ಮೂಡಿಗೆರೆ;ಯುವ ಜನಾಂಗಕ್ಕೆ ವ್ಯಕ್ತಿತ್ವ ವಿಕಸನಗೊಳಿಸುವ ವಾತಾವರಣ ಸೃಷ್ಟಿಸಿಕೊಳ್ಳಲು ಜೇ ಸಿ ಸಂಸ್ಥೆ ಅತ್ಯುತ್ತಮದ ವೇದಿಕೆಯಾಗಿದೆ: ಟಿ.ಎನ್.ದೇವರಾಜ್

ಮೂಡಿಗೆರೆ:ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನಾಂಗಕ್ಕೆ ವ್ಯಕ್ತಿತ್ವ ವಿಕಸನಗೊಳಿಸುವ ವಾತಾವರಣ ಸೃಷ್ಟಿಸಿಕೊಳ್ಳಲು ಜೇ ಸಿ ಸಂಸ್ಥೆ ಅತ್ಯುತ್ತಮದ ವೇದಿಕೆಯಾಗಿದೆ ಎಂದು ಜೇ ಸಿ ಐ ರಾಷ್ಟ್ರೀಯ ಪೂರ್ವ ನಿರ್ದೇಶಕ ಟಿ.ಎನ್.ದೇವರಾಜ್ ಹೇಳಿದರು.

ಅವರು ಭಾನುವಾರ ಸಂಜೆ ಪಟ್ಟಣದ ಜೇ ಸಿ ಭವನದಲ್ಲಿ ೭ದಿನ ನಡೆದ ಜೇ ಸಿ ಪ್ರೇರಣ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಮನುಷ್ಯ ಪ್ರತಿಫಲಾಪೇಕ್ಷೆ ಬಯಸದೆ ಉತ್ತಮ ಕೆಲಸ
ಮಾಡಿದರೆ ಮತ್ತು ಅವಕಾಶ ದೊರೆತಾಗ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಹೊಂದಿದಲ್ಲಿ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡು ಸಮಾಜಸೇವೆ ಮಾಡಿದಲ್ಲಿ ಮಾನವ ಜನ್ಮಕ್ಕೆ ಅರ್ಥ
ಸಿಗುತ್ತದೆ ಎಂದ ಅವರು,ಭಾರತದಲ್ಲಿ ನಿರಂತರವಾಗಿ 50 ವರ್ಷ ಪೂರೈಸಿದ ಅನೇಕ ಜೇ ಸಿ ಘಟಕಗಳಿವೆ.ಈ ಪೈಕಿ ಮೂಡಿಗೆರೆ ಜೇ ಸಿ ಸಂಸ್ಥೆ ಕೂಡ ಒಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಉದ್ಯಮಿ ಶ್ರೀನಾಥ್ ಮಾತನಾಡಿ, ಹಿಂದೆ ಬೆಂಗಳೂರು ಮಹಾ ನಗರ ಗಾರ್ಡನ್ ಸಿಟಿಯಾಗಿತ್ತು.ಈಗ ಗಾರ್ಬೇಜ್ ಸಿಟಿಯಾಗುತ್ತಿದೆ.ಇದಕ್ಕೆ ಮಾನವ ಪ್ರಕೃತಿ ಮೇಲೆ ನಡೆಸುತ್ತಿರುವ ದೌರ್ಜನ್ಯವೇ ಮೂಲ ಕಾರಣವಾಗಿದೆ.ಪ್ರಕೃತಿ ಉಳಿಸುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಚಿಕ್ಕಮಗಳೂರು ಜಿಲ್ಲೆ ಪರಿಸರ ಉತ್ತಮವಾಗಿದೆ.ಅದನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಹಾಸ್ಯ ನಟ ರಮೇಶ್ ಯಾದವ್, ಜೇಸಿ ವಲಯಾಧ್ಯಕ್ಷೆ ಆಶಾ ಜೈನ್, ಜೇ ಸಿ ಸಂಸ್ಥೆ ಅಧ್ಯಕ್ಷ ಸುಪ್ರಿತ್ ಕಾರ್‌ಬೈಲ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೆ.ಕೆ.ಪ್ರದೀಪ್ ಕುನ್ನಳ್ಳಿ ಅವರಿಗೆ ಕಮಲಪತ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಜೇ ಸಿ ನಿಕಟಪೂರ್ವ ಅಧ್ಯಕ್ಷೆ ಸವಿತಾ ರವಿ, ಸಂದೀಪ್ ತ್ರಿಪುರ, ಇಂಪಾ ಸವೀನ್, ದಿವ್ಯ ಸುಪ್ರಿತ್, ಕವಿತಾ ಸಂತೋಷ್, ಶ್ರಾವ್ಯ ಉದಯ್, ಮಾನ್ವಿಕ್ ಮತ್ತಿತರರಿದ್ದರು.

————————-ವಿಜಯಕುಮಾರ್, ಮೂಡಿಗೆರೆ

Leave a Reply

Your email address will not be published. Required fields are marked *

× How can I help you?