ಮೂಡಿಗೆರೆ-ಸಾಧಾರಣ ವ್ಯಕ್ತಿಯೊಬ್ಬ ಅಸಾಮಾನ್ಯ ಸಾಧನೆ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ-ಸಾಹಿತಿ ಹಳೇಕೋಟೆ ರಮೇಶ್

ಮೂಡಿಗೆರೆ-ಸಾಧಾರಣ ವ್ಯಕ್ತಿಯೊಬ್ಬ ಅಸಾಮಾನ್ಯ ಸಾಧನೆ ಮೂಲಕ ಸಮಾಜ ದಲ್ಲಿ ಉನ್ನತ ಸ್ಥಾನಕ್ಕೇರಲು ಶಿಕ್ಷಕರ ಪಾತ್ರ ಬಹಳ ಮುಖ್ಯ ಸಾಹಿತಿ ಹಳೇಕೋಟೆ ರಮೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಸಿರಿಗನ್ನಡ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ಧ ಸಾಧಕರಿಗೆ ಅಭಿನಂದನಾ ಹಾಗೂ ಕ್ರೀಡಾ ಸಾಮಾಗ್ರಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯೆ ಜೊತೆಗೆ ಶಿಸ್ತು, ಸಂಯಮ, ವಿಧೇಯತೆ ಬೆಳೆಸಿಕೊಳ್ಳಬೇಕು.ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಮಾನಸಿಕ ಅರೋಗ್ಯದ ಮೇಲೆ ವಿಪರೀತ ದುಷ್ಪರಿಣಾಮಗಳು ಬಿರುತ್ತಿರುವುದು ನೋವಿನ ಸಂಗತಿ. ಹೀಗಾಗಿ ಅತಿಹೆಚ್ಚು ಪುಸ್ತಕಗಳ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಮೋಹನ್ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯನಿಗೆ ಮೌಲ್ಯಧಾರಿತ ಜೀವನ ಕಲಿಸುವುದೇ ನಿಜವಾದ ಶಿಕ್ಷಣ. ಶಿಕ್ಷಕರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವ ಶಿಲ್ಪಗಳಾಗಿದ್ದಾರೆ ಆದ್ದರಿಂದ ಶಿಕ್ಷಕರು ಮಕ್ಕಳ ನಾಡಿ ಮಿಡಿತ ಅರಿತು ವಿದ್ಯೆ ಕಲಿಸಬೇಕು ಎಂದರು.

ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪೂರ್ಣೇಶ್ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಜೀವನ ಬಹಳ ಅಮೂಲ್ಯವಾದದ್ದು, ವ್ಯಾಸಂಗದ ಜೊತೆಗೆ ಮುಂದಿನ ಜವಾಬ್ದಾರಿ ಅರಿವು ಕೂಡ ನಿಮಗಿರಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವುದು ಶಿಕ್ಷಕರ ಜವಾಬ್ದಾರಿ ಸಮಾಜದಲ್ಲಿ ಪರಿವರ್ತನೆಯ ಬೆಳಕು ತರುವ ಕೆಲಸ ಶಿಕ್ಷಕರು ಪ್ರಾಮಾಣಿಕವಾಗಿ ಮಾಡಬೇಕು ಎಂದು ಹೇಳಿದರು.

ಇದೇ ವೇಳೆ ಜಿಲ್ಲಾ ಅತ್ಯುತ್ತಮ ಶಿಕ್ಷಕಪ್ರಶಸ್ತಿ ವಿಜೇತ ಯಾಸ್ಮಿನ್ ಸುಲ್ತಾನ್ ರನ್ನು ಸನ್ಮಾನಿಸಲಾಯಿತು.

ದಾನಿಗಳಾದ ಚಂದ್ರಮತಿ ಚಂದ್ರಶೇಖರಯ್ಯ ಅವರಿಂದ ಶಾಲೆಗೆ ಕ್ರೀಡಾ ಸಾಮಗ್ರಿ ವಿತರಿಸಲಾಯಿತು.

ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಅಧ್ಯಕ್ಷ ಬಿ.ಎಸ್.ಒಂಕಾರ್, ಖಜಾಂಚಿ ಹಮೀದ್ ಸಬ್ಬೆನಹಳ್ಳಿ, ಪಟ್ಟಣ ಪಂಚಾಯಿತಿ ಸದಸ್ಯೆ ಕಮಲಮ್ಮ, ಶಾಲಾಭಿರುದ್ಧಿ ಸಮಿತಿ ಅಧ್ಯಕ್ಷೆ ಸಮೀನಾ ಬಾನು, ಮುಖಂಡರುಗಳಾದ ಮೈದಿನ್ ಇಸ್ಮಾಯಿಲ್, ಚಂದ್ರಮತಿ. ಗಂಗಾಧರಪ್ಪ, ಕುಮಾರ್ ರಾಜ್, ಆನಂದ್ ರಾಜ್, ಶಿಕ್ಷಕರಾದ ತೋಟಪ್ಪ, ಭಾರತಿ ಮತ್ತು ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತ ರಿದ್ದರು.

—————–ವಿಜಯ್ ಕುಮಾರ್ ಟಿ

Leave a Reply

Your email address will not be published. Required fields are marked *

× How can I help you?