ಮೂಡಿಗೆರೆ:ಅಂಬೇಡ್ಕರ್ ಕೇವಲ ಒಂದು ಪಂಗಡಕ್ಕೆ ಸೀಮಿತವಲ್ಲ-ಅವರ ಸಿದ್ದಾಂತದ ಆಳ ತಿಳಿಯದವರಿಂದ ಕಂದಕ ಸೃಷ್ಟಿಸುವ ಕೆಲಸ-ಸಚಿನ್ ಬಾನಳ್ಳಿ.

ಮೂಡಿಗೆರೆ:ಪಟ್ಟಣದಲ್ಲಿ ನಡೆದ ಭೀಮ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರನೊಬ್ಬ ಬಿ.ಜೆ.ಪಿ,ಸಂಘ ಪರಿವಾರ ಹಾಗು ಕೆಲವು ಜಾತಿಗಳನ್ನು ತೆಗಳಿದ್ದು ಅಕ್ಷಮ್ಯ.ಇಂತಹ ಪ್ರತ್ಯೇಕವಾದಿ ಮನಸುಗಳು ಭಾಷಣ ಮಾಡುವ ನೆಪದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ಒಂದು ವರ್ಗ ಪಂಗಡಕಕ್ಕೆ ಸೀಮಿತಗೊಳಿಸುತ್ತಿರುವುದು ದುರದೃಷ್ಟಕರ ಎಂದು ಬಿ.ಜೆ.ಪಿ ಎಸ್.ಸಿ ಮೋರ್ಚ ಅಧ್ಯಕ್ಷ ಸಚಿನ್ ಬಾನಳ್ಳಿ ಬೇಸರ ಹೊರಹಾಕಿದ್ದಾರೆ.

ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು,ಕಳೆದ ವಾರ ಭೀಮ ಕೋರೆಗಾವ್ ವಿಜಯೋತ್ಸ ವವನ್ನು ಮೂಡಿಗೆರೆಯಲ್ಲಿ ಎಲ್ಲಾ ಜನಾಂಗ ಮತ್ತು ಪಕ್ಷದ ಪ್ರಮುಖರು ಸೇರಿಕೊಂಡು ವಿಜ್ರಂಭಣೆಯಿಂದ ಆಚರಿಸಲಾಗಿತ್ತು. ಮತ್ತು ಯಾವುದೇ ಅಹಿತಕರ ಘಟನೆಗಳು ನಡೆದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು.

ಇದರ ಮಧ್ಯೆ ಅಂಬೇಡ್ಕರ್ ದ್ಯೇಯ ಸಿದ್ಧಾಂತ ,ಭೀಮಾ ಕೋರೆಗಾವ್ ಯುದ್ಧದ ಇತಿಹಾಸ ಮತ್ತು ದೇಶದ ಜನತೆಗೆ ಬಾಬಾಸಾಹೇಬರು ನೀಡಿದ ಕೊಡುಗೆಯನ್ನು ವಿಶ್ವಕ್ಕೆ ಸಾರಬೇಕಾದ ಹಾಗು ದಿನವು ಇವರ ಮಾನವಿಯ ಮೌಲ್ಯವನ್ನು ಹೆಚ್ಚಿಸಬೇಕಾದ ಈ ದಿನಗಳಲ್ಲಿ ಪ್ರಮುಖ ಭಾಷಣಕಾರ ಅಂದು ಸಮಾಜವನ್ನು ಒಡೆಯುವ ಮನಸ್ಥಿತಿಯ ಯೋಜನೆಯೊಂದಿಗೆ ಉತ್ತಮ ವೇದಿಕೆಯೊಂದನ್ನು ಅವರಿವರನ್ನು ದೋಷಿಸುವುದಕ್ಕೆ ಬಳಸಿ ಕೊಂಡಿದ್ದು ನಾಚಿಕೆಗೇಡು.

ಇದು ಭಾರತ ರತ್ನ ಬಾಬಾಸಾಹೇಬರಿಗೆ ಮಾಡಿದ ಅವಮಾನ.ವಿದೇಶಿಯರು ಮತ್ತು ಭಾರತೀಯರು ದೇಶಭಕ್ತ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರಿಗೆ ಯಾವುದೇ ಜಾತಿ ಮತ ಭೇದವಿಲ್ಲದೆ ಗೌರವ ನೀಡುತ್ತಿದ್ದು, ಇದೆಲ್ಲವನ್ನು ಗೊತ್ತಿದ್ದರು ಸಮಾಜ ಒಡೆಯುವ ಕಾರ್ಖಾನೆಯಲ್ಲಿ ಪಳಗಿಕೊಂಡು,ಇನ್ನೊಬ್ಬರ ಸಿದ್ದಾಂತದ ಅಳ ತಿಳಿಯದೆ ಪ್ರಶಸ್ತಿ,ಅಧಿಕಾರದ ಆಸೆಗೆ,ಮಲೆನಾಡಿನ ಒಗ್ಗಟ್ಟನ್ನು ಒಡೆಯುವ ಕುತಂತ್ರ ಮಾಡುತ್ತಿದ್ದು ಇದು ಖಂಡನೀಯ ಎಂದಿದ್ದಾರೆ.

ಜೊತೆಗೆ ಇವರಿಗೆ ಕುಮ್ಮಕ್ಕು ಕೊಡುವ ಮನಸ್ಥಿತಿಯವರು ಜೈಕಾರ ಹಾಕುತ್ತಿರುವುದು ವಿಷಾಧನೀಯವಾಗಿದ್ದು, ಸಂಘಟಕರು ವಿಚಿದ್ರಕಾರಿ ಮನಸ್ಥಿತಿಯ ಜನರನ್ನು ಕಾರ್ಯಕ್ರಮಗಳಿಗೆ ಕರೆಸದೆ ಇರುವುದು ಒಳಿತು.ದೇಶದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಅನಿಷ್ಠಗಳನ್ನು ಖಂಡಿಸುವ ಕಾರ್ಯವಾಗಬೇಕೆ ಹೊರತು ಬಿ.ಆರ್ ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಕೆಲಸ ಬೇಡ ಎಂದು ತಿಳಿಸಿದ್ದಾರೆ.

———–—ಆಶಾ ಸಂತೋಷ್ ಅತ್ತಿಗೆರೆ

Leave a Reply

Your email address will not be published. Required fields are marked *

× How can I help you?