ಮೂಡಿಗೆರೆ:ವಕೀಲರ ದಿನಾಚರಣೆ-ವಕೀಲರ ಸಮಾಜಮುಖಿ ಚಿಂತನೆಯಿoದಾಗಿ ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುತ್ತಿದೆ:ವಿ.ಜಯಪ್ರಕಾಶ್

ಮೂಡಿಗೆರೆ:ವಕೀಲರು ಕೇವಲ ನ್ಯಾಯದ ಪಾಲಕರಷ್ಟೇ ಅಲ್ಲದೆ ಸಾಮಾಜಿಕ ಬದಲಾವಣೆಯ ಪ್ರಮುಖ ಅಂಶವಾ ಗಿದ್ದಾರೆ.ಇoತಹ ವಕೀಲರ ಸಮಾಜಮುಖಿ ಚಿಂತನೆಯಿoದಾಗಿ ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುತ್ತಿದೆ ಎಂದು ಮೂಡಿಗೆರೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಜಯಪ್ರಕಾಶ್ ಹೇಳಿದರು.

ಅವರು ಮಂಗಳವಾರ ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ರಾಜೇಂದ್ರ ಪ್ರಸಾದ್ ಅವರ ನೆನಪಿನಲ್ಲಿ ಪ್ರತಿವರ್ಷ ವಕೀಲರ ದಿನಾಚರಣೆ ಆಚರಿಸಲಾಗುತ್ತಿದ್ದು, ಅಂತಹ ಮಹಾನ್ ಚೇತನಗಳ ಜನ್ಮದಿನಗಳನ್ನು ಆಚರಿಸುವುದು ಎಲ್ಲರ ಸಾಮಾಜಿಕ ಹೊಣೆಯ ಭಾಗವಾಗಿದೆ.ಪ್ರತಿದಿನ ನ್ಯಾಯಾಲಯದ ಕಲಾಪ ನಿರ್ವಹಿಸುವ ವಕೀಲರು ಒಂದು ದಿನ ಮಹಾನ್ ಚೇತನರನ್ನು ಸ್ಮರಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಯ ದಿನಾಚರಣೆ ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರು ಎ.ವಿಶ್ವನಾಥ್ ಮಾತನಾಡಿ, ಡಾ.ಪ್ರಸಾದ್ ಮಹಾನ್ ವಕೀಲ, ಸ್ವಾತಂತ್ರ‍್ಯ ಹೋರಾಟಗಾರ ಮತ್ತು ಭಾರತದ ಪ್ರಥಮ ರಾಷ್ಟ್ರಪತಿಯಾಗಿದ್ದರು. ಅವರ ತ್ಯಾಗ ಮತ್ತು ದೇಶಭಕ್ತಿ ನಮ್ಮ ಕಾನೂನು ವ್ಯವಸ್ಥೆಗೆ ಶಾಶ್ವತ ಬೆಳಕಾಗಿದೆ. ನಮ್ಮ ಕರ್ತವ್ಯ ಸಮಾಜದ ಬದಲಾವಣೆಗೆ ಮಾರ್ಗದರ್ಶಿಯಾಗಬೇಕೆಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ನಟರಾಜ್, ಕೆ.ಸಿ. ಚಂದ್ರಶೇಖರ್,ವಕೀಲರಾದ ಎಂ.ಎಸ್.ಗೋಪಾಲಗೌಡ, ಕೆ.ಎಸ್.ಆದಿತ್ಯ, ಬಿ.ಜಗದೀಶ್, ಎಂ.ವಿ.ಜಯರಾಜ್,ಕೆ.ವಿಶಾಲ ಮತ್ತಿತರರಿದ್ದರು.

ವರದಿ: ವಿಜಯಕುಮಾರ್.ಟಿ.

Leave a Reply

Your email address will not be published. Required fields are marked *

× How can I help you?