ಸಕಲೇಶಪುರ-ಕಾಂಗ್ರೆಸ್ ವೈಫಲ್ಯಗಳ ಜನರಿಗೆ ಮುಟ್ಟಿಸಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು-ಶಾಸಕ ಸಿಮೆಂಟ್ ಮಂಜು ಕರೆ

ಸಕಲೇಶಪುರ-ಬಿಜೆಪಿಯ ಪ್ರಜ್ಞಾವಂತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿ ಜನರನ್ನು ಜಾಗ್ರತಿ ಗೊಳಿಸುವ ಕೆಲಸ ಮಾಡಬೇಕು,ಪ್ರಧಾನಿ ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನು ಮುಟ್ಟಿಸಿ ನಮ್ಮ ಪಕ್ಷದ ಸದಸ್ಯರನ್ನಾಗಿವತ್ತ ಗಮನ ಹರಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಕರೆ ನೀಡಿದರು.

ನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ವಿಶ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸದಸ್ಯರನ್ನು ಹೊಂದಿ ಬಲಿಷ್ಠವಾಗಿದೆ.ಇನ್ನು ಹೆಚ್ಚು ಬಲಿಷ್ಠವಾಗಬೇಕೆಂದರೆ ಈ ಸದಸ್ಯತ್ವ ಅಭಿಯಾನವನ್ನು ನಾವುಗಳು ಅತ್ಯಂತ ಯಶಸ್ವಿಗೊಳಿಸಬೇಕು.ಆಡಳಿತ ಪಕ್ಷದ ಹಗರಣಗಳಿಂದ ಜನ ಬೇಸತ್ತು ಹೋಗಿದ್ದಾರೆ ಅವರ ಮನೆ-ಮನಗಳನ್ನು ಮುಟ್ಟಿ ನಮ್ಮ ಪಕ್ಷಕ್ಕೆ ಕರೆತರುವ ಕೆಲಸವನ್ನು ಎಲ್ಲರು ಸೇರಿ ಮಾಡೋಣ ಎಂದರು.

ಈ ಹಿಂದೆ ಬಿಜೆಪಿ ಎಂದರೆ ಮೇಲ್ವರ್ಗದವರ ಪಕ್ಷ ಎನ್ನುತ್ತಿದ್ದರು.ಆದರೀಗ ಎಲ್ಲ ವರ್ಗದವರೂ ಪಕ್ಷದಲ್ಲಿ ಇದ್ದಾರೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದು ನಮ್ಮ ಸಿದ್ಧಾಂತವಾಗಿದೆ’ ಎಂದರು.

ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತನೊಬ್ಬ ಉನ್ನತ ಹುದ್ದೆ ಅಲಂಕರಿಸಲು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ.ತಾಲೂಕು ಪಂಚಾಯತಿ ಸದಸ್ಯರಾಗಿದ್ದವರು ಶಾಸಕನಾಗಬಹುದು ಎಂದರೆ ಅದಕ್ಕೆ ಸಿಮೆಂಟ್ ಮಂಜು ರವರು ಸಾಕ್ಷಿ ಎಂದರು.ಇಡೀ ಜಿಲ್ಲೆಯಲ್ಲಿ ಸಕಲೇಶಪುರ ಮಂಡಲ ಅತ್ಯಂತ ಕ್ರಿಯಾಶೀಲತೆಯಿಂದ ಕೂಡಿದೆ.ಕಾಂಗ್ರೆಸ್ ಸರಕಾರ ವಿರುದ್ಧ ನಡೆದ ಮೈಸೂರ್ ಚಲೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದು ಸಂತೋಷದ ವಿಷಯ ಎಂದರು.

ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಮಾತನಾಡಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡುವ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಅಭಿನಂದಿಸಲಾಗುವುದು.ಭಾಜಪದ ತಾಲೂಕು ಮಂಡಲದ ಪದಾಧಿಕಾರಿಗಳು,ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳನ್ನು ಇನ್ನು ಕೆಲವೇ ದಿನಗಳಲ್ಲಿ ನೇಮಕ ಮಾಡಲಾಗುವುದು.ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ, ಕ್ರಿಯಾಶೀಲತೆಯೊಂದಿಗೆ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ ಮುಂಬರುವ ಚುನಾವಣೆಯಲ್ಲಿ ಮನ್ನಣೆ ಸಿಗಲಿದೆ ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್,ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಧು ಬೊಮ್ಮನಕೆರೆ, ಅಗ್ನಿ ಸೋಮಶೇಖರ್ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದ ಜಿಲ್ಲಾ ಸಹ ಸಂಚಾಲಕರಾದ ರಾಜಕುಮಾರ್, ಮಂಡಲದ ಮಾಜಿ ಅಧ್ಯಕ್ಷರಾದ ಪ್ರತಾಪ್, ಸಂಸ್ಥಾಪಕ ಅಧ್ಯಕ್ಷರಾದ ರಾಮಚಂದ್ರ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

————-——–ರಕ್ಷಿತ್ ಎಸ್ ಕೆ

Leave a Reply

Your email address will not be published. Required fields are marked *

× How can I help you?