ಮೂಡಿಗೆರೆ:ಬಿಜೆಪಿ ‘ಸಂಘಟನಾ ಪರ್ವ’ ವಿಶೇಷ ಸಭೆ-ಸಿದ್ದಾಂತವೇ ಮುಖ್ಯ-ಕಾರ್ಯಕರ್ತರೇ ಬೆನ್ನೆಲುಬು-ದೇವರಾಜ್ ಶೆಟ್ಟಿ

ಮೂಡಿಗೆರೆ:ಬಿಜೆಪಿ ಸಿದ್ದಾಂತಕ್ಕೆ ಪ್ರಾಮುಖ್ಯತೆ ನೀಡುವ ಪಕ್ಷ. ಸಿದ್ದಾಂತವೇ ನಮಗೆ ಪ್ರಮುಖವಾಗಿದೆ. ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು. ವೈಯುಕ್ತಿಕ ವಿಚಾರಗಳಿಂದ ಮತ್ತು ಪಕ್ಷದ ಸಿದ್ದಾಂತಗಳು ಮತ್ತು ತೀರ್ಮಾನಗಳನ್ನು ದಿಕ್ಕರಿಸಿ ಪಕ್ಷದಿಂದ ಹೊರನಡೆದರೆ ಅಂತಹ ವ್ಯಕ್ತಿಗಳು ಎಷ್ಟೇ ಪ್ರಮುಖ ವ್ಯಕ್ತಿಯಾಗಿದ್ದರೂ ಪಕ್ಷ ಅಂತಹ ವ್ಯಕ್ತಿಗಳಿಗೆ ಮಣೆ ಹಾಕಲು ಸಾಧ್ಯವಿಲ್ಲ. ಕಾರ್ಯಕರ್ತರು ಪಕ್ಷದ ಸಿದ್ದಾಂತವನ್ನು ಒಪ್ಪಿ ಪಕ್ಷದ ಬೆಳವಣಿಗೆಗೆ ಅಹರ್ನಿಶಿ ದುಡಿಯಲು ಮುಂದಾಗಬೇಕು ಎoದು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ ತಿಳಿಸಿದರು.

ಅವರು ಬುಧವಾರ ಪಕ್ಷದ ಸಂಘಟನಾ ಪರ್ವದ ವಿಶೇಷ ಸಭೆಯಲ್ಲಿ ಮಾತನಾಡಿ, ಪಕ್ಷದಲ್ಲಿ ಅಂತರಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಅವೆಲ್ಲವೂ ಬದಿಗಿಟ್ಟು ಕಾರ್ಯಕರ್ತರು ಪಕ್ಷ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು.ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಸಿದರೆ ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ. ಪಕ್ಷದಲ್ಲಿ ಆಂತರಿಕ ಚುನಾವಣೆ ಸಂಘಟನೆಯನ್ನು ಬಲಗೊಳಿಸಲಿದೆ. ಸಂಘಟನಾತ್ಮಕ ಜಿಲ್ಲೆಯಾಗಿ ಲೋಕಸಭೆ, ವಿಧಾನಪರಿಷತ್, ಮತ್ತು ವಿವಿಧ ಸಹಕಾರ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷ ಉತ್ತಮ ಯಶಸ್ಸು ಸಾಧಿಸಿದೆ. ಪಕ್ಷದ ಸಿದ್ದಾಂತವೇ ನಮ್ಮ ನಿಲುವಾಗಿದೆ. ಪಕ್ಷ ಮೊದಲು, ವ್ಯಕ್ತಿ ನಗಣ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಹಾಗಾಗಿ ಬೂತ್ ಮಟ್ಟದ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ಎಲ್ಲರೂ ಪಕ್ಷದ ಬೆಳವಣಿಗೆಗೆ ಶಕ್ತಿಮೀರಿ ಸಹಕಾರ ನೀಡಬೇಕು
ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರೇಂದ್ರ ಮಾತನಾಡಿ, ಪಕ್ಷದ ಆಂತರಿಕ ಸಭೆಯಲ್ಲಿ ಸಂಘಟನೆಯ ದೃಷ್ಟಿಯಲ್ಲಿ ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಬೇಕು. ಬಿಜೆಪಿ ಪದಾಧಿಕಾರಿಗಳು ಮುಂಬರಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಗಳಾಗಿ ಸಂವಿಧಾನಬದ್ದವಾಗಿ ಅಧಿಕಾರಗಳಿಸಿದ ಮೇಲೆ ತಳಮಟ್ಟದಿಂದ ಹಿಡಿದು ಪಕ್ಷಕ್ಕಾಗಿ ದುಡಿದ ಯಾರನ್ನೂ ನಿರ್ಲಕ್ಷಿಸಬಾರದು. ಬಿಜೆಪಿಯ ಸಿದ್ದಾಂತ, ಮತ್ತು ಸಂಸ್ಕೃತಿಗೆ ಇದು ಚ್ಯುತಿ ತರುತ್ತದೆ.ಎಲ್ಲರನ್ನೂ ಸಮಾನತೆ ಮತ್ತು ಒಗ್ಗಟ್ಟಿನಿಂದ ಮುನ್ನಡೆಸುವುದೇ ಪಕ್ಷದ ಧ್ಯೇಯವಾಗಿದೆ. ಕಾರ್ಯಕರ್ತರ ಸಹಕಾರದೊಂದಿಗೆ ಪಕ್ಷವನ್ನು ಕಟ್ಟಿ ಈ ಮೂಲಕ ದೇಶ ಸೇವೆ ಮಾಡುವುದೇ ಬಿಜೆಪಿ ಗುರಿಯಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಪಕ್ಷದ ಅಭ್ಯರ್ಥಿಯ ಸೋಲು ಅವರ ಸೋಲಲ್ಲ, ಇಡೀ ಕಾರ್ಯಕರ್ತರ ಸೋಲಾಗಲಿದೆ. ಹಾಗಾಗಿ ಚುನಾವಣೆಯ ಸಂಧರ್ಭದಲ್ಲಿ ಯಾವುದೇ ಚಿಕ್ಕಪುಟ್ಟ ತಪ್ಪು ಕಂಡುಬoದರೂ ಯಾರೊಬ್ಬರೂ ಭಿನ್ನಮತ ಮಾಡದೆ ಒಗ್ಗಟ್ಟಿನಿಂದ ಪಕ್ಷವನ್ನು ಗೆಲ್ಲಿಸುವತ್ತ ಪಕ್ಷ ಸಂಘಟನೆಗೆ ಮುಂದಾಗೋಣ ಎಂದರು.

ಮoಡಲ ಅಧ್ಯಕ್ಷ ಟಿ.ಎಂ.ಗಜೇoದ್ರ ಮಾತನಾಡಿ, ಸಕ್ರಿಯ ಸದಸ್ಯತ್ವವನ್ನು ನಮ್ಮ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಅತ್ಯುತ್ತಮವಾಗಿ ನಿರ್ವಹಿಸಿದ್ದು ಮುಂದಿನ ಮೂರು ವರ್ಷಗಳು ಎಲ್ಲರೂ ಅವಿರತವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ಹೇಳಿದರು.

ಚುನಾವಣಾ ಆದಿಕಾರಿ ಚೇತನ್, ಜೆ.ಎಸ್.ರಘು,ಎಂ.ಆರ್.ಜಗದೀಶ್, ಪoಚಾಕ್ಷರಿ, ಕೆ.ಸಿ.ರತನ್, ಪ್ರಶಾಂತ್ ಗೌರಮ್ಮ, ಧನಿಕ್ ಕೋಡದಿಣ್ಣೆ. ಲೋಕೇಶ್ ಮತ್ತಿತರರಿದ್ದರು.

……… ವರದಿ: ವಿಜಯಕುಮಾರ್, ಮೂಡಿಗೆರೆ

Leave a Reply

Your email address will not be published. Required fields are marked *

× How can I help you?