ಮೂಡಿಗೆರೆ:1935ರಿಂದ 1946ರವರೆಗೆ ಮೇಲ್ವರ್ಗದ ದಬ್ಬಾಳಿಕೆ ವಿರುದ್ದ ನಿರಂತರವಾಗಿ ಹೋರಾಟ ನಡೆಸಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಾಷ್ಟ್ರಕ್ಕೆ ಅರ್ಪಿಸುವ ಮೂಲಕ ಗೆಲವು ಸಾಧಿಸಿದ್ದರು ಎಂದು ಕರ್ನಾಟಕ ಬೌದ್ದ ಸಮಾಜದ ರಾಜ್ಯಾಧ್ಯಕ್ಷ ಡಾ.ಹ.ರಾ.ಮಹೇಶ್ ಹೇಳಿದರು.
ಅವರು ಶುಕ್ರವಾರ ಸಂಜೆ ಪಟ್ಟಣದಲ್ಲಿ ನಡೆದ ಭೀಮಾ ಕೊರೆಗಾಂವ್ ವಿಜಯೋತ್ಸವ ಸಮಿತಿಯಿಂದ ಏರ್ಪಡಿಸಿದ್ದ 207ನೇ ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಕೋರೆಂಗಾವ್ ದಲಿತರ ವಿಜಯೋತ್ಸವವೆಂಬ ತಪ್ಪು ಪಟ್ಟಿ ಹಚ್ಚಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ವಿವಿಧ ಸಮುದಾಯದ ಸೈನಿಕರಿದ್ದರೂ ಕೂಡಾ ಕೊರೆಗಾಂವ್ ವಿಜಯೋತ್ಸವವನ್ನು ದಲಿತರು ಮಾತ್ರ ಆಚರಿಸುವಂತಾಗಿದೆ.ದೇಶದ ದಲಿತ ವರ್ಗದವರು ಮಾತ್ರ ವಿಜಯೋತ್ಸವ ಆಚರಿಸಿದರೆ ಸಾಲದು. 500 ಮಂದಿ ಮಹರ್ ಸೈನಿಕರ ಪೈಕಿ 36 ಮಂದಿ ಮುಸ್ಲಿಂ, 12 ಮಂದಿ ಕ್ರೈಸ್ತ ಸೈನಿಕರು ಹಿಂದುಳಿದ ವರ್ಗದವರು ಧಾರ್ಮಿಕ ಅಲ್ಪ ಸಂಖ್ಯಾತ ಸೈನಿಕರು ಕೂಡಾ ದಲಿತ ಸಮುದಾಯದ ಸೈನಿಕರೊಂದಿಗೆ ಸೇರಿಕೊಂಡು ಒಂದು ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ್ದರು. ಹಾಗಾಗಿ ಇದು ಎಲ್ಲಾ ಶೋಷಿತರ ವಿಜಯೋತ್ಸವದ ದಿನ ಎಂದು ಹೇಳಿದರು.
ಈಸ್ಟ್ ಇಂಡಿಯಾ ಕಂಪನಿಯನ್ನು ಹಿಡಿದು ಭಾರತಕ್ಕೆ ಬಂದಿದ್ದ ಭ್ರಿಟೀಷರು ಇಲ್ಲಿನ ಪ್ರಜೆಗಳನ್ನು ಶೈಕ್ಷಣಿಕವಾಗಿ 235ವರ್ಷ ದೂರವಿಟ್ಟರು. ತುಳಿತಕ್ಕೊಳಗಾಗಿ ಎಲ್ಲಾ ವರ್ಗದವರನ್ನು ಒಗ್ಗೂಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಎಲ್ಲರಿಗೂ ಶಿಕ್ಷಣ
ದೊರಕುವಂತಾಗಿದೆ.ಸoವಿಧಾನವನ್ನು ದೊರಕಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದೇಶದ ಕುತಂತ್ರವಾದಿ ರಾಜಕೀಯ ಪಕ್ಷಗಳು ಹಣ, ಹೆಂಡ ಹಂಚಿ ಚುನಾವಣೆಯಲ್ಲಿ ಸೋಲಿಸಿದ್ದರು. ಅಂದು ಅಂಬೇಡ್ಕರ್ ಅವರ ವಿರುದ್ದ ನಡೆಸಿದ್ದ ಸಂಚು ಈಗಲೂ ಮುಂದುವರಿದಿದೆ. ನಂತರ ಪಶ್ಚಿಮ ಬಂಗಾಳದ ಕುಲ್ನಾ ಅಂಡ್ ಜೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪಧಿಸಲು ಅಂಬೇಡ್ಕರ್ ಅವರಿಗೆ ಮುಸ್ಲಿಂ, ಮತ್ತು ಒಬಿಸಿಗಳು ಬೆಂಬಲ ನೀಡಿ ಅವರನ್ನು ಆ ಕ್ಷೇತ್ರದಿಂದ ಗೆಲ್ಲಿಸಿದ್ದರು.ಅಂಬೇಡ್ಕರ್ ಅವರು ಪ್ರತಿನಿಧಿಸಿದ್ದ ಆ ಕ್ಷೇತ್ರವನ್ನು ಅಂದಿನ ಆಡಳಿತ ಬಾಂಗ್ಲಾ ದೇಶಕ್ಕೆ ಸೇರಿಸಿ ಅಂಬೇಡ್ಕರ್ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸಿದ್ದು ಇತಿಹಾಸ. ಇಂತಹ ಪರಿಸ್ತಿತಿಯಲ್ಲೂ ದೃತಿಗೆಡದೆ ಅಂಬೇಡ್ಕರ್ ದೇಶಕ್ಕೆ ಬಲಿಷ್ಟವಾದ ಸಂವಿಧಾನವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕುಶಾಲನಗರದ ಉಪನ್ಯಾಸಕ ಭಾಸ್ಕರ್ ವಿಟ್ಲಾ ಮಾತನಾಡಿ, ಇಂದು ದೇಶದ ಎಲ್ಲ ಕ್ಷೇತ್ರ ಗಳಲ್ಲಿಯೂ ಜಾತೀಯತೆ ತುಂಬಿಕೊoಡಿದೆ. ಅದನ್ನು ನಿರ್ನಾಮ ಮಾಡಲು ಸಾದ್ಯವಾಗದಷ್ಟರ ಮಟ್ಟಿಗೆ ಜಾತಿ ವ್ಯವಸ್ಥೆ ಬೆಳೆದಿದೆ.ಜಾತಿ ಪದ್ದತಿಯನ್ನು ಇಲ್ಲದಂತೆ ಮಾಡಲು ಇಂದಿನ ಆಡಳಿತ ವ್ಯವಸ್ತೆಗೆ ಶಕ್ತಿ ಸಾಲದು.ಇದರ ಸೃಷ್ಟಿಕರ್ತರೇ ಅದಕ್ಕೆ ಅಂತ್ಯ ಹಾಡಬೇಕು.ಜಾತಿ ವ್ಯವಸ್ಥೆ ಯಿಂದಾಗಿ ಸಾಮಾಜಿಕ ಪ್ರಜಾಪ್ರಭುತ್ವ ದೂರಕ್ಕೆ ಸರಿಯುತ್ತಿದೆ.ಇಂತಹ ಅನಿಷ್ಟ ಪದ್ದತಿಯ ವಿರುದ್ದ ಹೋರಾಟ ಮಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಮೋಟಮ್ಮ,ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ತಹಸೀಲ್ದಾರ್ ರಾಜಶೇಖರ್ ಮೂರ್ತಿ ಮಾತನಾಡಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸೆಯಲ್ಲಿ ಸಾವಿತ್ರಿ ಬಾಯಿ ಪುಲೆ, ಬುದ್ಧ, ಅಂಬೇಡ್ಕರ್, ಸಂವಿಧಾನ ಪೀಠಿಕೆ, ವಿಜಯೋತ್ಸವ ಸ್ತಂಭ ದೊo ದಿಗೆ ಮೆರವಣಿಗೆ ನಡೆಸಲಾಯಿತು.
ಎಲ್.ಬಿ.ರಮೇಶ್,ಯು.ಬಿ.ಮಂಜಯ್ಯ,ಡಿ.ಪಿ.ಮoಜುನಾಥ್,ಹೊಸ್ಕೆರೆ ಜಿ ರಮೇಶ್, ಕೆ.ಎಂ.ಸಿದ್ದೇಶ್, ಯು.ವಿ.ಸುರೇಂದ್ರ, ಹಾಲಯ್ಯ,ಅಂಗಡಿ ಚoದ್ರು, ಜಾಕೀರ್‌ಹುಸೇನ್,ಹೆಸ್ಗಲ್ ಗಿರೀಶ್,ಬಿ.ಎಂ.ಶoಕರ್,ಎo.ಎಸ್.ಅನoತ್, ಹೆಡದಾಳು ಅಭಿಜಿತ್, ಪಿ.ಕೆ.ಮಂಜುನಾಥ್, ಸುಧೀರ್ ಚಕ್ರಮಣಿ, ಬಿ.ಎಂ.ಕುಮಾರ್ ಮತ್ತಿತರರಿದ್ದರು.
——––ವಿಜಯಕುಮಾರ್.ಟಿ.ಮೂಡಿಗೆರೆ