ಮೂಡಿಗೆರೆ-ಹಲವು ನಿಯಮಗಳ ಮೂಲಕ ರಾಜ್ಯ ಸರ್ಕಾರ ಹಿಂದೂಗಳ ಧಾರ್ಮಿಕಾಚರಣೆಗೆ ಅಡ್ಡಿಪಡಿಸುತ್ತಿದೆ-ಬಿಜೆಪಿ ತಾಲೂಕು ವಕ್ತಾರ ವಿನಯ್ ಹಳೆಕೋಟೆ

ಮೂಡಿಗೆರೆ:ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಜನರ ತೆರಿಗೆ ಸೇರಿದಂತೆ ನಾನಾ ರೀತಿಯಲ್ಲಿ ಹಣ ವಸೂಲಿಗೆ ಇಳಿದಿರುವುದು ರಾಜ್ಯದ ಜನರಿಗೆ ತಿಳಿದಿದೆ.ಅವೆಲ್ಲ ಸಾಲದೆಂಬoತೆ ಇದೀಗ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಸರ್ಕಾರ ಹೊಸ ನಿಯಮ ಹೇರಿ ಜನರಿಂದ ಮತ್ತಷ್ಟು ಹಣ ದೋಚಿ ಹಿಂದೂಗಳ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಲು ಮುಂದಾಗಿರುವುದು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎoದು ಬಿಜೆಪಿ ತಾಲೂಕು ವಕ್ತಾರ ವಿನಯ್ ಹಳೆಕೋಟೆ ದೂರಿದ್ದಾರೆ.

ಬುಧವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು,ಈ ಹಿಂದೆ ಗಣೇಶ ಹಬ್ಬ ಆಚರಣೆಗೆ ಸರಳ ಹಾಗೂ ಸಡಿಲವಾದ ನಿಯಮಗಳನ್ನು ರೂಪಿಸಲಾಗಿತ್ತು.ಆದರೆ ಈಗ ರಾಜ್ಯ ಸರ್ಕಾರ ಗಣೇಶೋತ್ಸವದ ಹೆಸರಿನಲ್ಲಿ ಹಗಲು ದರೋಡೆ ನಡೆಸಲು ಇಲ್ಲಸಲ್ಲದ ನಿಯಮಗಳನ್ನು ಹೇರಲು ಮುಂದಾಗಿದೆ.ರಾಜ್ಯಾಧ್ಯoತ ಈ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆಯಿಂದ ಹಿಡಿದು, ಪೂಜೆ, ಹೋಮ ಹವನ, ಮತ್ತಿತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ನಂತರ ವಿಸರ್ಜನೆ ಮಾಡುವವರೆಗೆ ಇಲ್ಲಸಲ್ಲದ ನಿಯಮಗಳನ್ನು ಜಾರಿಗೊಳಿಸಿರುವುದು ಒಂದು ರೀತಿಯಲ್ಲಿ ಹಿಂದುಗಳ ಧಾರ್ಮಿಕ ಆಚರಣೆ ಮೇಲೆ ನಿರ್ಭಂಧ ಹೇರಿದಂತಾಗಿದೆ ಎಂದು ಆರೋಪಿಸಿದರು.

ಈ ಹಿಂದೆ ಸಾಮಾನ್ಯವಾಗಿ ಪ್ರತಿಷ್ಟಾಪನೆ ನಡೆಸುವ ವ್ಯಾಪ್ತಿಗೆ ಸೇರಿದ ನಗರಸಭೆ, ಪ.ಪಂ,ಗ್ರಾ.ಪo. ಹಾಗೂ ಸಂಭದಪಟ್ಟ ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆದು ಆ ಪ್ರದೇಶದಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿತ್ತು.ಆದರೆ ಈ ಬಾರಿ ಜಾರಿಗೊಳಿಸಲಾದ ನಿಯಮದ ಪ್ರಕಾರ ಆಯೋಜಕರ ಆಧಾರ್ ಕಾರ್ಡ್ ಮತ್ತು 100ರೂಗಳ ಛಾಪಾ ಕಾಗದ ಪಡೆದು ಗಣೇಶೋತ್ಸವ ನಡೆಸುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಹೊಸ ನಿಯಮ ಜಾರಿ ಮಾಡಲಾಗಿದೆ.ಅಲ್ಲದೇ ಮೆಸ್ಕಾಂ, ಪೊಲೀಸ್, ಲೋಕೋಪಯೋಗಿ,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಪಂಚಾಯಿತಿಗಳಿoದ ಪರವಾನಗಿ ಪಡೆಯುವಂತೆ ನಿಯಮ ರೂಪಿಸಲಾಗಿದೆ.

ಈ ಎಲ್ಲಾ ಕಾರ್ಯ ನಡೆಸಲು ಗಣಪತಿ ಸೇವಾ ಸಮತಿಗಳಿಗೆ ಕನಿಷ್ಟ ನಾಲ್ಕೈದು ದಿನಕ್ಕೂ ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ ಎಂದಿದ್ದಾರೆ.ಇಷ್ಟು ವರ್ಷ ಇಲ್ಲದ ನಿಯಮ ಈಗ ಏಕಾಏಕಿ ಜಾರಿ ಮಾಡಿರುವುದು ಗಮನಿಸಿದರೆ ಹಿಂದೂಗಳ ಧಾರ್ಮಿಕ ಹಬ್ಬಗಳ ಮೇಲೆ ರಾಜ್ಯ ಸರ್ಕಾರ  ಸವಾರಿ ಮಾಡುತ್ತಿದೆ. ಅಲ್ಲದೇ ಗಣೇಶೋತ್ಸವಕ್ಕೆ ಎಲ್ಲಾ ಗಣಪತಿ ಸೇವಾ ಸಮಿತಿಗಳಿಂದ ೧೦೦ ರೂಗಳ ಬಾಂಡ್ ಪಡೆಯವ ಮೂಲಕ ರಾಜ್ಯ ಸರ್ಕಾರ ಹಗಲು ದರೋಡೆಗೆ ಇಳಿದಿರುವುದು ಎದ್ದು ಕಾಣುತ್ತಿದೆ. ಹಿಂದೂಗಳು ತಮ್ಮ ಧಾರ್ಮಿಕ ಹಬ್ಬವನ್ನು ಆಚರಿಸಲು ಅಡ್ಡಿಯಾಗಿರುವ ಈ ಹೊಸ ನಿಯಮವನ್ನು ಸರ್ಕಾರ ಕೂಡಲೇ ರದ್ದುಗೊಳಿಸಿ ಈ ಹಿಂದೆ ಇದ್ದ ನಿಯಮದಂತೆ ಗಣೇಶೋತ್ಸವ ನಡೆಸಲು ಅವಕಾಶ ಮಾಡಿಕೊಡದಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ನೀವೇ ಹೊಣೆಯಾಗುತ್ತೀರಿ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

………………………… ವಿಜಯಕುಮಾರ್.ಟಿ.

Leave a Reply

Your email address will not be published. Required fields are marked *

× How can I help you?