ಚಿಕ್ಕಮಗಳೂರು– ಶಾಲಾಭಿವೃದ್ದಿ ಸಮಿತಿ ಸದಸ್ಯನನ್ನಾಗಿ ಆಯ್ಕೆ ಮಾಡಿರುವುದನ್ನು ಸಹಿಸದೇ, ಕೆಲವು ರಾಜಕೀಯ ಹಿತಾಸಕ್ತಿ ಹೊಂದಿರುವ ಮುಖಂಡರು ಶಾಲೆಯ ಅಭಿವೃದ್ಧಿ ಬಗ್ಗೆ ಗಮನ ಕೊಡದೇ ಕಾಲಹರಣ ಮಾಡುತ್ತಿವೆ ಎಂದು ನಗರಸಭಾ ಸದಸ್ಯ ಮುನಿರ್ ಅಹಮದ್ ಆರೋಪಿಸಿದರು.
ನಗರದ ಶಾಂತಿನಗರದಲ್ಲಿ ಮಾತನಾಡಿದ ಅವರು ವಾರ್ಡ್ ನಂ.18ರಲ್ಲಿರುವ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾರ್ಡ್ 17 ನೇ ನಿವಾಸಿಗಳ ಮಕ್ಕಳು ವ್ಯಾಸಂಗ ನಡೆಸುತ್ತಿವೆ. ಈ ಶಾಲೆಯ ತಿಂಗಳ ಸಭೆಗಳಿಗೆ ಆಗಮಿಸದ ಸ್ಥಳಿಯ ಜನಪ್ರತಿನಿಧಿಗಳು ಸುಖಸುಮ್ಮನೆ ತಮ್ಮ ಮೇಲೆ ಆರೋಪವೆಸಗಿ ಸುಳ್ಳು ಪ್ರಕಟಣೆ ನೀಡಿ ದೂಷಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಪ್ರಸ್ತುತ 17ನೇ ವಾರ್ಡಿನ ಉಪ್ಪಳ್ಳಿ ಸಮೀಪದ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆಗೆ ೬೫ ಲಕ್ಷ ರೂ. ವೆಚ್ಚ ದಲ್ಲಿ ಹೈಟೆಕ್ ಕಟ್ಟಡ ನಿರ್ಮಾಣ ಮಾಡಿದೆ. 25 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದೆ. ಹಾಗಾಗಿ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸ್ಥಳಿಯ ಜನಪ್ರತಿನಿಧಿಗಳು ಸವಲತ್ತು ಕೊಟ್ಟು ವಿದ್ಯಾಭ್ಯಾಸಕ್ಕೆ ಅನು ವು ಮಾಡಿಕೊಡುವುದು ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ತಬಸಮ್ ಮಾತನಾಡಿ 18ನೇ ವಾರ್ಡಿನ ನಗರಸಭಾ ಸದಸ್ಯರು ಪಿಎಂಶ್ರೀ ಸರ್ಕಾರಿ ಶಾಲೆಯ ಸಭೆಗೆ ಆಹ್ವಾನವಿದ್ದರೂ ಯಾವುದೇ ಸಭೆಗೆ ಆಗಮಿಸದೆ ನಿರ್ಲಕ್ಷ ತಾಳುತ್ತಿ ದ್ದಾರೆ. ಆದರೆ ಶಾಲೆಗೆ ಒಳಿತು ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಕೈಜೋಡಿಸದೇ ಪ್ರಶ್ನಿಸುವುದು, ಸುಳ್ಳು ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.
17ನೇ ವಾರ್ಡಿನ ಸದಸ್ಯರು ಈ ಶಾಲೆಗೆ ಬರಲು ಅವಕಾಶವಿಲ್ಲ ಎಂದು ವಿನಾಕಾರಣ ಅಪವಾದ ಮಾ ಡುತ್ತಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು 17ನೇ ವಾರ್ಡಿನ ಮಕ್ಕಳು ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು ಆ ವಾರ್ಡ್ನ ಸದಸ್ಯರನ್ನು ಶಾಲೆಗೆ ಬರಬೇಡಿ ಎಂದೇಳಲು 18 ವಾರ್ಡಿನ ಜನಪ್ರ ತಿನಿಧಿಗಳಿಗೆ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ಸಿಡಿಎ ಸದಸ್ಯ ಗುಣವತಿ ಮಾತನಾಡಿ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣ ಅವಶ್ಯಕತೆ ಇರಲಿದೆ. ಹೀಗಾಗಿ ಸ್ಥಳೀಯ ಜನಪ್ರತಿನಿಧಿ ವಿದ್ಯಾರ್ಜನೆಗೆ ಅನುಕೂಲವಾಗುವ ಚಟುವಟಿಕೆ, ಪಠ್ಯದ ಬಗ್ಗೆ ಗಮನಹರಿ ಸಬೇಕು. ಶಾಲೆಗಳಲ್ಲಿ ಇಲ್ಲಸಲ್ಲದ ಚಟುವಟಿಕೆಗಳಲ್ಲಿ ತೊಡಗಿ ಮಕ್ಕಳು ವಿದ್ಯಾಭ್ಯಾಕ್ಕೆ ತೊಂದರೆ ಕೊಡಬಾರ ದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಶೃತಿ, ಆಯಿಷಾ, ಸೈರುಲ್ಲಾ, ಸ್ಥಳೀಯರಾದ ತೌಫಿಕ್, ಉಮರ್ ಹಾಗೂ ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.