ಚಿಕ್ಕಮಗಳೂರು– ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2೦ನೇ ಕನ್ನಡ ಸಾಹಿತ್ಯ ಸಮ್ಮೇಳನ ತರೀಕೆರೆಯಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಚಿಕ್ಕಮಗಳೂರಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಗಾಯಕ ಎ.ಎನ್ .ಮೂರ್ತಿ ಇವರಿಗೆ ಕನ್ನಡ ಸಿರಿ ಪ್ರಶಸ್ತಿ ಮತ್ತು ಚಿಕ್ಕಮಗಳೂರು ನಗರ ಕಸಾಪ ಅಧ್ಯಕ್ಷ ಸಚಿನ್ ಸಿಂಗ್ ಅವರಿಗೆ ಸಂಘಟನಾ ಚತುರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷ ಮರಳು ಸಿದ್ದಯ್ಯ ಪಟೇಲ್, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಮುಖಂಡರುಗಳಾದ ದೀಪಕ್ ದೊಡ್ಡಯ್ಯ, ಪರಮೇಶ್ ಉಪಸ್ಥಿತರಿದ್ದರು.