ಮೂಡಿಗೆರೆ:ಗ್ರಾಮೀಣ ಕ್ರೀಡಾಪಟುಗಳಿಗೆ ಸಂಘ-ಸoಸ್ಥೆಗಳು ಪ್ರೋತ್ಸಾಹ ನೀಡಿದರೆ ಪ್ರತಿಭೆ ಅನಾವರಣಗೊಳ್ಳುತ್ತದೆ-ಸಾತಿ ಸುಂದರೇಶ್

ಮೂಡಿಗೆರೆ:ಗ್ರಾಮೀಣ ಭಾಗದಲ್ಲಿ ಎಲೆಮರೆಕಾಯಿಯಂತಿರುವ ಕ್ರೀಡಾ ಪ್ರತಿಭೆಗಳಿಗೆ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಿದರೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ಅವಕಾಶ ಸಿಕ್ಕಂತಾಗುತ್ತದೆ ಎಂದು ಮಾಜಿ ಜಿ.ಪಂ.ಸದಸ್ಯ ಸಾತಿ ಸುಂದರೇಶ್ ಹೇಳಿದರು.

ಬೆoಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸಾಫ್ಟ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆ.ಎಸ್.ಪಿ ಎಲ್ ಸಾಫ್ಟ್ ಬಾಲ್ ಕ್ರಿಕೆಟ್ ಲೀಗ್ ಮಂಗಳೂರು ತಂಡವನ್ನು ತರಬೇತುಗೊಳಿಸಿ ತಂಡ ಪ್ರಥಮ ಸ್ಥಾನಗಳಿಸಲು ಕಾರಣರಾದ ರಮೇಶ್ ಕೆಳಗೂರು, ರಾಷ್ಟ್ರೀಯ ಕಬ್ಬಡಿ ಕ್ರೀಡಾಕೂಟಕ್ಕೆ ಕರ್ನಾಟಕ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಎಸ್.ರಕ್ಷಿತಾ, ಕಿರುತೆರೆ ಹಾಸ್ಯನಟ ರಮೇಶ್ ಯಾದವ್ ಅವರಿಗೆ ವಿವಿದ ಸಂಘಟನೆಗಳಿoದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಲಾದ ಅಭಿನಂದನಾ ಸಮಾರoಭದಲ್ಲಿ ಮಾತನಾಡಿ, ಗ್ರಾಮೀಣ ಕ್ರೀಡೆಗಳಾದ ಕಬ್ಬಡಿ,ಕೊಕ್ಕೋ,ಲಗೋರಿ, ಚಿನ್ನಿದಾಂಡು, ಮರಕೋತಿ, ವಾಲಿಬಾಲ್ ಸೇರಿದಂತೆ ವಿವಿಧ ಆಟಗಳನ್ನು ಮಕ್ಕಳು ಮತ್ತು ಯುವಕರು ಈಗಲೂ ಆಡುತ್ತಾರೆ. ಶಾಲೆ ಮತ್ತು ಕಾಲೇಜಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ವಿಧ್ಯಾರ್ಥಿಗಳು ಭಾಗವಹಿಸಿ ಕ್ಲಸ್ಟರ್,ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೂ ತಲುಪುವ ಅವಕಾಶ ಕೆಲ ಕ್ರೀಡಾಪಟುಗಳಿಗೆ ಮಾತ್ರ ಸಿಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ವಿಧ್ಯಾರ್ಥಿ ಗಳು ಅವಕಾಶವಿಲ್ಲವೆಂಬ ನಿರಾಸೆಯಿಂದ ಆಟವನ್ನು ಮೊಟಕುಗೊಳಿಸಿ ಕ್ರೀಡೆಯಿಂದ ಹಿಂದೆ ಸರಿಯುತ್ತಾರೆ.

ಗ್ರಾಮೀಣ ಭಾಗದಲ್ಲಿರುವ ಸಂಘ-ಸoಸ್ಥೆಗಳು ತಿoಗಳಿಗೊoದರoತೆ ಕ್ರೀಡಾಕೂಟವನ್ನು ಆಯೋಜಿಸಿದರೆ ಕ್ರೀಡೆಯಿಂದ ದೂರ ಉಳಿಯುವ ಎಲ್ಲ ಕ್ರೀಡಾಪಟುಗಳಿಗೂ ಮತ್ತೊಮ್ಮೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಸಿಪಿಐ ಪಕ್ಷದ ಜಿಲ್ಲಾ ಮುಖಂಡ ಬಿ.ಕೆ. ಲಕ್ಷ್ಮಣ್ ಕುಮಾರ್ ಮಾತನಾಡಿ ಕ್ರೀಡಾ ತರಬೇತುದಾರ ರಮೇಶ್ ಕೆಳಗೂರು ಅವರು ಉತ್ತಮ ಕ್ರೀಡಾಪಟುಗಳಾಗಿದ್ದು ಅವರು ಕೆಎಸ್‌ಪಿಎಲ್ ಸಾಫ್ಟ್ ಬಾಲ್ ಕ್ರಿಕೆಟ್ ಲೀಗ್ ಮಂಗಳೂರು ತಂಡದ ಮುಖ್ಯ ತರಬೇತುದಾರರಾಗಿ ತಂಡವನ್ನು ಉತ್ತಮರೀತಿಯಲ್ಲಿ ತರಬೇತುಗೊಳಿಸಿ ಗೆಲುವಿಗೆ ಕಾರಣರಾಗಿದ್ದಾರೆ.ಅವರ ಪ್ರತಿಬೆ ಗ್ರಾಮೀಣ ಭಾಗದ ಮಕ್ಕಳಿಗೆ ಕೊಡುಗೆಯಾಗಿದೆ ಎಂದು ತಿಳಿಸಿದರು.

ತರಬೇತುದಾರ ರಮೇಶ್ ಕೆಳಗೂರು ಹಾಗೂ ಕಬಡ್ಡಿ ಪಟು ಎಸ್.ರಕ್ಷಿತಾ, ಹಾಸ್ಯನಟ ರಮೇಶ್ ಯಾದವ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಭೀಮಾ ಕೊರೆಗಾಂವ್ ಆಚರಣಾ ಸಮಿತಿ ತಾಲೂಕು ಘಟಕದ ಅದ್ಯಕ್ಷ ಸುಂದರೇಶ್ ಕನ್ನಾಪುರ, ಹರೀಶ್, ಕಿರಣ್, ರುದ್ರೇಶ್,ಭಾನುಪ್ರಕಾಶ್,ಪೂರ್ಣೇಶ್, ಸುಂದ್ರೇಶ್ ಹೊಯ್ಸಳಲು,ಜಗದೀಶ್ ಚಕ್ರವರ್ತಿ,ನಾಗೇಶ್ ಮಡ್ಡಿಕೆರೆ ,ಸುರೇಶ್, ಗಣೇಶ್, ಚಂದ್ರೇಶ್, ಸುರೇoದ್ರ, ರಘು ಮತ್ತಿತರರಿದ್ದರು.

…………ವರದಿ:ವಿಜಯಕುಮಾರ್.ಟಿ, ಮೂಡಿಗೆರೆ

Leave a Reply

Your email address will not be published. Required fields are marked *

× How can I help you?