ಮೂಡಿಗೆರೆ-ಮನೆಯಲ್ಲಿಯೇ ಗಾಂಜಾ ಬೆಳೆದಿದ್ದ ಕಿರಾತಕನನ್ನು ಜೈಲಿಗೆ ಅಟ್ಟಿದ ಖಾಕಿ-ಗಾಂ,ಜಾ ಪಿಡುಗನ್ನು ಬೆರೆಸಮೇತ ಕಿತ್ತೊಗೆಯುವಂತೆ ಸಾರ್ವಜನಿಕರ ಆಗ್ರಹ

ಮೂಡಿಗೆರೆ-ಬೇಲೂರು ರಸ್ತೆಯಲ್ಲಿರುವ ತನ್ನ ಮನೆಯ ಮೇಲೆಯೇ ಗಾಂ,ಜಾ ಗಿಡವೊಂದನ್ನು ಬೆಳೆದಿದ್ದ ಆರೋಪಿಯೊಬ್ಬನನ್ನು ಬಂಧಿಸಿ ಅಭಕಾರಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

ಪೃಥ್ವಿ ಎಂ ಗೌಡ ಬಿನ್ ಮಹಿಪಾಲ್ ಎಂಬ ಯುವಕನೊಬ್ಬ ತನ್ನ ಮನೆಯಲ್ಲಿಯೇ ಗಾಂ,ಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಅಬಕಾರಿ ಉಪ ಅಧೀಕ್ಷಕರಾದ ಕೀರ್ತಿ ಕುಮಾರ್,ಅಭಕಾರಿ ನಿರೀಕ್ಷಕರಾದ ಲೋಕೇಶ .ಸಿ ರವರುಗಳು ಸಿಬ್ಬಂದಿಗಳಾದ ರಮೇಶ್ ತುಳಜಣ್ಣನವರ್,ಶಂಕರ ಗುರುವ,ಮತ್ತು ವಾಹನ ಚಾಲಕರಾದ ಪ್ರವೀಣ್ ರೊಂದಿಗೆ ಮನೆಯ ಮೇಲೆ ಧಾಳಿ ನಡೆಸಿದ್ದಾರೆ.

ಮನೆಯ ಟೆರೇಸ್ ಮೇಲೆ ಬೆಳೆಯಲಾಗಿದ್ದ 707ಗ್ರಾಂ ತೂಕದ ಗಾಂಜಾ ಗಿಡವನ್ನು ವಶಕ್ಕೆ ಪಡೆದು ಆರೋಪಿ ಪೃಥ್ವಿ ಎಂ ಗೌಡ ಬಿನ್ ಮಹಿಪಾಲ್ ವಿರುದ್ಧ ಎನ್.ಡಿ.ಪಿ.ಎಸ್ ಕಾಯಿದೆ ಅಡಿ ದೂರು ದಾಖಲಿಸಿ ಮುದ್ದೆ ಮುರಿಯಲು ಜೈಲಿಗೆ ಬಿಟ್ಟು ಬಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೂಡಿಗೆರೆಯಲ್ಲಿ ಗಾಂ,ಜಾ ಗಮ್ಮತ್ತು ಜೋರಾಗಿಯೇ ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ಅಭಕಾರಿ ಪೊಲೀಸರು ಇನ್ನು ಸಕ್ರೀಯರಾಗಿ ಕರ್ತವ್ಯ ನಿರ್ವಹಿಸಿ ಗಾಂ,ಜಾ ಗಿಡವನ್ನು ಬೇರು ಸಮೇತ ಕಿತ್ತು ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

——–ಆಶಾ ಸಂತೋಷ್ ಅತ್ತಿಗೆರೆ

Leave a Reply

Your email address will not be published. Required fields are marked *

× How can I help you?