ಮೈಸೂರು-ಸರಸ್ವತಿಪುರಂ ಪಾರ್ಕ್ನಲ್ಲಿ ರಾತ್ರಿ ಸಮಯದಲ್ಲಿ ಪುಂಡರು ಗುಂಪುಸೇರಿ ಗುಂಡು-ತುಂಡಿನ ಪಾರ್ಟಿ ನಡೆಸುತ್ತಿದ್ದು ಅದಕ್ಕೆ ಪರಿಹಾರ ಒದಗಿಸಿಕೊಡಬೇಕು ಎಂದು ನಾಗರೀಕರು ಕೆ ಆರ್ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸರಿಗೆ ಮನವಿ ಮಾಡಿದರು.
ಇಂದು ಸರಸ್ವತಿಪುರಂ ನ ಕುವೆಂಪು ಶಾಲೆಯಿಂದ ಪಾದಯಾತ್ರೆಯನ್ನು ಪ್ರಾರಂಭ ಮಾಡಿ ಸರಸ್ವತಿಪುರಂ 12,13,14,15 ನೇ ಬೀದಿಗಳಿಗೆ ಶಾಸಕರು ತೆರಳಿದಾಗ ಅಲ್ಲಿನ ನಿವಾಸಿಗಳು ಪುಂಡರ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು.ತಕ್ಷಣ ಸ್ಥಳದಲ್ಲೇ ಇದ್ದ ಪೊಲೀಸ್ ಅಧಿಕಾರಿ ನಾಗರಾಜ್ ರವರಿಗೆ ರಾತ್ರಿ ಗಸ್ತನ್ನು ಹೆಚ್ಚಿಸಿ ಪಾರ್ಕ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಲು ಶಾಸಕರು ಸೂಚಿಸಿದರು.
ಬೆಳಗ್ಗೆ ಪಾದಯಾತ್ರೆ ಪ್ರಾರಂಭಿಸಿದ ಶಾಸಕರು ನಿವಾಸಿಗಳ ಬಹಳಷ್ಟು ಕುಂದುಕೊರತೆಗಳನ್ನು ಸ್ಥಳದಲ್ಲೇ ಬಗೆಹರಿಸಿದರು.ನೀರು,ರಸ್ತೆ,ಹಾಗು ಚರಂಡಿಗಳು ಕಟ್ಟುವುದು ಇತ್ಯಾದಿ ಸಮಸ್ಯೆಗಳನ್ನು ನಿವಾಸಿಗಳು ತೆರೆದಿಟ್ಟರು.ಸ್ಥಳದಲ್ಲಿದ್ದ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗೆ ಈ ತೊಂದರೆಗಳ ಬಗ್ಗೆ ತುರ್ತು ಗಮನ ಹರಿಸುವಂತೆ ಶಾಸಕರು ಸೂಚಿಸಿದರು.
ಪಾರ್ಕ್ ನ ಒಳಗೆ ಶೌಚಾಲಯವೊಂದನ್ನು ನಿರ್ಮಾಣ ಮಾಡಿಕೊಡುವಂತೆ ಹಿರಿಯ ನಾಗರೀಕರು ಬೇಡಿಕೆ ಇಟ್ಟರು.ಇದಕ್ಕೆ ಸ್ಪಂದಿಸಿದ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಮಿಸಿಕೊಡುವ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಎ.ಇ. ಇ ಧನುಷ್,ಆರೋಗ್ಯ ಅಧಿಕಾರಿ ಪ್ರಭಾಕರ್,ಅಧಿಕಾರಿ ಬಸವಣ್ಣ ,ವಾಟರ್ ಸಪ್ಲೈಯರ್ ಮಂಜುನಾಥ್, ಮಾಜಿ ಮಹಾಪೌರರಾದ ಶಿವಕುಮಾರ್, ,ಉಪೇಂದ್ರ,ಶ್ರೀನಿವಾಸ್,ರಮೇಶ್,ಲಕ್ಷ್ಮಣ್,ರಾಮದಾಸ್, ದೀಪಕ್,ಜೋಗಿ ಮಂಜು,ರಾಕೇಶ್ ಗೌಡ,ಜಯರಾಮ್,ಪ್ರದೀಪ್,ಕಿಶೋರ್,ಗುರುದತ್ತ,ಪಾರ್ಥ ಸಾರಥಿ,ನಿಶಾಂತ್, ಆಪ್ತ ಸಹಾಯಕ ಆದಿತ್ಯ ಮುಂತಾದವರು ಇದ್ದರು.
———————–ಮಧುಕುಮಾರ್