ಬಣಕಲ್-ತಾಲೂಕಿನ ಹೆಗ್ಗೋಡು ಗ್ರಾಮದ ವಿದ್ಯಾರ್ಥಿಪರ ಹೋರಾಟಗಾರ ಗಗನ್,ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ
ಗಾಯಿತ್ರಿ,ಗಿರೀಶ್ ದಂಪತಿಯರ ಪುತ್ರನಾಗಿರುವ ಗಗನ್ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿ,ಕೆ.ಪಿ.ಎಸ್ಸಿ ಕರ್ಮಕಾಂಡವನ್ನು ಎತ್ತಿ ಹಿಡಿದು,ಕೆ.ಎ,ಎಸ್ ಮರು ಪರೀಕ್ಷೆ ಮಾಡಲೇಬೇಕೆಂದು ಸರ್ಕಾರದ ಎದುರು ಪ್ರತಿಭಟಿಸಿ ಗೆಲುವು ಕಂಡಿರುತ್ತಾರೆ.
ಹಾಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತು ಪಡಿಸುವಲ್ಲಿ ಯಶಸ್ಸು ಕಂಡಿದ್ದಾರೆ.ಹೀಗೆ ಸಮಾಜದಲ್ಲಿ ನಡೆಯುವ ಹಲವಾರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಸರಕಾರದ ಗಮನ ಸೆಳೆದಿರುವ ಗಗನ್ ಜಿಲ್ಲೆಯಲ್ಲೂ ಕೂಡ ಜನಪರ ಧ್ವನಿ ಆಗಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.
—————–ಸೂರಿ ಬಣಕಲ್