ಡಿಸೆಂಬರ್ 7ಕ್ಕೆ ‘ತೇಜಸ್ವಿ ಪ್ರತಿಷ್ಠಾನ’ದಲ್ಲಿ ‘ಪುಸ್ತಕ ಪರಿಶೆ’ ಕಾರ್ಯ ಕ್ರಮ-ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾ ರಿಗಳು,ಪುಸ್ತಕ ಪ್ರಕಟಣೆ ಕುರಿತು ಸಂವಾದ

ಮೂಡಿಗೆರೆ:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿಸೆಂಬರ್ 7 ರಂದು ಪುಸ್ತಕ ಪರಿಶೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಾರ್ಯಕ್ರಮ ಡಿಸೆಂಬರ್ 7ರ ಶನಿವಾರ ಬೆಳಿಗ್ಗೆ 9.30ಕ್ಕೆಪ್ರಾರಂಭವಾಗಲಿದ್ದು ಕಾರ್ಯಕ್ರಮದಲ್ಲಿ ವಿವಿಧ ಸಂವಾದಗಳು ನಡೆಯಲಿದೆ.ಪುಸ್ತಕ ಪ್ರಕಟಣೆ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಸಂವಾದ ನಡೆಯಲಿದ್ದು ಇದು ಲೇಖಕರಿಗೆ ಉಪಯುಕ್ತ ಕಾರ್ಯಕ್ರಮವಾಗಿದೆ.ರಾಜ್ಯದ ವಿವಿಧ ಪ್ರಕಾಶನ ಸಂಸ್ಥೆಗಳ ಪ್ರಕಾಶಕರು, ಲೇಖಕರು ಸಂವಾದಲ್ಲಿ ವಿಷಯ ಮಂಡನೆ ಮಾಡಲಿದ್ದು ಪುಸ್ತಕ ಪ್ರಕಟಣೆ ಮಾಡುವ ಆಸಕ್ತಿ ಹೊಂದಿರುವ ಲೇಖಕರು ಇದರ ಸಧ್ಬಳಕೆ ಮಾಡಿಕೊಳ್ಳಬಹುದಾಗಿರುತ್ತದೆ.ಇದಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣ ಸೇರಿದಂತೆ ಬರಹದ ಹೊಸ ಮಾದ್ಯಮ ಸಾಧ್ಯತೆಗಳ ಬಗ್ಗೆ ಉಪಯುಕ್ತ ಚರ್ಚೆ ನಡೆಯಲಿದೆ. ಪ್ರಸ್ತುತ ಸಂದರ್ಭಕ್ಕೆ ಅನ್ವಯವಾಗುವಂತಹ ಬರಹದ ಆಶಯಗಳು, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಯ ಕುರಿತು ಸಂವಾದ ನಡೆಯಲಿದ್ದು ಸಾಹಿತ್ಯ ವಲಯಕ್ಕೆ ಉಪಯುಕ್ತವಾಗಲಿದೆ.

ಕಾರ್ಯಕ್ರಮದಲ್ಲಿ ಆಯೋಜಿಸಲಾಗಿರುವ ಪುಸ್ತಕ ಪ್ರಕಟಣೆ ಮಾರುಕಟ್ಟೆ ಕುರಿತ ಸಂವಾದಲ್ಲಿ ಪ್ರಕಾಶಕರಾದ ಆರ್.ಜಿ.ನಾಗರಾಜ್, ಹರಿವು ಬುಕ್ಸ್ನ ಪ್ರಕಾಶಕರಾದ ರತೀಶ್ ಬಿ.ಆರ್, ಮಿಂಚುಳ್ಳಿಪ್ರಕಾಶನದ ಸೂರ್ಯಕೀರ್ತಿ ಭಾಗವಹಿಸಲಿದ್ದಾರೆ. ಬರಹದ ಹೊಸ ಮಾದ್ಯಮ ಸಂವಾದದಲ್ಲಿ ಪ್ರತಿಲಿಪಿ ಕನ್ನಡ ವಿಭಾಗದ ನಿರ್ವಾಹಕರಾದ ಅಕ್ಷಯ್ ಬಾಳೆಗೆರೆ, ಚಿತ್ರಕತೆ ಬರಹಗಾರರು, ಪತ್ರಕರ್ತರಾದ ವಿಕಾಸ್ ನೇಗಿಲೋಣಿ, ಮುಂಬೈ ಯುವ ಕನ್ನಡದ ಸಾಂಸ್ಕೃತಿಕ ಸಂಘಟನಾಕಾರರಾದ ಕುನಾಲ್ ಕನ್ನಡಿಗ ಅವರು ಭಾಗವಹಿಸಲಿದ್ದಾರೆ.

ಬರಹದ ಆಶಯ, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು ಕುರಿತ ಸಂವಾದದಲ್ಲಿ ವಿಮರ್ಶಕರಾದ ಡಾ.ಹೆಚ್. ಎಸ್.ಸತ್ಯನಾರಾಯಣ, ಕವಯತ್ರಿ ಭಾಗ್ಯಜ್ಯೋತಿ ಹಿರೇಮಠ, ಲೇಖಕರಾದ ಜಯರಾಮಾಚಾರಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಪುಸ್ತಕ ಪರಿಶೆ ಕಾರ್ಯಕ್ರಮದಲ್ಲಿ 100ಲೇಖಕರಿಗೆ ಮಾತ್ರ ಅವಕಾಶವಿದ್ದು ರೂ500 ಪಾವತಿಸಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 8277589859,9663098873ಸಂಖ್ಯೆಗೆ ಸಂಪರ್ಕಿಸ ಬಹುದಾಗಿದೆ.

ಡಿಸೆಂಬರ್ 8 ಕ್ಕೆ ದೇವರಮನೆಗೆ ಚಾರಣ

ಅಕ್ಷರ ಪರಿಶೆ ಕಾರ್ಯಕ್ರಮದ ಮರುದಿನ ಡಿಸೆಂಬರ್ 8 ರಂದು ದೇವರಮನೆಗೆ ಚಾರಣ ಕಾರ್ಯಕ್ರಮ ಆಯೋಜಿ ಸಲಾಗಿದ್ದು ಅಕ್ಷರ ಪರಿಶೆ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿದವರು ಮಾತ್ರ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಚಾರಣದಲ್ಲಿ ಭಾಗವಹಿಸುವವರು ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಊಟ, ವಾಹನ ವ್ಯವಸ್ಥೆ, ಕಾಫಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

…………. ವರದಿ:ವಿಜಯಕುಮಾರ್.ಟಿ.

Leave a Reply

Your email address will not be published. Required fields are marked *

× How can I help you?