ಮೂಡಿಗೆರೆ:ಕರಾವಳಿಯ ಉಳ್ಳಾಳದಿಂದ ಮೂಡಿಗೆರೆ ಪಟ್ಟಣಕ್ಕೆ ಆಗಮಿಸಿ ವ್ಯಾಪಾರದೊಂದಿಗೆ ಸಂಸ್ಕಾರವನ್ನು ಹೊತ್ತುಕೊಂಡು ಬಂದ ದಯಾನoದ ನಾಯಕ್ ಅವರ ಶತಾಬ್ದಿ ವರ್ಷದ ಜನ್ಮ ಸಂಸ್ಮರಣ ಸoಭ್ರಮಾಚರಣೆಯನ್ನು ಸೆ.23ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಜೇಸಿ ಭವನದಲ್ಲಿ ನಡೆಯಲಿದೆ ಎಂದು ಜನ್ಮ ಶತಾಬ್ದಿ ಸಮಿತಿ
ಅಧ್ಯಕ್ಷ ಎಂ.ಆರ್.ಜಗದೀಶ್ ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1951ರಿಂದ ಮೂಡಿಗೆರೆ ಪಟ್ಟಣದಲ್ಲಿ ವ್ಯಾಪಾರದೊಂದಿಗೆ ಸಂಸ್ಕಾರ ಮತ್ತು ಬದ್ಧತೆಯಿಂದ ಬದುಕುವುದನ್ನು ಕಲಿಸಿಕೊಟ್ಟ ಮಹಾನ್ ವ್ಯಕ್ತಿ ಯು.ದಯಾನಂದ್ ನಾಯಕ್. ಅವರ ಅನುಯಾಯಿಯಾಗಿರುವ ತಾನು ಸೇರಿದಂತೆ ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್, ಡಿ.ಎಸ್.ಶಂಕರ್ ಮೂರ್ತಿ ಸೇರಿದಂತೆ ಹಲವಾರು ಗಣ್ಯವ್ಯಕ್ತಿಗಳು ಅವರ ಗರಡಿಯಲ್ಲಿಯೇ ಬೆಳೆದಿದ್ದಾರೆ.
ಅವರ ಸಂಸ್ಮರಣಾ ಕಾರ್ಯಕ್ರಮಕ್ಕೆ ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್, ಡಿ.ಎಸ್.ಶಂಕರ್ಮೂರ್ತಿ, ಜನಸೇವಾ ಟ್ರಸ್ಟ್ನ ಕಾರ್ಯದರ್ಶಿ ಅ.ಸಾ.ನಿರ್ಮಲ್ಕುಮಾರ್, ಕನ್ನಡ ಪೂಜಾರಿ ಹಿರೆಮಗಳೂರು ಕಣ್ಣನ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಕಾಫಿ ಬೆಳೆಗಾರ ಕೆಂಜಿಗೆ ಕೇಶವ್ ಮಾತನಾಡಿ,ದಯಾನಂದ್ ನಾಯಕ್ಅವರ ಅಂಗಡಿಯಲ್ಲಿ ಅಂದಿನಿoದ ಇಂದಿನವರೆಗೂ ಮಾರಾಟ ಮಾಡುತ್ತಿದ್ದ ಗೊಬ್ಬರ ಮತ್ತು ಕೀಟನಾಶಕ ಕಳಪೆಯಾಗಿದೆ ಎಂದು ಈ ವರೆಗೂ ಯಾವ ರೈತರೂ ಹೇಳಿಲ್ಲ.ವ್ಯಾಪಾರದಲ್ಲಿ ಗುಣಮಟ್ಟ ಕಾಯ್ದಿರಿಸುಕೊಳ್ಳುವ ಜೊತೆಗೆ ಪಾರದರ್ಶಕವಾದ ವ್ಯಾಪಾರ ಮಾಡುತ್ತಿದ್ದರು.
ಅಲ್ಲದೇ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅವರ ನೀಡುತ್ತಿದ್ದ ಹಿತ ನುಡಿಗಳು ಇಂದಿಗೂ ಯುವ
ಜನಾಂಗಕ್ಕೆ ಪ್ರೇರಣೆಯಾಗಿದೆ.ಅಂತಹ ಮಹಾನ್ ವ್ಯಕ್ತಿಯನ್ನು ನೆನೆಯುವ ಸಲುವಾಗಿ ತಾಲೂಕಿನ ಎಲ್ಲಾ ರಾಜಕೀಯ ಪಕ್ಷದವರು ಸಂಘಸo ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದ ಅವರು, ಕಾರ್ಯಕ್ರಮದಲ್ಲಿ ನಾಯಕರ ಪತ್ನಿ ಸುಮತಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ಸಮಿತಿಯ ಮನ್ಮೋಹನ್, ಕೆ.ಪಿ.ಸುಂದ್ರೇಶ್, ಸುದೇವ್ಗುತ್ತಿ,ಪರೀಕ್ಷಿತ್ ಜಾವಳಿ, ಜನಾರ್ಧನ್ಶೆಟ್ಟಿ, ಜಗದೀಪ್ ಹಂಡುಗುಳಿ ಉಪಸ್ಥಿತರಿದ್ದರು.
————————ವಿಜಯ್ ಕುಮಾರ್ ಟಿ