ಬಣಕಲ್-ಮನೆಯಂಗಳದಲ್ಲಿ-ತಿಂಗಳ-ಸಾಹಿತ್ಯ-ಹಾಗೂ-ಸುಗ್ಗಿ- ಕಾಲದಲ್ಲಿ-ಜಾನಪದ-ಸಂಭ್ರಮ-ಕಾರ್ಯಕ್ರಮ

ಬಣಕಲ್ – ಹೋಬಳಿ ಘಟಕದ ವತಿಯಿಂದ ನಡೆದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಮತ್ತು ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ದೀಪಕ್ ದೊಡ್ಡಯ್ಯ ಸರ್ ಜಾನಪದ ಸಾಹಿತ್ಯ ಬೇರು ಇದ್ದಂತೆ ಹಳ್ಳಿಯ ಜನರ ಜೀವನ ಜಗತ್ತಿಗೆ ಮಾದರಿ ಬಸವಣ್ಣ .ಸಂತರು. ಶರಣರು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತ ಮಾಡಿದವರು. ವಚನ ಸಾಹಿತ್ಯ, ಚುಟುಕು ಸಾಹಿ,ತ್ಯ ನವ್ಯ ಸಾಹಿತ್ಯದ ಬಗ್ಗೆ ತಿಳಿಸಿ ಕೊಟ್ಟರು.

ಜಿಲ್ಲಾ ಸಂಚಾಲಕರಾದ ಮಗ್ಗಲಮಕ್ಕಿ ಗಣೇಶ್ ಸರ್ ಮಾತಾಡಿ ಈ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ರಾಜ್ಯದಲ್ಲಿ ಶುದ್ಧಿ ಮಾಡಿದ್ದು ಬಣಕಲ್ ಹೋಬಳಿ. ಎಂದು ಹೇಳಿ ದಿವಂಗತ ಮೋಹನ್ ಕುಮಾರ್ ಶೆಟ್ರು ಮಾಜಿ ಅಧ್ಯಕ್ಷರು ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ದೊಡ್ಡ ಶಕ್ತಿ ಆಗಿದ್ದರು ಎಂದು ಅವರ ಕೆಲಸದ ಬಗ್ಗೆ ನೆನಪು ಮಾಡಿದರು.

ಈ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ. ನೌಶಿಬ ಶಿಕ್ಷಕಿ ಕೂಟ್ಟಿಗೆಹಾರ ಪ್ರೌಢಶಾಲೆ ಮತ್ತು ಸಮಾಜ ಸೇವಾಕರಾದ ರಾಮಚಂದ್ರ ಇವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುವ ಸಾಹಿತಿಗಳಾದ ಶಾಲಿನಿ ಜೀವನ್ ಕುಂದುರು.ಲಕ್ಷ್ಮಣ್ ಹೊಸಳ್ಳಿ. ಮೀನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಕಬಡ್ಡಿ ಆಟದಲ್ಲಿ ಚಿನ್ನದ ಪದಕ ಗೆದ್ದ ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಕಿತ ಮತ್ತು ಶರಣ್ಯ ಹಾಗೂ ಊರಿನ ಸಾಧಕರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಲೋಕೇಶ್ ಬೆಟ್ಟಗೆರೆ ಅಧ್ಯಕ್ಷತೆ ವಹಿಸಿದ್ದು , ತಾಲೂಕು ಅಧ್ಯಕ್ಷರಾದ ಡಿ. ಕೆ.ಲಕ್ಷ್ಮಣ್ ಗೌಡ. ಬಕ್ಕಿ ಮಂಜುನಾಥ್. ಮಂಜುನಾಥ್ ರಾಥೋಡ್ ಬಿಜಾಪುರ. ನಾಟ್ಯ ರಂಜಿತ್ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಶಿವಪ್ರಸಾದ್. ಕೃಷ್ಣೇಗೌಡ. ಹೆಚ್. ಪಿ. ರವಿ ಗೌಡ. ಹೊರಟಿ ರಘ. ರಾಮಚಂದ್ರ. ಶಶಿಕಾಂತ್.ಶ್ರಿಜೀತ್.. ದೀಲಿಪ್ ಕನ್ನಗೆರೆ. ಹೆಚ್. ಬಿ. ಶಶಿಧರ್ .ಶ್ರೀಮತಿ ಸುಮ.ಲಕ್ಷ್ಮಣ್ ಹೊಸಳ್ಳಿ .ಶ್ರೀಮತಿ ಶಾಲಿನಿ ಜೀವನ್ .ಸಂಗಮ್. ಪ್ರಜ್ವಲ್. ಮಹೇಶ್ ಇದ್ದರು

Leave a Reply

Your email address will not be published. Required fields are marked *

× How can I help you?