ಮುಧೋಳ-ಪಟ್ಟಣದ ವಾಹನ ದಟ್ಟಣೆ ನಿವಾರಿಸುವ ಹಾಗು ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬೈ ಪಾಸ್ ರಸ್ತೆಯ ನಿರ್ಮಾಣಕ್ಕೆ ಸರಕಾರದಿಂದ 12 ಕೋಟಿ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.
ಲೋಕೋಪಯೋಗಿ ಇಲಾಖೆಯಿಂದ ರಸ್ತೆಗೆ ಭೂಮಿ ನೀಡಿದ ರೈತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈ ಬೈ ಪಾಸ್ ನಿರ್ಮಾಣ ನನ್ನ 25 ವರ್ಷಗಳ ಕನಸ್ಸು.ಇಂದದು ನನಸಾಗಿದೆ.ಇದಕ್ಕೆ ಕಾರಣವಾಗಿದ್ದು ನೀವು ಕೊಟ್ಟ ಮತ ಎಂದರು.
ಈ ಮಹಾಲಿಂಗಪುರ ರಸ್ತೆ, ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಈ ರಸ್ತೆ ರೈತರಿಗೆ ಅನುಕೂಲವಾಗುತ್ತದೆಯಲ್ಲದೆ ಅಪಘಾತಗಳ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಲಿದೆ ಎಂದರು.
ರಸ್ತೆ ನಿರ್ಮಾಣಕ್ಕಾಗಿ ರೈತರುಗಳಾದ ಸದಾಶಿವ ಕದಂ, ಶಾಂತವ್ವ ಹೊಸಮನಿ, ಯುವರಾಜ ಘೋರ್ಪಡೆ ಅವರ 7.27 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು ಅದಕ್ಕೆ ಪರಿಹಾರ ಕೂಡಾ ಒದಗಿಸಲಾಗಿದೆ ಎಂದು ಸಚಿವ ತಿಮ್ಮಾಪೂರ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ನಗರಸಭೆ ಅಧ್ಯಕ್ಷ ಸುನಂದಾ ತೇಲಿ, ಉಪಾಧ್ಯಕ್ಷ ಖಾಜಾಮಿನ್ ಬಾಗವಾನ, ಗೋವಿಂದಪ್ಪ ಗುಜ್ಜನ್ನವರ, ರಾಘು ಮೋಕಾಸಿ, ಬಸವಂತ ಕಾಟೆ, ಮುದಕಣ್ಣ ಅಂಬಿಗೇರ, ಸಿಪಿಐ ಮಾಹಾದೇವ ಶಿರಹಟ್ಟಿ ಸೇರಿದಂತೆ ರೈತರು ಉಪಸ್ಥಿತರಿದ್ದರು.