ಮೂಡಿಗೆರೆ:ಲಂಡನ್ ನಲ್ಲಿ ನಡೆದ ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಷನ್ ಸಭೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ ಮೋಹನ್ ಕುಮಾರ್ ಬಾಗಿ

ಮೂಡಿಗೆರೆ:ಇದೇ 12ರಂದು ಲಂಡನ್‌ನಲ್ಲಿ ನಡೆದ ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಷನ್ ಸಭೆಯಲ್ಲಿ ಕಾಫಿ
ಆರ್ಗನೈಸೇಷನ್ ಪಿ.ಎಸ್‌.ಸಿ.ಬಿ ಸದಸ್ಯ ಹಾಗೂ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ ಮೋಹನ್ ಕುಮಾರ್ ಅವರು ಭಾಗವಹಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿ ವಿಚಾರದ ಬಗ್ಗೆ ನಡೆದ ಚರ್ಚಾಕೂಟದಲ್ಲಿ ಪಾಲ್ಗೊಂಡರು.

ಕೇoದ್ರ ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿ ನೀರಜ್, ಕಾಫಿ ಉಧ್ಯಮದ ಭಾರತೀಯ ರಾಯಭಾರಿಗಳಾದ ನಿಧಿಮಣಿ ಶ್ರೀಪತಿ ಹಾಗೂ ಶ್ರೀರಂಜಿನಿ ಕನಗವಲ್ಲಿ ಈ ಸಭೆಯಲ್ಲಿ ಭಾಗವಿಸಿದ್ದರು.ಕಾಫಿ ಬೆಳೆಯುವ 65 ವಿವಿಧ ದೇಶಗಳಿಂದ ಬೆಳೆಗಾರ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ಸುದೀರ್ಘ ಚರ್ಚೆ ನಡೆಸಲಾಯಿತು.

ಬ್ರಿಜಿಲ್ ದೇಶದ ಪ್ರತಿನಿಧಿ ಗಳೊಂದಿಗೆ ಕಾರ್ಮಿಕರ ಸಮಸ್ಯೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಾಗ ಪ್ರಸ್ತುತ ದಿನಗಳಲ್ಲಿ ಬ್ರಿಜಿಲ್‌ನಲ್ಲಿ ದೊಡ್ಡ ಗಾತ್ರದ ಯಾಂತ್ರೀಕರಣ ಯಂತ್ರಗಳನ್ನು ಬಳಸುತ್ತಿದ್ದು,ಭಾರತದಲ್ಲಿ ಸಣ್ಣ ಮಟ್ಟದ ಯಾಂತ್ರೀಕರಣಗಳನ್ನು ಬಳಸಲಾಗುತ್ತಿದೆ.ಬ್ರಿಜಿಲ್ ದೇಶದ ಕೃಷಿ ಸಂಭoದಿತ ಯಾಂತ್ರೀಕರಣ ಸಮತಟ್ಟು,ಎತ್ತರ ಮತ್ತು ಇಳಿಜಾರು ಇರುವ ಜಮೀನಿನಲ್ಲಿ ಉಪಯೋಗಿಸಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಾರೆ.

ಭಾರತದ ಕೃಷಿ ಚಟುವಟಿಕೆಗಳಿಗೆ ಬ್ರಿಜಿಲ್ ಮಾದರಿಯ ಯಂತ್ರೋಪಕರಣಗಳನ್ನು ಬಳಸಿದರೆ ರೈತಾಪಿವರ್ಗ ಕಾರ್ಮಿಕರ ಕೊರತೆಗೆ ಪರಿತಪಿಸುವ ಅಗತ್ಯ ಕಂಡುಬರುವುದಿಲ್ಲ.ಹಾಗಾಗಿ ಭಾರತದಲ್ಲಿಯೂ ದೊಡ್ಡಮಟ್ಟದ ಯಂತ್ರೋಪಕರಣಗಳನ್ನು ಬಳಸುವುದು ಸೂಕ್ತ ಎಂದು ಬ್ರಿಜಿಲ್ ಪ್ರತಿನಿಧಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿಸಿದರು.

ಇಂಟರ್ ನ್ಯಾಷನಲ್ ಕಾಫಿ ಆರ್ಗನೈಸೇಷನ್ ಕಛೇರಿಗೆ ಬೇಟಿ ನೀಡಿ ಅಲ್ಲಿ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡು ಗುರುವಾರ ಭಾರತಕ್ಕೆ ವಾಪಾಸ್ಸು ಬಂದಿದ್ದೇನೆ.ಕಾಫಿ ಕೃಷಿಗೆ ಸಂಭoದಿಸಿದ ವಿದೇಶಿ ಸಭೆಗೆ ಬೇಟಿ ಮತ್ತು ಅಧ್ಯಯನ ಕರ್ನಾಟಕದ ಕಾಫಿ ಬೆಳೆಗಾರರಿಗೆ ಉಪಯುಕ್ತವಾಗಲಿದೆ.ಅಲ್ಲಿನ ಸಭೆಯಲ್ಲಿ ವಿವಿಧ ದೇಶದ ಪ್ರತಿನಿಧಿಗಳು ಆಯಾ ದೇಶದ ಕಾಫಿ ಕೃಷಿ ಬಗ್ಗೆ ಚರ್ಚಿಸಿದರುವುದು ನಮಗೂ ಮಾರ್ಗದರ್ಶನವಾಗಲಿದೆ.ಅಲ್ಲಿ ತಿಳಿದುಕೊಂಡು ಬoದದ್ದನ್ನು ಇಲ್ಲಿನ ಬೆಳೆಗಾರರಿಗೆ ತಿಳಿಸಲಾಗುವುದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ ಮೋಹನ್ ಕುಮಾರ್ ತಿಳಿಸಿದರು.

………….. ವರದಿ: ವಿಜಯ ಕುಮಾರ್,

Leave a Reply

Your email address will not be published. Required fields are marked *

× How can I help you?