ಮೂಡಿಗೆರೆ:ಬಿ.ಹೊಸಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ-ಫಲ್ಗುಣಿ ಇದರ ನೂತನ ಅಧ್ಯಕ್ಷರ ಆಯ್ಕೆ ಮಂಗಳವಾರ ನಡೆಯಿತು.ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ.ರಮೇಶ್ ಬಾನಹಳ್ಳಿ ಅವಿರೋಧ ಆಯ್ಕೆಯಾದರು.
ಈ ವೇಳೆ ಸಹಕಾರಿ ಕ್ಷೇತ್ರದ ಹಿರಿಯ ಧುರೀಣ ಒ.ಎಸ್.ಗೋಪಾಲಗೌಡ ಮಾತನಾಡಿ,ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಸಹಾಯವಾಗುವಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕು.ರೈತರ ಬದುಕು ಕಷ್ಟದಲ್ಲಿದೆ.ಅತೀಯಾದ ಮಳೆಯಿಂದ ಜಮೀನು ನಾಶವಾಗಿದೆ. ಬೆಳೆ ನೆಲಕಚ್ಚಿದೆ. ಇದರೊಂದಿಗೆ ಕಾಡಾನೆ ಮತ್ತಿತರೆ ಕಾಡುಪ್ರಾಣಿಗಳ ಕಾಟದಿಂದ ರೈತರು ತಮ್ಮ ಜಮೀನನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.ತೋಟಗದ್ದೆಗಳನ್ನು ಪಾಳುಬಿಡುವ ಪರಿಸ್ಥಿತಿ ಬಂದಿದೆ.
ಹೀಗೆ ಮುಂದುವರಿದಲ್ಲಿ ಜನರ ಅಹಾರಕ್ಕೂ ಕಷ್ಟ ಪಡಬೇಕಾಗುತ್ತದೆ.ಹಾಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು.ಕಾಡಾನೆ ಕಾಡು ಪ್ರಾಣಿಗಳ ಹಾವಳಿಗೆ ಮುಕ್ತಿ ದೊರಕಿಸಬೇಕು. ಅತೀವೃಷ್ಟಿಯಿಂದ ಜಮೀನು ಮತ್ತು ಬೆಳೆ ಹಾನಿಗೆ ಪರಿಹಾರ ನೀಡಬೇಕು.ಸರ್ಫೇಸಿ ಕಾಯ್ದೆ ಮತ್ತು ಕಸ್ತೂರಿ ರಂಗನ್,ವರದಿ ರೈತರಿಗೆ ಮಾರಕವಾಗಿದೆ.ಇವೆರಡನ್ನೂ ಸರ್ಕಾರ ತಿರಸ್ಕರಿಸಬೇಕು, ಸಹಕಾರಿ ಕ್ಷೇತ್ರದಲ್ಲಿ ರೈತರು ಕೂಲಿಕಾರ್ಮಿಕರಿಗೆ ಉಪಯುಕ್ತವಾದ ಯೋಜನೆ ರೂಪಸಿಬೇಕು.ಹೈನುಗಾರಿಕೆ, ಸ್ವದ್ಯೋಗ ತರಬೇತಿಗೆ ಹೆಚ್ಚಿನ ಅನುದಾನ ಮೀಸಲಿರಿಸಬೇಕು.ವ್ಯಾಪಾರಕೈಗಾರಿಕೆ,ಸ್ವಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷ ಹೆಚ್.ಟಿ.ಪ್ರಸನ್ನ, ಕೆ.ಬಿ.ಗೋಪಾಲ ಗೌಡ, ಒ.ಜಿ.ರವಿ, ಬಿ.ಎಸ್.ರಕ್ಷಿತ್, ಹೆಚ್.ಅಮೋಘ, ಹೆಚ್.ಎಂ.ರಚನಾ ಅರುಣ, ಹೆಚ್.ಕೆ.ಸಾವಿತ್ರಿ,ಟಿ.ಎ.ಶೇಖರ್ ಪೂಜಾರಿ, ಎಸ್.ಸುಂದರ. ಬಿ.ಎಲ್.ಉಪೇಂದ್ರ ಹೆಚ್.ಎ.ದ್ಯಾವಣ್ಣ ಗೌಡ, ಚುನಾವಣಾಧಿಕಾರಿ ಜ್ಯೋತಿ ಲಕ್ಷಿö್ಮ, ಮೇಲ್ವಿಚಾರಕ ಯು.ಸಿ.ಪ್ರಯಾಗ್, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
ಬಿ.ಆರ್.ವೇಣುಗೋಪಾಲ್ ಇದ್ದರು.
———————-ವಿಜಯಕುಮಾರ್.ಟಿ.