ಕೊಟ್ಟಿಗೆಹಾರ:ಅವನಿಗೆ ಅದೇನು ಬೇಸರವಾಗಿತ್ತೋ? ಸಾಯ,ಲೇಬೇಕು ಎಂದು ತೀರ್ಮಾನಿಸಿ ಚಾರ್ಮಾಡಿ ಘಾಟ್ ಗೆ ಬಂದಿದ್ದ.ಮೊದಲೇ ಸಿದ್ಧವಿಟ್ಟುಕೊಂಡಿದ್ದ ಬ್ಲೇಡ್ ತೆಗೆದು ಚರಚರನೆ ತನ್ನ ಕು,ತ್ತಿಗೆಯನ್ನು ಕೂ,ಯ್ದುಕೊಂಡ.ರ,ಕ್ತ ಸುರಿಯ ತೊಡಗಿದೊಡನೆ ಅದನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿಕೊಟ್ಟ…!!
ಹಾಸನ ಮೂಲದವನು…
ಹೀಗೆ ಚಾರ್ಮಾಡಿ ಘಾಟ್ ನ ಏಕಲವ್ಯ ಶಾಲೆಯ ಬಳಿಯಲ್ಲಿ ಆ,ತ್ಮಹ,ತ್ಯೆಗೆ ಯತ್ನಿಸಿದವನ ಹೆಸರು ಮನು.ಹಾಸನ ಮೂಲದವನು.
ತಾನು ಆ,ತ್ಮಹ,ತ್ಯೆ ಮಾಡಿಕೊಳ್ಳುತ್ತಿರುವುದನ್ನು ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿ ಸಾ,ವನ್ನು ಎದುರುನೋಡುತ್ತ ಸುಮ್ಮನೆ ಕುಳಿತುಕೊಂಡಿದ್ದ.
ಆದರೆ ಸ್ನೇಹಿತರು ಸುಮ್ಮನಿರಲಿಲ್ಲ…
ಮನು ಕಳುಹಿಸಿದ ವಿಡಿಯೋ ನೋಡಿದ ಅವನ ಸ್ನೇಹಿತರು ಹೇಗಾದರೂ ಮಾಡಿ ಆತನ ಪ್ರಾ,ಣ ಉಳಿಸಬೇಕು ಎಂದು ಯೋಚಿಸುತ್ತಿದ್ದಾಗ ನೆನಪಾಗಿದ್ದೆ 112 ತುರ್ತು ಸಹಾಯ ಸೇವೆ.
ಕರೆ ಮಾಡಿ ಹೀಗೀಗೆ ಆಗಿದೆ ಎಂದು ಮಾಹಿತಿ ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯ 112 ಸಿಬ್ಬಂದಿ ಹರಸಾಹಸ ಪಟ್ಟು ಮನು ಇರುವ ಸ್ಥಳವನ್ನು ಪತ್ತೆ ಮಾಡಿದ್ದಾರೆ.
ಪೋಲೀಸರ ಹತ್ತಿರ ಬರಲು ಬಿಡಲಿಲ್ಲ …
ಚಾರ್ಮಾಡಿ ಘಾಟ್ ನ ಏಕಲವ್ಯ ಶಾಲೆಯ ಬಳಿಯಲ್ಲಿ ಕಂಡುಬಂದ ಮನುವನ್ನು ಪೊಲೀಸರು ಮಾತನಾಡಿಸಲು ಮುಂದಾದಾಗ ಆತ ಅವರನ್ನು ಬಳಿಗೆ ಬರಲು ಬಿಟ್ಟಿಲ್ಲ.
ಪಟ್ಟುಬಿಡದ 112 ಸಿಬ್ಬಂದಿಗಳಾದ ಬಿ ಎಸ್.ಅಭಿಷೇಕ್,ದಿಲೀಪ್,ಸುಂಕ ಬೋವಿ,ಓಂಕಾರ ನಾಯ್ಕ್ ಹರಸಾಹಸ ಪಟ್ಟು ಮನುವನ್ನು ಹಿಡಿದು ಬ್ಲೇಡ್ ಕಸಿದುಕೊಳ್ಳುವಲ್ಲಿ ಯಶ ಕಂಡಿದ್ದಾರೆ.
ಹೊಲಿಗೆ ಹಾಕಿಸಿದರು….
ಒಂದಿನಿತು ತಡಮಾಡದೆ ಮನುವನ್ನು ಬಣಕಲ್ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕೆತ್ಸೆ ಕೊಡಿಸಿ ಅಲ್ಲಿಂದ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಒಯ್ದು ಕುತ್ತಿಗೆಗೆ ಹೊ,ಲಿಗೆಯನ್ನು ಹಾಕಿಸಿ ಅವನ ಪ್ರಾ,ಣವನ್ನು ಉಳಿಸುವಲ್ಲಿ ಯಶ ಕಂಡಿದ್ದಾರೆ.
ನಂತರ ಆತನಿಂದ ಮಾಹಿತಿ ಪಡೆದು ಹೆಂಡತಿಯನ್ನು ಕರೆಸಿ ಬುದ್ಧಿವಾದವನ್ನು ಹೇಳಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.
ಒಟ್ಟಾರೆ ಮನುವಿನ ಸ್ನೇಹಿತರ ಸಮಯಪ್ರಜ್ಞೆ 112 ಸಿಬ್ಬಂದಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಮುಗಿದು ಹೋಗಲಿದ್ದ ವ್ಯಕ್ತಿಯೊಬ್ಬನ ಬದುಕು ಉಳಿದಂತಾಗಿದೆ.
ತಪ್ಪು ಬಳಕೆ ಮಾಡಿಕೊಳ್ಳುವವರೇ ಹೆಚ್ಚು..
ಸರಕಾರ ತುರ್ತು ಸನ್ನಿವೇಶಗಳ ನಿಭಾಯಿಸಲೋಸ್ಕರವೇ 112 ಸಹಾಯವಾಣಿಯನ್ನು ಪ್ರಾರಂಭಿಸಿದ್ದು ಇಂತಹ ಘಟನೆಗಳು ನಡೆದಾಗ ಅದರ ಪ್ರಾಮುಖ್ಯತೆ ನಮಗೆ ಅರಿವಾಗುತ್ತದೆ.
ಇತ್ತೀಚಿಗೆ ಕೊಟ್ಟಿಗೆಹಾರದ ವ್ಯಕ್ತಿಯೊಬ್ಬ ಮಾವನ ಮನೆಗೆ ಮಾಂಸದೂಟಕ್ಕೆ ಹೋಗಲು 112 ಸಹಾಯವನ್ನು ಕೇಳಿ ರಾಜ್ಯದಾದ್ಯಂತ ಸುದ್ದಿಯಾಗಿದ್ದ.ಆತನ ಬೇಜವಾಬ್ದಾರಿ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
—————–ಆಶ ಸಂತೋಷ್ ಅತ್ತಿಗೆರೆ