ಮೂಡಿಗೆರೆ:ಭಾನುವಾರ ರಾತ್ರಿ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಯೊಂದು ಕಟಾವಿಗೆ ಬಂದಿರುವ ಕಾಫಿ ಗಿಡಗಳನ್ನು ಫಸಲನ್ನು ಹಾಗೂ ತೋಟದಲ್ಲಿದ್ದ ಅಡಕೆ, ಬಾಳೆ ಗಿಡಗಳನ್ನು ದ್ವಂಸಗೊಳಿಸಿ ಅಪಾರ ಹಾನಿಯುಂಟುಮಾಡಿದೆ.
ಹೆಸಗಲ್ ಗ್ರಾ.ಪಂ.ಉಪಾದ್ಯಕ್ಷ ಹೆಚ್.ಆರ್.ಆದರ್ಶ ಅವರ ಕಾಫಿ ತೋಟಕ್ಕೆ ಕಳೆದ 6 ತಿಂಗಳಿನಿoದ ಕಾಡಾನೆಗಳು ಧಾಳಿಯಿಡು ತ್ತಿದ್ದು ತೋಟದ ಗಿಡಮರಗಳನ್ನು ದ್ವಂಸಗೊಳಿಸಿ ಅಪಾರ ನಷ್ಟವನ್ನುಂಟು ಮಾಡಿವೆ. ಈಗ ಕುಯ್ಲಿಗೆ ಬಂದ ಕಾಫಿ ಗಿಡ, ಅಡಿಕೆ ಮರ, ಮತ್ತು 50ಕ್ಕೂ ಹೆಚ್ಚಿನ ಬಾಳೆಗಿಡಗಳನ್ನು ತುಂಡರಿಸಿದೆ.ಅಲ್ಲದೆ ತೋಟದಲ್ಲಿದ್ದ ಶೆಡ್ ಒಂದನ್ನು ನೆಲಸಮಗೊಳಿಸಿದೆ. ತೋಟದಲ್ಲಿ ಶೇಖರಿಸಿಡಲಾಗಿದ್ದ ಸ್ಪಿನ್ಕ್ಲರ್ ಪೈಪ್‌ಗಳನ್ನು ತುಳಿದು ಹಾಕಿದೆ. ಇದರಿಂದ ಅಪಾರ ನಷ್ಟವುಂಟಾಗಿದೆ. ಕಾಡಾನೆ ಧಾಳಿಯಿಂದ ಭಯಬೀತರಾದ ಕಾರ್ಮಿಕರು ಸೋಮವಾರ ಕಾಫಿ ಕುಯ್ಯಲು ತೋಟಕ್ಕೆ ಹೋಗಿಲ್ಲ.
ಪಟ್ಟಣದ ಸಮೀಪದಲ್ಲಿನ ತೋಟಕ್ಕೆ ನಿರಂತರವಾಗಿ ಕಾಡಾನೆಗಳು ನುಸುಳಿ ಬೆಳೆದ ಮರಗಿಡಗಳನ್ನು ನಾಶಮಾಡುತ್ತಿದ್ದು ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ತೋಟದ ಕೆಲಸ ನಿರ್ವಹಿಸಲು ಕಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಷ್ಟದ ಪರಿಹಾರ ಒದಗಿಸಿಕೊಡಬೇಕು. ಜೊತೆಗೆ ಕಾಡಾನೆಗಳನ್ನು ಹಿಡಿದು ಸಾಗಿಸಬೇಕು. ಇಲ್ಲವಾದರೆ ಕಾಫಿ ತೋಟವನ್ನು ಪಾಳುಬಿಡುವ ಪರಿಸ್ಥಿತಿ ಬರಲಿದೆ ಎಂದು ತೋಟದ ಮಾಲೀಕ ಹೆಚ್.ಆರ್.ಆದರ್ಶ ಮನನೊಂದು ಹೇಳಿದರು.
ವರದಿ:ವಿಜಯಕುಮಾರ್.ಟಿ, ಮೂಡಿಗೆರೆ.