ಕೊರಟಗೆರೆ: ತಾಲೋಕಿನ ತುಮಲ್ ನಿರ್ದೇಶಕರಾದ ವಿ. ಸಿದ್ದಗಂಗಯ್ಯ ರವರ ಅಧ್ಯಕ್ಷತೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ತಾಲೂಕಿನ ಉಪ ಕಚೇರಿಯಲ್ಲಿ ಮಾಹೆಯ ಕಾರ್ಯದರ್ಶಿಗಳ ಮಾಸಿಕ ಸಭೆಯನ್ನು ಮಾಡಲಾಗಿತ್ತು.
ತುಮಲ್ ನಿರ್ದೇಶಕ ವಿ. ಸಿದ್ದಗಂಗಯ್ಯ ಮಾತನಾಡಿ: ಕಾರ್ಯದರ್ಶಿಗಳ ಮೊದಲ ಸಭೆಯಾಗಿದ್ದು. ನನ್ನ ಗೆಲುವಿಗೆ ಸಹಕಾರ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳುತ್ತಾ. ನಿಮ್ಮ ನಿಮ್ಮ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯ ನಿರ್ವಹಣಾ ಅಧಿಕಾರಿ ಎಂಬುದನ್ನು ನೀವು ಮರೆಯಬೇಡಿ. ನಾನು ಮೊದಲನೇ ಬಾರಿಗೆ ಕಾರ್ಯದರ್ಶಿಗಳ ಪರವಾಗಿ ಮಾತನಾಡಿ. ವೇತನ ಹೆಚ್ಚು ಮಾಡುವಂತೆ ಧ್ವನಿಗೂಡಿಸಿದ್ದು. ಒಂದು ವರ್ಷ ಎರಡು ವರ್ಷ ಬದಲಾವಣೆ ತನ್ನಿ. ಡೈರಿಯಲ್ಲಿ ಸ್ವಚ್ಛತೆ ಕಾಪಾಡಿ. ನಿಮ್ಮ ಕೆಲಸವನ್ನು ನೀವೇ ಮಾಡಿ.
ಬೇರೆಯವರಿಗೆ ಬಿಟ್ಟು ಹೋಗಬೇಡಿ. ಲೆಕ್ಕಪತ್ರಗಳನ್ನು ಸರಿಯಾಗಿ ಇಡಬೇಕು. ಸಣ್ಣಪುಟ್ಟ ಬದಲಾವಣೆ ಮಾಡಿ. ಅಂದಿನ ಲೆಕ್ಕವನ್ನು ಅಂದೆ ಬರೆಯಿರಿ ನಿಮ್ಮ ಕೆಲಸವನ್ನು ಸಕ್ರಿಯವಾಗಿ ಮಾಡಿ. ನಿಮ್ಮಗಳಿಗೆ ಯಾವುದೇ ರೀತಿಯಲ್ಲಿ ಹೊರೆ ಮಾಡುವುದಿಲ್ಲ. ನಿಮ್ಮ ಡೈರಿ ಚೆನ್ನಾಗಿರಬೇಕು ಎಂದು ನಿಮ್ಮ ಅಭಿಲಾಷೆ ಯಾಗಿರಬೇಕು.

ಯಾರು ದೊಡ್ಡವರಲ್ಲ. ಯಾರೂ ಚಿಕ್ಕವರಲ್ಲ. ಎಲ್ಲರೂ ಜೊತೆಯಾಗಿ ಹೋಗೋಣ ಎಂದು ಹೇಳಿದರು ಹಾಗೂ ಎಲ್ಲರೂ ಕೂಡ ಯಶಸ್ವಿನಿ ಯೋಜನೆಗೆ ಮತ್ತು ಇನ್ಸೂರೆನ್ಸ್ ಮಾಡಿಸಿ ಅಂತ ಹಂತವಾಗಿ ಬರುವ ಸೌಲಭ್ಯಗಳನ್ನು ರೈತರಿಗೆ ಮಾಹಿತಿ ನೀಡಿ ತಿಳಿಸಿ ಎಂದು ಹೇಳಿದರು.
ಸಂದರ್ಭದಲ್ಲಿ ಡಾ: ರಾಮಚಂದ್ರ. ಸಹಕಾರಿ ಅಭಿವೃದ್ಧಿ ಅಧಿಕಾರಿ ಗುರುರಾಜ್. ಮುಖ್ಯಸ್ಥರಾದ ಟಿ. ಆರ್. ಪುಷ್ಪಲತಾ. ವಿಸ್ತಾರಕ ಜಯಕುಮಾರ್. ಬಷೀರಾ. ಮಹಾಲಕ್ಷ್ಮಿ. ನಂಜ ಆರಾಧ್ಯ. ಚಂದ್ರಶೇಖರಯ್ಯ. ಗೋವಿಂದರಾಜು. ತಾಲೂಕಿನ ಸಂಘದ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
- ಕೋಳಾಲ ನರಸಿಂಹಯ್ಯ