ಮೂಡಿಗೆರೆ:ತಾಲೂಕಿನ ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಸ್.ನಾಗ ರಾಜ್ ಮತ್ತು ಉಪಾಧ್ಯಕ್ಷರಾಗಿ ಎಂ.ಎಸ್.ಪ್ರಸನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ಧೇಶಕ ಹಳಸೆ ಶಿವಣ್ಣ ಅವರು ನೂತನ ಅಧ್ಯಕ್ಷ ಮತ್ತು ಉಪಾದ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಕೃಷಿಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ರೈತಾಪಿ ವರ್ಗದವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ.ಸಹಕಾರ ಕ್ಷೇತ್ರದಲ್ಲಿ ಪರಸ್ಪರ ನಂಬಿಕೆ, ಪ್ರಾಮಾಣಿಕತೆ ಮುಖ್ಯವಾಗಿದ್ದು ಆಡಳಿತ ಮಂಡಳಿ,ಸಿಬ್ಬoದಿ ಮತ್ತು ಗ್ರಾಹಕರು ಸಮನ್ವತೆಯಿಂದ ಕಾರ್ಯವಹಿಸಿದರೆ ಸಂಘದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ.ದಿವಾಕರ್, ಮುಖಂಡರಾದ ದೀಪಕ್ ದೊಡ್ಡಯ್ಯ,ರಂಜನ್ ಅಜಿತ್ ಕುಮಾರ್, ಟಿ.ಎಂ.ಗಜೇoದ್ರ ವಿ.ಕೆ.ಶಿವೇಗೌಡ,ಕೆoಜಿಗೆ ಕೇಶವ, ಒ.ಜಿ.ರವಿ, ಬಿ.ಎಂ.ಬೈರೇಗೌಡ, ಬಿ.ಸಿ.ದಯಾಕರ್, ಸತೀಶ್ ಹಳೇಕೋಟೆ,ಮಹೇಶ್ ಮುಗ್ರಹಳ್ಳಿ, ಪ್ರಶಾಂತ್,ಧನಿಕ್ ಕೋಡದಿಣ್ಣೆ, ಹೆಚ್.ಎಂ.ಸತೀಶ್, ಸಚಿನ್. ಎಸ್.ಪಿ.ರಕ್ಷಿತ್ ಅಭಿನಂದನೆ ಸಲ್ಲಿಸಿದರು.
ಸಂಘದ ನಿರ್ಧೇಶಕರಾದ ವಿನಯ್ ಹಳೇಕೋಟೆ, ಬಿ.ಆರ್.ವಿನಯ್, ರಾಘವೇಂದ್ರ, ಕೆ.ಜಿ.ದೀಪ್ತಿ ರಾಧಾಕೃಷ್ಣ, ಬಿ.ಎಸ್.ಸಾವಿತ್ರಿ, ಬಿ.ಟಿ.ಶ್ರೀನಾಥ್,ಬಿ.ಸಿ.ದಿನೇಶ್, ಬಿ.ಪಿ.ರಂಗನಾಥ್,ದಿನೇಶ್ ಬಾಳೆಹಳ್ಳಿ,ರಮೇಶ್ ಹಳೇಕೋಟೆ,ಕೆ.ಮಹಮ್ಮದ್ ಜಮೀರ್,ಡಿಸಿಸಿಬ್ಯಾಂಕ್ ಮೇಲ್ವಿಚಾರಕ ನಿತಿನ್ ಪಟೇಲ್, ಸಿಇಒ ಚಂದ್ರಶೇಖರ್, ವಿವಿಧ ಪಕ್ಷಗಳ ಮುಖಂಡರುಗಳು ಬಿದರಹಳ್ಳಿ ಗ್ರಾ.ಪಂ.ಸದಸ್ಯರುಗಳು ಉಪಸ್ಥಿತರಿದ್ದರು.
——-ವಿಜಯ ಕುಮಾರ್ ಟಿ