ಮೂಡಿಗೆರೆ-ತಾಲ್ಲೂಕ್ಕಿನ ನಿಡ್ನಳ್ಳಿ ಗ್ರಾಮದ ‘ಮೇಘನಾ ಶಂಕರ್’ ‘ಯು.ಪಿ.ಎಸ್.ಸಿ’ಪರೀಕ್ಷೆಯಲ್ಲಿ ತೇರ್ಗಡೆ

ಮೂಡಿಗೆರೆ-ತಾಲೂಕಿನ ನಿಡ್ನಳ್ಳಿ ಗ್ರಾಮದ ಶಂಕರೇಗೌಡ ಮತ್ತು ರತ್ನಾ ಕೆ ದಂಪತಿಯ ಪುತ್ರಿ ಮೇಘನಾ ಶಂಕರ್ ಅವರು 2023ರ ಸವಾಲಿನ ಯು.ಪಿ.ಎಸ್‌.ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ (ಸಿಎಸ್‌ಇ) ಮೀಸಲು ಪಟ್ಟಿಯ ಮೂಲಕ ಮೂರನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.

ಇದನ್ನು ಆಯೋಗವು ಅಕ್ಟೋಬರ್ 25 ರಂದು ಘೋಷಣೆ ಮಾಡಿದ್ದು,ಯು.ಪಿ.ಎಸ್.ಸಿ ಯಿಂದ ವಿವಿಧ ಕೇಂದ್ರೀಯ ನಾಗರಿಕ ಸೇವೆಗಳಿಗೆ ಆಯ್ಕೆ ಮಾಡಲು ಮೀಸಲು ಪಟ್ಟಿಯಲ್ಲಿದ್ದ 120 ಅಭ್ಯರ್ಥಿಗಳಲ್ಲಿ ಮೇಘನಾ ಶಂಕರ್ ಸಹ ಒಬ್ಬರು.

ಮೇಘನಾ ಶಂಕರ್ ನವೆಂಬರ್ 2018 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು.ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಿಂದ ಬಿಕಾಮ್ ಫೈನಾನ್ಸ್ ಮತ್ತು ಅಕೌಂಟೆನ್ಸಿ ಪದವಿಯನ್ನು ಸಹ ಮೇಘನಾ ಶಂಕರ್ ಪಡೆದಿದ್ದಾರೆ.

———–-ಸೂರಿ ಬಣಕಲ್

Leave a Reply

Your email address will not be published. Required fields are marked *

× How can I help you?