ಮೂಡಿಗೆರೆಯ ರೈತ ಭವನದಲ್ಲಿ ಇದೇ ಅ.25ರಂದು ಶ್ರೀ ಸಾಯಿ ಗ್ರೂಪ್ ವತಿಯಿಂದ ‘ಮಲೆನಾಡು ಹಬ್ಬ’ ಆಯೋಜಿಸಲಾಗಿದೆ.
ಹಬ್ಬದಲ್ಲಿ ಊಟೋಪಚಾರ,ತಂಪು ಪಾನೀಯಗಳು,ಸಾಂಬಾರ ಪದಾರ್ಥಗಳು ಸೇರಿದಂತೆ ಚಿನ್ನಾಭರಣಗಳು, ಸಲ್ವಾರ್ ಸೂಟುಗಳು,ವಿವಿಧ ಬಗೆಯ ಆಕರ್ಷಕ ಸೀರೆಗಳು,ಹೂವಿನ ಕುಂಡಗಳು, ಹೂವಿನ ಗಿಡಗಳು,ಇತರೆ ಮಲೆನಾಡು ಉತ್ಪನ್ನಗಳು ಇರಲಿವೆ.
ಹೆಚ್ಚಿನ ಜನರು ಈ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಹಬ್ಬ ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಕೋರಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ 8618455600/9448441727 ಸಂಖ್ಯೆಗೆ ಕರೆ ಮಾಡಬಹುದು.
—————--ಆಶಾ ಸಂತೋಷ್