ಮೂಡಿಗೆರೆ:ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರಿಗೆ ವರದಾನವಾಗಿದೆ-ಪಿ.ಡಿ.ಒ ಸೌಮ್ಯ ಅಭಿಪ್ರಾಯ

ಮೂಡಿಗೆರೆ:ಮಹಿಳೆಯರು ಸಮಾಜದಲ್ಲಿ ಸಂಘ-ಸoಸ್ಥೆಗಳ ಮೂಲಕ ಗುರುತಿಸಿಕೊಂಡು ನಾಯಕತ್ವದ ಗುಣ ಬೆಳೆಸಿ ಕೊಂಡಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೆಸ್ಗಲ್ ಗ್ರಾ.ಪಂ.ಪಿ.ಡಿ.ಒ ಸೌಮ್ಯ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಹೆಸ್ಗಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಜ್ಞಾನವಿಕಾಸ ವಾರ್ಷಿಕೋತ್ಸವ ಸಮಾರಂಭದ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ,ಈ ಹಿಂದೆ ಮಹಿಳೆಯರು ಸಮಾಜದೊಂದಿಗೆ ಬೆರೆಯದೆ ಮನೆಯೊಳಗೆ ಕುಳಿತುಕೊಳ್ಳುವ ಅಭ್ಯಾಸವಿದ್ದು, ಅವರು ಸಂಘಟಿತರಾಗುತ್ತಿರಲಿಲ್ಲ. ಆಗ ಮಹಿಳೆಯರ ಬದುಕು ಕಷ್ಟಕರವಾಗಿತ್ತು. ಅವರಿಗೆ ಯಾವುದೇ ಹೊರಗಿನ ವ್ಯವಹಾರ ಜ್ಞಾನವೂ ಇರಲಿಲ್ಲ. ಹೆಚ್ಚಿನ ಮಹಿಳೆಯರಿಗೆ ಬ್ಯಾಂಕ್ ಖಾತೆ ಕೂಡಾ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಮನೆಯೊಳಗೆ ಸುಮ್ಮನೆ ಕುಳಿತುಕೊಳ್ಳದೆ ಅಲ್ಲಲ್ಲಿ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಗುಂಪುಗಳನ್ನು ರಚಿಸಿ ಬ್ಯಾಂಕಿನಲ್ಲಿ ಖಾತೆ ತೆರೆದು ತಾವು ಸಂಪಾದಿಸುವ ಹಣದಲ್ಲಿ ಒಂದಷ್ಟು ಹಣ ಉಳಿಸಿ ಸ್ವ ಸಹಾಯ ಗುಂಪಿನಲ್ಲಿ ಬೆರೆತು ನಾಯಕತ್ವದ ಗುಣ ಬೆಳೆಸಿಕೊಳ್ಳುವ ಜೊತೆಗೆ ಆರ್ಥಿಕವಾಗಿ ಸಧೃಡರಾಗಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರಿಗೆ ವರದಾನವಾಗಿದೆ. ಈ ಯೋಜನೆಯಿಂದ ಹಣಕಾಸಿನ ನೆರವು ಪಡೆದ ಕುಟುಂಬಗಳು ಹಣವನ್ನು ಉತ್ತಮ ಕಾರ್ಯಗಳಿಗೆ ಬಳಸಿದರೆ ಯೋಜನೆಯ ಉದ್ದೇಶ ಸಾರ್ಥಕವಾಗುತ್ತದೆ. ಸ್ವಸಹಾಯ ಗುಂಪಿನ ಮಹಿಳೆಯರು ಸಂಘವನ್ನು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಬಳಸದೆ ಕಾನೂನು ಅರಿವು, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಬಗ್ಗೆ ಚಿಂತನೆ, ಮಕ್ಕಳ ಶಿಕ್ಷಣದ ಮಹತ್ವ, ಸರ್ಕಾರದಿಂದ ದೊರೆಯುವ ಅನೇಕ ಮಹಿಳಾಪರ ಯೋಜನೆಗಳು, ಸಾಮಾಜಿಕ ಆಗುಹೋಗುಗಳ ಬಗ್ಗೆ ಅರಿವು ಪಡೆಯಲು ಸಂಘಟನೆಯನ್ನು ಬಳಸಿಕೊಳ್ಳಬೇಕು.ಮಹಿಳೆಯರು ಒಟ್ಟಾಗಿ ಸೇರಿ ಸಣ್ಣಪುಟ್ಟ ಉದ್ಯಮ ಅಥವಾ ಗುಡಿ ಕೈಗಾರಿಕೆಯಂತಹ ಸಂಪನ್ಮೂಲ ಕ್ರೂಡೀಕರಣದ ದಾರಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಪಿ.ಶಿವಾನಂದ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವು ಮಹತ್ತರವಾಗಿದ್ದು ಮಹಿಳೆಯರ ಪ್ರಗತಿಯಿಂದ ಕುಟುಂಬವೂ ಪ್ರಗತಿಹೊಂದಲಿದೆ ಎoಬುದನ್ನು ತಿಳಿಸಿಳಿಸಿಕೊಡುವುದೇ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವಂತ ಸಂಪಾದನೆ ಇಲ್ಲದೆ ಆರ್ಥಿಕವಾಗಿ ಹಿಂದುಳಿದಿದ್ದ ಮಹಿಳೆಯರನ್ನು ಗ್ರಾಮಾಭಿವೃದ್ದಿ ಯೋಜನೆಯ ಗುಂಪುಗಳಿಗೆ ಸೇರಿಸಿ ಅವರಿಗೆ ಲಾಭದಾಯಕ ಸ್ವಉದ್ಯೋಗ ಆರಂಭಿಸಲು ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಸಹಾಯದ ನೆರವು ನೀಡಲು ಯೋಜನೆ ರೂಪಿಸಲಾಗಿದೆ. ಮಹಿಳೆಯರು ವಾರಕ್ಕೊಮ್ಮೆ ಒಂದೆಡೆ ಗುಂಪು ಸೇರಿ ಸಭೆ ನಡೆಸಿ ತಮ್ಮ ಕಷ್ಟಕಾರ್ಪಣ್ಯಗಳನ್ನು ಹಂಚಿಕೊಳ್ಳುವುದಲ್ಲದೆ ಮುಂದೆ ಆರ್ಥಿಕವಾಗಿ ಸಬಲರಾಗಲು ಯೋಜನೆ ರೂಪಸಿಕೊಳ್ಳಲು ಈ ವೇದಿಕೆಯಿಂದ ಸಾಧ್ಯವಾಗಲಿದೆೆ. ಎಲ್ಲ ಮಹಿಳೆಯರು ಈ ಯೋಜನೆಯ ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದುವರಿದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸ್ವಸಹಾಯ ಗುಂಪುಗಳ ಒಕ್ಕೂಟದ ಅಧ್ಯಕ್ಷೆ ಮಮತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಾಮಾಕ್ಷಿ, ಯೋಜನೆಯ ಸೇವಾ ಪ್ರತಿನಿಧಿಗಳು ಬಾಗವಹಿಸಿದ್ದರು.

……….. ವರದಿ: ವಿಜಯಕುಮಾರ್.ಟಿ.ಮೂಡಿಗೆರೆ

Leave a Reply

Your email address will not be published. Required fields are marked *

× How can I help you?