ಮೂಡಿಗೆರೆ-ಅಧಿಕಾರಿಗಳ ವಿರುದ್ಧ ನಯನ ಮೋಟಮ್ಮ ‘ಕಿಡಿ’- ಇಚ್ಚಾಶಕ್ತಿ ಯ ಕೊರತೆಯಿಂದ ‘ಅಭಿವೃದ್ದಿ ಕೆಲಸ ಕುಂಠಿತ’ಗೊoಡಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ

ಮೂಡಿಗೆರೆ:ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಯಾವುದೇ ಕೆಲಸ ಸುಸೂತ್ರವಾಗಿ ನಡೆಯು ತ್ತಿಲ್ಲವೆಂಬ ದೂರು ಕೇಳಿಬರುತ್ತಿದೆ.ಅಧಿಕಾರಿಗಳು ಸಾರ್ವಜನಿಕರ ಕೆಲಸ ಸಸೂತ್ರವಾಗಿ ಮಾಡಿಕೊಡಬೇಕು. ನಿಮ್ಮ ಅಸಡ್ಡೆಯಿಂದ ಜನತೆ ಅಹವಾಲು ಹಿಡಿದು ಜನಪ್ರತಿನಿಥಿಗಳ ಬಳಿ ಬಂದು ಗೋಗೊರೆಯುತ್ತಾರೆ.ಇಚ್ಚಾಶಕ್ತಿಯ ಕೊರತೆಯಿಂದ ಅಭಿವೃದ್ದಿ ಕೆಲಸ ಕುಂಠಿತಗೊoಡಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅವರು ಬುಧವಾರ ಪಟ್ಟಣದ ತಾ.ಪಂ.ದೀನದಯಾಳ್ ಸಭಾ ಭವನದಲ್ಲಿ ಜಿ.ಪಂ.ಮತ್ತು ತಾ.ಪಂ. ವತಿಯಿಂದ ಮೂಡಿಗೆರೆ ಮತ್ತು ಕಳಸ ತಾಲೂಕಿನ ಗ್ರಾ.ಪಂ.ಚುನಾಯಿತ ಪ್ರತಿನಿಥಿಗಳು ಹಾಗೂ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರ ಉಧ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಮೂಡಿಗೆರೆ ತಾಲೂಕು ಆರ್ಥಿಕವಾಗಿ ಮುಂದುವರಿದಿದ್ದರೂ ಅಭಿವೃದ್ದಿಯಲ್ಲಿ ಹಿಂದುಳಿದಿದೆ.ಈ ರೀತಿ ಹಿಂದುಳಿಯಲು ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಮತ್ತು ಇಚ್ಛಾಶಕ್ತಿಯ ಕೊರತೆಯೇ ಕಾರಣ. ತಳಮಟ್ಟದದಿಂದ ಅಭಿವೃದ್ದಿಗೆ ಒತ್ತುನೀಡಿದರೆ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ. ಕೆಲ ಗ್ರಾ.ಪಂ.ಗಳಲ್ಲಿ ಜನಪ್ರತಿನಿಥಿಗಳ ಪಕ್ಷಪಾತ ನೀತಿಯಿಂದಾಗಿ ಜನರ ಕೆಲಸದಲ್ಲಿ ತೊಡಕುಂಟಾಗಿದೆ. ನಾನು ಯಾವುದೇ ರೀತಿಯ ಪಕ್ಷಪಾತ ನೀತಿ ಅನುಸರಿಸಿಲ್ಲ. ಎಲ್ಲ ಪಕ್ಷದವರನ್ನು ಒಂದೇ ರೀತಿ ನೋಡಿದ್ದೇನೆ.ನಾನು ರಾಜಕೀಯಕ್ಕೆ ಬಂದು ಕೇವಲ 8 ವರ್ಷವಾಗಿದೆ. ನನಗೂ ಅನುಭವದ ಕೊರತೆಯಿದೆ.ಗ್ರಾ.ಪಂ.ಗೆ ನಾಲ್ಕೈದು ಬಾರಿ ಆಯ್ಕೆಯಾದ ಸದಸ್ಯರಿದ್ದಾರೆ.ಅವರಿಗೆ ಹೆಚ್ಚಿನ ಅನುಭವವಿದ್ದರೂ ಹೊಂದಾಣಿಕೆಯ ಕೊರತೆ ಹಾಗೂ ಹಾಗೂ ಸ್ವಜನ ಪಕ್ಷಪಾತದಿಂದಾಗಿ ಅಭಿವೃದ್ದಿಯಲ್ಲಿ ಕುಂಠಿತವಾಗಿದೆ.ಊರ ಅಭಿವೃದ್ದಿಯಲ್ಲಿ ಪಕ್ಷಪಾತ ಸಲ್ಲದು.

ಗ್ರಾ.ಪಂ.ಮಟ್ಟದಲ್ಲಿ ಬಗೆಹರಿಸಬಹುದಾದ ಬಹಳಷ್ಟು ಸಮಸ್ಯೆಗಳನ್ನು ಅಧಿಕಾರಿಗಳು ಅಲ್ಲಿಯೇ ಬಗೆಹರಿಸಿಕೊಡಬೇಕು. ಸಾರ್ವಜನಿಕರು ಪ್ರತಿಯೊಂದು ಸಮಸ್ಯೆಗಳ ಪರಿಹಾರಕ್ಕೂ ನನ್ನ ಬಳಿ ಬರದಂತೆ ಅಧಿಕಾರಿಗಳು ನೊಡಿಕೊಳ್ಳಬೇಕು. ಗ್ರಾ.ಪಂ.ನಿoದ ಸಂಸತ್ ಸದಸ್ಯರವರೆಗಿನ ಎಲ್ಲಾ ಜನಪ್ರತಿನಿಥಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಜನರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಸರ್ಕಾರದಿಂದ ನನಗೆ ಬರುವ ಅನುದಾನದಲ್ಲಿ ಎಲ್ಲ ಕಡೆ ಅಭಿವೃದ್ದಿ ನಡೆಸಲು ಸಾಧ್ಯವಿಲ್ಲ.ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳ ಶೌಚಗೃಹ ನಿರ್ಮಾಣಕ್ಕೆ ಶಾಸಕರ ನಿಧಿಯ ಅನುದಾನವನ್ನು ಫೂರ್ಣವಾಗಿ ಬಳಸಿದ್ದೇನೆ.ಗ್ರಾ.ಪಂ.ಗೆ ಬರುವ ಅನುದಾನದಲ್ಲಿ ಕ್ರಿಯಾಯೋಜನೆ ತಯಾರಿಸಿ ಅಭಿವೃದ್ದಿಪಡಿಸಿದಲ್ಲಿ ಬಹುತೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಅಧಿಕಾರಿಗಳು ಜನಪ್ರತಿನಿಥಿಗಳಿಗೆ ಗೌರವ ಕೊಡುತ್ತಿಲ್ಲವೆಂಬ ಆರೋಪವಿದೆ.ಜನರಿoದ ಆಯ್ಕೆಯಾದ ಪ್ರತಿನಿಥಿಗಳಿಗೆ ಅಧಿಕಾರಿಗಳು ಗೌರವ ನೀಡಬೇಕು.ಕೆಲ ಅಧಿಕಾರಿಗಳು ಮನಸೋ ಇಚ್ಚೆಯಂತೆ ವರ್ತಿಸುತ್ತಾರೆ ಎಂಬ ದೂರು ಕೇಳಿಬರುತ್ತಿದೆ.ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಬೇಕೆಂದು ಹೇಳಿಕೊಂಡು ಬoದಿದ್ದರೂ ಕೂಡಾ ನಾನು ವರ್ಗಾವಣೆಗೊಳಿಸಿಲ್ಲ.ಹಾಗಾಗಿ ಇದನ್ನು ಅರ್ಥಮಾಡಿಕೊಂಡು ಸಮಸ್ಯೆ ಹೇಳಿಕೊಂಡು ಬರುವ ಜನರಿಗೆ ಹಾಗೂ ಚುನಾಯಿತ ಪ್ರತಿನಿಥಿಗಳಿಗೆ ಗೌರವ ಕೊಡುವುದನ್ನು ಅಧಿಕಾರಿಗಳು ಕಲಿಯಬೇಕು ಎಂದು ಹೇಳಿದರು.

ಜಿ.ಪಂ.ಸಿಇಒ ಕೀರ್ತನ ಮಾತನಾಡಿ ಜನರ ವಿವಿಧ ಕುಂದುಕೊರತೆಯನ್ನು ಜನಪ್ರತಿಗಳಿಂದ ಕೇಳಿ ತಿಳುದುಕೊಳ್ಳುವ ಕಾರ್ಯಾಗಾರ ಏರ್ಪಡಿಸಲಾಗಿದೆ. ನರೇಗಾ ಯೋಜನೆಯಲ್ಲಿ ಅಭಿವೃದ್ದಿ ಕಾಮಗಾರಿ ನಿರ್ವಹಿಸಲು ಸ್ಥಳೀಯರಿಗೆ ಮಾತ್ರ ಅವಕಾಶವಿದ್ದರೂ ಕೂಡಾ ಅದು ದುರುಪಯೋಗವಾಗುತ್ತಿರುವ ದೂರುಗಳು ಕೇಳಿಬರುತ್ತಿದೆ.ಇದು ದುರುಪಯೋಗವಾದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚರ ವಹಿಸಬೇಕು. ಗ್ರಾ.ಪಂ.ಗೆ ಸಿಗುವ ಅನುದಾನದ ಬಳಕೆ ಬಗ್ಗೆ ಸಮನ್ವಯದಿಂದ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು.ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಮ್ಮತದಿಂದ ಕರ್ತವ್ಯ ನಿರ್ವಹಿಸಿದಲ್ಲಿ ಗ್ರಾಮ ಅಭಿವೃದ್ದಿಪಡಿಸಲು ಸಾಧ್ಯವಿದೆ. ಇಂತಹ ಕಾರ್ಯಾಗಾರವನ್ನು ಜಿಲ್ಲೆಯ ಎಲ್ಲ ತಾಲೂಕಿನಲಿಯೂ ಆಯೋಜಿಸಲಾಗುವುದು ಎoದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಕೃಷ್ಣ ನಾಯಕ್,ಜಿ.ಪಂ.ನಿರ್ಧೇಶಕಿ ನಯನಾ, ಸಹಾಯಕ ನಿರ್ಧೇಶಕ ಚೇತನ್,ತಾ.ಪಂ.ಇಒ ದಯಾವತಿ, ತರಬೇತುದಾರರಾದ ಚಾಲುಕ್ಯ, ಭಾರ್ಗವಿ,ರಾಜೇಂದ್ರ, ತಾ.ಪಂ ಸಹಾಯಕ ನಿರ್ಧೇಶಕ ನವೀನ್, ಪಿಡಿಒ ವಾಸುದೇವ್ ಮತ್ತಿತರರಿದ್ದರು.

…………ವರದಿ: ವಿಜಯಕುಮಾರ್.ಟಿ.

Leave a Reply

Your email address will not be published. Required fields are marked *

× How can I help you?