ಮೂಡಿಗೆರೆ:ತಾಲೂಕಿನ ಕಿರುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯದ ವೇಳೆ ಮಕ್ಕಳ ಎದುರೇ ಪರಸ್ಪರ ಜಗಳವಾಡುತ್ತಾ ಕರ್ತವ್ಯ ಲೋಪವೆಸಗಿದ್ದ ಮುಖ್ಯ ಶಿಕ್ಷಕಿ ಕಮಲಮ್ಮ, ಮತ್ತು ಸಹ ಶಿಕ್ಷಕಿಯರಾದ ಸುಶೀಲ ಮತ್ತು ವೀಣಾ ಎಂಬುವವರನ್ನು ಡಿ.ಡಿ.ಪಿ.ಐ ಜಿ.ಕೆ.ಪುಟ್ಟರಾಜು ಅಮಾನತ್ತುಗೊಳಿಸಿದ್ದಾರೆ.
ಮೂವರು ಶಿಕ್ಷಕಿಯರು ತಮ್ಮ ಕರ್ತವ್ಯ ನಿರ್ವಹಿಸದೆ ಬೇಜವಾಬ್ದಾರಿಯಿಂದ ವಿಧ್ಯಾರ್ಥಿಗಳ ಎದುರೇ ಪರಸ್ಪರ ನಿರಂತರವಾಗಿ ಜಗಳವಾಡುತ್ತಿದ್ದು ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡುತ್ತಿರಲಿಲ್ಲ. ಬಿಸಿಯೂಟದ ಆಹಾರ ಪದಾರ್ಥಗಳು ಮತ್ತು ಹಾಲಿನ ಪುಡಿಯನ್ನು ಮನೆಗೆ
ಕದ್ದೊಯ್ಯಲು ಬೇರೊಂದು ಕೊಠಡಿಯಲ್ಲಿ ಶೇಖರಿಸಿಡಲಾಗಿತ್ತು.ಗ್ರಾಮಸ್ಥರ ದೂರಿನ ಮೇರೆಗೆ ಅಂದಿನ ಬಿ.ಇ.ಒ ಹೇಮಂತಚoದ್ರ ಸಾರ್ವಜನಿಕರ ಎದುರೇ ಇದನ್ನು ಪತ್ತೆ ಹಚ್ಚಿ ಮುಖ್ಯ ಮುಖ್ಯ ರೂವಾರಿಯಾದ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜನೆ ಮೇಲೆ ಕಳುಹಿಸಿದ್ದರು.
ನಿಯೋಜನೆ ಅವಧಿ ಮುಗಿದ ಮೇಲೆ ಮತ್ತೆ ಆ ಶಿಕ್ಷಕಿ ಇದೇ ಶಾಲೆಗೆ ಪುನಹ ಕರ್ತವ್ಯಕ್ಕೆ ಆಗಮಿಸಿ ಎಂದಿನoತೆ ತನ್ನ ಜಗಳವನ್ನು ಮುಂದುವರಿಸಿದ್ದರು.ಶಾಲಾ ಆವರಣದಲ್ಲಿ ಕಾಡು ಬೆಳೆದು ಹಾವು ಚೇಳು ವಿನಂತಹ ವಿಷಜoತುಗಳು ಶಾಲಾ ಕೊಠಡಿಗೆ ಬರುತ್ತಿದ್ದರೂ ಸ್ವಚ್ಛತೆಯ ಬಗ್ಗೆ ಒಂದಿಷ್ಟೂ ನಿಗಾ ವಹಿಸಿರಲಿಲ್ಲ. ಶಾಲಾ ಶೌಚಗೃಹಕ್ಕೆ ಬಾಗಿಲಿಲ್ಲದ ಕಾರಣ ವಿಧ್ಯಾರ್ಥಿನಿಯರ ಶೌಚಕ್ಕೆ ಬಹಳ ಕಷ್ಟಕರವಾಗಿತ್ತು. ಪಾಠ ಪ್ರವಚನ ನಡೆಯದ ಕಾರಣ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಿದ್ದರು.ಇದರಿಂದಾಗಿ 150 ವಿಧ್ಯಾರ್ಥಿಗಳಿದ್ದ ಶಾಲೆಯಲ್ಲಿ 34 ವಿಧ್ಯಾರ್ಥಿಗಳು ಮಾತ್ರ ಉಳಿದಿದ್ದರು.
ಶಾಲೆಗೆ ಪೋಷಕರಾಗಲಿ ಎಸ್.ಡಿ.ಎಂ.ಸಿ ಸದಸ್ಯರಾಗಲಿ ಬೇಟಿ ನೀಡುವಂತಿರಲಿಲ್ಲ.ಬೇಟಿ ನೀಡಿದರೆ ಮುಖ್ಯ ಶಿಕ್ಷಕಿ ತಮ್ಮ ಮೊಬೈಲ್‌ನಲ್ಲಿ ಅವರ ವಿಡಿಯೋ ತೆಗೆಯುತ್ತಿದ್ದರು. ಈ ಬಗ್ಗೆ ಕೇಳಿದರೆ ಸೀರೆ ಹರಿದುಕೊಂಡು ಪೋಲೀಸರಿಗೆ ದೂರು ನೀಡುವುದಾಗಿ ಬೆದರಿಕೆ
ಒಡ್ಡುತ್ತಿದ್ದರು. ಎಸ್.ಡಿ.ಎಂ.ಸಿ ಮಾಸಿಕ ಸಭೆ ನಡೆಸಿ ತೀರ್ಮಾನಿಸಲಾದ ವಿಷಯಗಳನ್ನು ನಡಾವಳಿ ಪುಸ್ತಕದಲ್ಲಿ ನಮೂದಿಸುತ್ತಿರಲಿಲ್ಲ.ಈ ಬಗ್ಗೆ ಗ್ರಾಮಸಬೆಯಲ್ಲಿ ಚರ್ಚೆ ನಡೆದು ಮೂವರು ಶಿಕ್ಷಕಿಯರನ್ನು ವರ್ಗಾವಣೆಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು.
ಮಕ್ಕಳ ಪೋಷಕರು ಹಾಗೂ ಎಸ್.ಡಿ.ಎಂ.ಸಿ ನೀಡಿದ ದೂರಿನ ಮೇರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎರಡು ಬಾರಿ ತನಿಖೆ ನಡೆಸಿ ವರದಿ ನೀಡಲಾಗಿತ್ತು. ಅದರಂತೆ ಡಿ.ಡಿ.ಪಿ.ಐ ಜಿ.ಕೆ.ಪುಟ್ಟರಾಜು ಸೋಮವಾರ ಮೂವರು ಶಿಕ್ಷಕಿಯರನ್ನು ಅಮಾನತ್ತುಗೊಳಿಸಿ ಅದೇಶ ನೀಡಿದ್ದರು, ಕೊನೆಯ ಕ್ಷಣದಲ್ಲಿ ಅದೇಶದ ಪ್ರತಿಯನ್ನು ಶಿಕ್ಷಕಿಯರಿಗೆ ರವಾನಿಸದೆ ತಡೆಹಿಡಿಯಲಾಗಿತ್ತು. ಇದರಿಂದ ಅಕ್ರೋಶಗೊoಡ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಅಲ್ಲದೆ ಎಸ್‌ಡಿಎಂಸಿ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಲು ತೀರ್ಮಾ ನಿಸಲಾಗಿತ್ತು. ಪರಿಸ್ತಿತಿ ವಿಕೋಪಕ್ಕೆ ತಿರುಗುವುದನ್ನು ಗ್ರಹಿಸಿದ ಅಧಿಕಾರಿಗಳು ಗುರುವಾರ ಮೂವರು ಶಿಕ್ಷಕಿಯರಿಗೆ ಅಮಾನತ್ತು ಅದೇಶ ಜಾರಿಮಾಡಿದ್ದಾರೆ.
————ವಿಜಯಕುಮಾರ್, ಮೂಡಿಗೆರೆ