ಮೂಡಿಗೆರೆ-ಜನ್ನಾಪುರ ಜೆ.ಸಿ.ಐ ಸಮೃದ್ದಿ ಘಟಕದ 2025-29ನೇ ಸಾಲಿನ ಅಧ್ಯಕ್ಷರಾಗಿ ಪ್ರಹ್ಲಾದ್ ಅವರನ್ನು ಸರ್ವ ಸದಸ್ಯರುಗಳು ಅವಿರೋಧವಾಗಿ ಆಯ್ಕೆಗೊಳಿಸಿದರು.
ತಾಲ್ಲೂಕಿನ ಬೆಟ್ಟದಮನೆ ಗ್ರಾಮದಲ್ಲಿ ನಡೆದ ಜೆಸಿಐ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜೆ.ಸಿ.ಐ ರಾಷ್ಟ್ರೀಯ ಪೂರ್ವ ನಿರ್ದೇಶಕ ಡಾ ಫೈರೋಜ್ ಅಹ್ಮದ್,ವಲಯ ಅಧಿಕಾರಿ ಯು.ಸಿ.ಸಂತೋಷ್,ನಿಕಟಪೂರ್ವ ಅಧ್ಯಕ್ಷ ವಿನಯ್,ಕಾರ್ಯದರ್ಶಿ ವಿಶ್ವಾಸ್ ಹಾಗೂ ಎಲ್ಲಾ ಪೂರ್ವ ಅಧ್ಯಕ್ಷರುಗಳು ಮತ್ತು ಸರ್ವ ಸದಸ್ಯರು ಹಾಜರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.