6 ಲಕ್ಷ ನೌಕರರಿದ್ದರು.ಜನಸಂಖ್ಯೆ ಆಧಾರದ ಮೇಲೆ ಇಂತಿಷ್ಟೇ ಸರ್ಕಾರಿ ನೌಕರರಿರಬೇಕೆಂಬ ನಿಯಮವಿದೆ. ಆದರೆ ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆ ದಾಟಿದರೂ ನಮ್ಮಲ್ಲಿ 6 ಲಕ್ಷ ನೌಕರರಿಲ್ಲ.2.86 ಲಕ್ಷ ಹುದ್ದೆಗಳು ಖಾಲಿ ಇದೆ. ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ.ಆದರೂ ಜನರ ಬೇಡಿಕೆ ನಿರೀಕ್ಷೆಗೆ ತಕ್ಕಂತೆ ನೌಕರರು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದಲ್ಲಿ ನಿರ್ದೇಶಕ ಹಾಗೂ ಅಧ್ಯಕ್ಷರಾಗುವವರೆಗೆ ಇರುವ ಉತ್ಸಾಹ ನಂತರ ಇರುವುದಿಲ್ಲ. ಇದು ಆಗಬಾರದು. ಕುಗ್ಗಿ ಹೋಗುವ ಮನಸ್ಥಿತಿಯಿಂದ ಹೊರ ಬರುವಂತೆ ಮನೋ ವೈಜ್ಞಾನಿಕ ತರಬೇತಿ ಕೊಡಿಸುವ ಕೆಲಸ ಸಂಘಟನೆಯಿoದ ಆಗಬೇಕು ಎಂದು ಹೇಳಿದರು.
ಪದಗ್ರಹಣದಲ್ಲಿ ನಿರ್ದೇಶಕರ ಗೈರು
ಪದಗ್ರಹಣ ಕಾರ್ಯಕ್ರಮ ಆಯೋಜನೆ ಹಾಗೂ ಕಾರ್ಯದರ್ಶಿ ಹುದ್ದೆ ಆಯ್ಕೆ ಬಗ್ಗೆ ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದರಿoದ ಶನಿವಾರ ನಡೆದ ಸಭೆಯಲ್ಲಿ ಕೆಲ ನಿರ್ದೇಶಕರು ಅಸಮಧಾನ ವ್ಯಕ್ತಪಡಿಸಿದ್ದರು. ಎಲ್ಲಾ ಪದಾಧಿಕಾರಿಗಳ ಹುದ್ದೆ ಹಂಚಿಕೆ ಮಾಡಿ ನಂತರ ಪದಗ್ರಹಣ ನಡೆಸಿದ್ದರೆ ಕಾರ್ಯಕ್ರಮಕ್ಕೆ ಮರಗು ಸಿಗುತ್ತಿತ್ತು. ಎಂದು ನಿರ್ದೇಶಕರು ಅಧ್ಯಕ್ಷರ ಗಮನ ಸೆಳೆದಿದ್ದರು. ಆದರೆ ಯಾರ ಮಾತಿಗೂ ಸೊಪ್ಪು ಹಾಕದೇ ತರಾತುರಿಯಿಂದ ಸೋಮವಾರ ಪದಗ್ರಹಣ ಕಾರ್ಯಕ್ರಮ ನಡೆಸಲಾಯಿತು. ಇದರಿಂದ 34 ನಿರ್ದೇಶಕರ ಪೈಕಿ 4 ಮಂದಿ ನಿರ್ದೇಶಕರು ವೇದಿಕೆಯ ಮೇಲೆ, ನಾಲ್ಕೈದು ಮಂದಿ ವೇದಿಕೆಯ ಕೆಳಗೆ ಕಾಣುತ್ತಿದ್ದರು.
ಕೆಲ ನಿರ್ದೇಶಕರು ರಾಜಕಾರಣಿಗಳಂತೆ ದಿಢೀರ್ ಭೇಟಿ ನೀಡಿ ಹೋದರೆ, ಇನ್ನು ಕೆಲವರು ಗೈರು ಹಾಜರಾಗಿರುವುದು ಕಂಡು ಬಂದಿತು.
ಕಾರ್ಯಕ್ರಮದ ಕಾರ್ಯಕ್ರಮದ ಅಧ್ಯಕ್ಷತೆ ನೌಕರರ ಸಂಘದ ಅಧ್ಯಕ್ಷ ನವೀನ್ ವಹಿಸಿದ್ದರು. ತಾ.ಪಂ. ಇಒ ದಯಾಪತಿ, ಬಿಇಒ ಮೀನಾಕ್ಷಿ, ಸಂಘದ ಕಾರ್ಯದರ್ಶಿ ಮಲ್ಲಪ್ಪ,ಖಜಾಂಚಿ ದಿನೇಶ್, ರಾಜ್ಯ ಪರಿಷತ್ ಸದಸ್ಯ ಪ್ರವೀಣ್, ಹೊಸ್ಕೆರೆ ರಮೇಶ್, ಚಂದ್ರಶೇಖರ್, ಲಕ್ಷö್ಮಣ,ರಾಜೇಶ್, ಸುರೇಂದ್ರ ಮತ್ತಿತರರಿದ್ದರು.
———–ವಿಜಯ್ ಕುಮಾರ್ ಟಿ