ಮೂಡಿಗೆರೆ-ವೃತ್ತಗಳಲ್ಲಿ ಅಳವಡಿಸಿದ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳಿಂದ ನಿರoತರ ಅಪಘಾತ-ಕಣ್ಮುಚ್ಚಿ ಕುಳಿತ ಸ್ಥಳೀಯ ಆಡಳಿತಗಳು

ಮೂಡಿಗೆರೆ-ಪಟ್ಟಣದ ಬಸ್‌ನಿಲ್ದಾಣದ ಮುಂಭಾಗದ ಲಯನ್ಸ್ ವೃತ್ತ ಮತ್ತು ಪಟ್ಟಣಕ್ಕೆ ಹೊಂದಿಕೊoಡoತಿರುವ 2.ಕಿ.ಮಿ.ದೂರದಲ್ಲಿನ ಹ್ಯಾಂಡ್ ಪೋಸ್ಟ್ ನ ರೋಟರಿ ವೃತ್ತದ ಸುತ್ತಲೂ ವಿವಿಧ ರಾಜಕೀಯ ಪಕ್ಷಗಳು, ಸಂಘಸoಸ್ಥೆಗಳು ಅವರವರ ಕಾರ್ಯಕ್ರಮದ ಪ್ರಚಾರ ಮತ್ತು ರಾಜಕೀಯ ನಾಯಕರ ಶುಭಾಶಯಗಳನ್ನು ಕೋರುವ ಪ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಕಟ್ಟುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿರುವುದಲ್ಲದೆ ವಾಹನಗಳ ಅಪಘಾತಕ್ಕೂ ಕಾರಣವಾಗಿದೆ.

ರಸ್ತೆ ಸರಿಯಾಗಿ ಕಾಣಿಸದೆ ಇವೆರಡು ವೃತ್ತಗಳಲ್ಲೂ ಹಲವು ಬಾರಿ ಅವಡಗಳು ಸಂಭವಿಸಿದೆ.ಹ್ಯಾoಡ್ ಪೋಸ್ಟ್ ರೋಟರಿ ವೃತ್ತದ ಸುತ್ತಲೂ ಕಟ್ಟಿದ್ದ ಫ್ಲೆಕ್ಸ್ ಹಾವಳಿಯಿಂದಾಗಿ ರಸ್ತೆ ಕಾಣದೆ ಜನ್ನಾಪುರದ ಲಕ್ಕಿ ನಾಯ್ಕ್ ಮತ್ತು ಹ್ಯಾಂಡ್‌ಪೋಸ್ಟ್ ವಾಸಿ ಹರೀಶ್ ಅವರ ಬೈಕ್‌ಗಳು ಪರಸ್ಪರ ಡಿಕ್ಕಿಯಾಗಿ ಇಬ್ಬರೂ ಗಾಯಗೊಂಡು ಮೂಡಿಗೆರೆ ಎಂಜಿಎo ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಕೀಯ ಮುಖಂಡರುಗಳು ಕೋರುವ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಶೂಭಾಶಯಗಳ ಫ್ಲೆಸ್ಗ್ ಗಳು ಈ ವೃತ್ತದಲ್ಲಿ ರಾರಾಜಿಸುತ್ತಿದ್ದವು. ಎರಡು ಬದಿಯಿಂದ ಬರುವ ಬೈಕ್ ಸವಾರರಿಗೆ ಪರಸ್ಪರ ಕಾಣದೆ ಡಿಕ್ಕಿಯಾಗಿದೆ ಇಬ್ಬರೂ ರಸ್ತೆಗೆ ಬಿದ್ದು ತಲೆಗೆ ಪೆಟ್ಟಾಗಿದೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ವೃತ್ತದಲ್ಲಿ ಕಟ್ಟಿದ್ದ ಫ್ಲೆಕ್ಸ್ ಗಳನ್ನು ಕಿತ್ತೆಸೆದಿದ್ದಾರೆ.

ಪಟ್ಟಣದ ಲಯನ್ಸ್ ವೃತ್ತ ಮತ್ತು ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ನಿರಂತರವಾಗಿ ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ಅಳವಡಿಸುವುದು ಮಾಮೂಲಾಗಿದ್ದು ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಯಾಗುತ್ತಿದೆ. ಪಟ್ಟಣದ ಲಯನ್ಸ್ ವೃತ್ತ ಮೂಡಿಗೆರೆ ಬಸ್ ನಿಲ್ದಾಣದ ಎದುರೇ ಇದ್ದು ಇಲ್ಲಿ ಆಟೋ ನಿಲ್ದಾಣ, ಟಾಕ್ಸಿಸ್ಟಾಂಡ್, ಸರ್ಕಾರಿ ಪ್ರೌಡಶಾಲೆ, ಪೆಟ್ರೋಲ್ ಬಂಕ್, ಮತ್ತು ವಾಣಿಜ್ಯ ಸಮುಚ್ಛಯ ಎಲ್ಲವೂ ಇದ್ದು ಶಾಲಾ ಕಾಲೇಜ್ ವಿಧ್ಯಾರ್ಥಿಗಳು, ಬಸ್ ಪ್ರಯಾಣಿಕರು, ಪಾದಾಚಾರಿಗಳು ಸೇರಿದಂತೆ ಈ ಸ್ಥಳ ಯಾವಾಗಲೂ ಜನಜಂಗುಳಿಯಿoದ ಕೂಡಿರುತ್ತದೆ.

ಹಾಗೆಯೇ ಹ್ಯಾಂಡ್ ಪೋಸ್ಟ್ ವೃತ್ತ ಕೂಡಾ ಬೆಂಗಳೂರು,ಮಂಗಳೂರು, ಸಕಲೇಶಪುರ, ಹೊರನಾಡು ಕಡೆಯಿಂದ ಮೂಡಿಗೆರೆಗೆ ಪಟ್ಟಣಕ್ಕೆ ಬಂದು ಸೇರುವ ವೃತ್ತವಾಗಿದ್ದು ಇದು ಕೂಡಾ ಪ್ರತಿನಿತ್ಯವೂ ಜನಜಂಗುಳಿಯಿoದ ಕೂಡಿದ ಸ್ಥಳವಾಗಿದೆ. ವೃತ್ತದಲ್ಲಿ ಮೂರು ಕಡೆಗಳಿಂದ ಬರುವ ವಾಹನದ ರಸ್ತೆಮಾರ್ಗದ ಸೂಚನಾ ಫಲಕವಿದ್ದರೂ ಅದರ ಮೇಲೆ ದೊಡ್ಡ ಗಾತ್ರದ ಫ್ಲೆಕ್ಸ್ ಮತ್ತು ಬ್ಯಾನರ್ ಕಟ್ಟುವುದರಿಂದ ಅದು ಕಾಣಿಸದೆ ರಸ್ತೆಯ ಹೆಚ್ಚಿನ ಪರಿಚಯವಿಲ್ಲದ ವಾಹನ ಚಾಲಕರು ದಾರಿ ತಿಳಿಯದೆ ತಬ್ಬಿಬ್ಬಾಗುತ್ತಾರೆ. ಅಲ್ಲದೆ ಸುತ್ತಮುತ್ತಲಿನಿಂದ ಬರುವ ವಾಹನ ಕಾಣಿಸದೆ ಅಪಘಾತಗಳು ಸಂಭವಿಸುತ್ತದೆ.

ಪಟ್ಟಣದ ಲಯನ್ಸ್ ವೃತ್ತ ಮತ್ತು ಹ್ಯಾಂಡ್ ಪೋಸ್ಟ್ ನ ರೋಟರಿ ವೃತ್ತದಲ್ಲಿ ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ಅಳವಡಿಸಲು ಯಾರಿಗೂ ಅವಕಾಶ ನೀಡಬಾರದೆಂದು ಸ್ಥಳೀಯರು ಪೋಲೀಸ್ ಮತ್ತು ಸ್ಥಳೀಯ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಅಲ್ಲದೆ ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದರು ಫಲ ಕಂಡುಬoದಿಲ್ಲ. ನಿರಂತರವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸುವುದರಿಂದ ಅಪಘಾತಗಳು ಸಂಭವಿಸುತ್ತಲೇ ಇದ್ದು ವಾಹನ ಚಾಲಕರು ಬಲಿಯಾಗುತ್ತಿರುವುದು ದುರದೃಷ್ಟಕರ.

ಪಟ್ಟಣದಲ್ಲಿರುವ ವೃತ್ತಗಳ ಸುತ್ತ ನಿಯಮಬಾಹಿರವಾಗಿ ದೊಡ್ಡಗಾತ್ರದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ಕಟ್ಟುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ವೃತ್ತಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವವರ ವಿರುದ್ದ ಕ್ರಮಕ್ಕೆ ಪ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ
ಕೈಗೊಳ್ಳಲಾಗಿದೆ.ವೃತ್ತಗಳು ಹೊರತುಪಡಿಸಿ ಇತರೆ ಕಡೆಗಳಲ್ಲೂ ಬ್ಯಾನರ್ ಅಳವಡಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅನುಮತಿಯಿಲ್ಲದೆ ಬ್ಯಾನರ್ ಹಾಕಿದಲ್ಲಿ ಅಂತಹವರ
ವಿರುದ್ದ ಕ್ರಮ ಕೈಗೊಳ್ಳಲಾಗುವುದು

—————ಗೀತಾ ರಂಜನ್ಅ ಜಿತ್‌ಕುಮಾರ್; ಪ.ಪಂ.ಅಧ್ಯಕ್ಷೆ

ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಲಯನ್ಸ್ ವೃತ್ತ, ಪೋಲಿಸ್ ಸ್ಟೇಷನ್ ವೃತ್ತ, ಹ್ಯಾಂಡ್ ಪೋಸ್ಟ್ ನ ರೋಟರಿ ವೃತ್ತಗಳ ಸುತ್ತಮುತ್ತ ವಾಹನ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಕಾನೂನು ಬಾಹಿರವಾಗಿ ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ಕಟ್ಟುತ್ತಿರುವುದು ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತದಿಂದಾಗಲಿ ಪೋಲೀಸ್ ಇಲಾಖೆಯಿಂದಾಗಲೀ ಯಾವುದೇ ಕ್ರಮ ಕೈಗೊಳ್ಳದೆ ಇದು ತಮಗೆ ಸಂಭoದಪಡದ ವಿಷಯವೆಂಬoತೆ ಮೌನವಹಿಸುತ್ತಾರೆ. ಈ ಹಿಂದೆ ನಾನು ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಮಾಡುವಂತೆ ಮಾಧ್ಯಮ ಮಿತ್ರರಲ್ಲಿ ತಿಳಿಸಿದ್ದು ಬಹುತೇಕ ಪತ್ರಿಕೆಗಳಲ್ಲಿ ವರದಿಯಾಗಿದೆ.

ಆದರೂ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಇನ್ನಾದರೂ ಸ್ಥಳೀಯ ಆಡಳಿತ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಹೆಚ್ಚಿನ ಅವಘಡವನ್ನು ತಪ್ಪಿಸುತ್ತಾರೆಂದು ಆಶಿಸುತ್ತೇವೆ.

————-ಸಾಜಿದ್ ಬಣಕಲ್,ಸಾಮಾಜಿಕ ಕಾರ್ಯಕರ್ತ.

…………. ವರದಿ: ವಿಜಯಕುಮಾರ್.ಟಿ.ಮೂಡಿಗೆರೆ

Leave a Reply

Your email address will not be published. Required fields are marked *

× How can I help you?