ಮೈಸೂರು-ಪ್ರಾಣಿಪಕ್ಷಿಗಳ-ಪರಿಸರ-ಉಳಿಸುವ-ಸೇವಾ-ಮನೋಭಾವ-ಬೆಳಸಿಕೊಳ್ಳಬೇಕು- ಮಾಜಿ-ಸಂಸದ-ಪ್ರತಾಪ್ ಸಿಂಹ

ಮೈಸೂರು- ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು, ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರಿನಲ್ಲಿ ಬೇಸಿಗೆಯ ತಾಪಮಾನದಿಂದ ಜೀವಸಂಕುಲ ತತ್ತರಿಸುತ್ತಿದ್ದು ಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ಮೂಕಸ್ಪಂದನೆ ಎಂಬ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭೂಮಿಯ ಮೇಲೆ ಕಾಲಬದಲಾವಣೆ ಜಗದ ನಿಯಮ ಅದಕ್ಕೆ ಹೊಂದಿಕೊಂಡು‌‌ ಜೀವಿಸುವುದು ಪ್ರತಿಯೊಬ್ಬರ ಕರ್ತವ್ಯ, ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ ಆದರೆ ಹೆಚ್ಚು ಸಸಿಗಳನ್ನು ನೆಡಲು ಮುಂದಾದರೆ ಪ್ರಾಣಿಪಕ್ಷಿಗಳ ರಕ್ಷಣೆಯಾಗುತ್ತದೆ, ಭವಿಷ್ಯದ ಪರಿಸರ ಸಂರಕ್ಷಣೆಯ ಪರಿಕಲ್ಪನೆಯ ನಿಟ್ಟಿನಲ್ಲಿ ಮೈಸೂರು ಅರಸರು ಮೃಗಾಲಯ ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಮಾದರಿ ಬಡಾವಣೆಗಳ ಉದ್ಯಾನವನಗಳನ್ನು ನಿರ್ಮಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವುದು ಮೈಸೂರಿಗರ ಕರ್ತವ್ಯ ಎಂದರು.

ಹಿಂದಿನ ವರ್ಷಗಳಲ್ಲಿ ಮೈಸೂರಿನ ಪ್ರತಿ ಮನೆಗಳ ಮುಂದೆ ಹಸು ಕರು ಪಕ್ಷಿಗಳು ನೀರು ಕುಡಿಯಲು ಹಿಂದೆ ಕಲ್ಲಿನ ನೀರಿನ ತೊಟ್ಟಿ ಯನ್ನು ಮನೆ ಮುಂದೆ ಸ್ಥಾಪಿಸುತ್ತಿದ್ದರು ಪಶು ಪಕ್ಷಿಗಳು ಆನಂದದಿಂದ ನೀರು ಕುಡಿದು ದಾಹ ತಾಣಿಸಿಕೊಳ್ಳುತ್ತಿದ್ದವು ,ಆದರೆ ಈ ದಿನಗಳಲ್ಲಿ ಅವೆಲ್ಲ ಕಣ್ಮರೆ ಆಗಿರುವುದು ವಿಷಾದನೀಯ.

ನಿಸರ್ಗದಲ್ಲಿ ಪಶು ಪಕ್ಷಿ ಜಲಚರಗಳೆ ಹಿರಿತನದಲ್ಲಿ ಇರುವುದು ಮಾನವ ಇತ್ತೀಚಿನ ಸಂಕುಲ ತನ್ನ ಕ್ಷೇಮಕ್ಕಾಗಿ ಬಡಾವಣೆಗಳನ್ನು ನಿರ್ಮಿಸಿ ಕೊಂಡು ಕೆರೆ ಕಟ್ಟೆ ಗಳನ್ನು ಮುಚ್ಚಿ ವೃಕ್ಷಗಳನ್ನು ಕಡೆದು ಆ ಅಮಾಯಕ ಮೂಕ ಜೀವಿಗಳಿಗೆ ನೀರು ನೆರಳು ಇಲ್ಲದಂತೆ ಮಾಡಿರುವುದು ದುರಂತ ಈ ನಿಟ್ಟಿನಲ್ಲಿ ಮಾನವೀಯತೆ ಹೊಂದಿರುವವರಿಗೆ ಮನುಷ್ಯ ಸಂಕುಲ ಈ ಬೇಸಿಗೆಯ ಧಗೆಯನ್ನು ನೀಗಿಸಲು ಅವುಗಳಿಗೆ ನೀರು ಆಹಾರ ವನ್ನು ನೀಡಿ ಸಕಲ ಜೀವರಾಶಿಗಳನ್ನು ಕಾಪಾಡಲು ಮುಂದಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮಾಜಿನಗರ ಪಾಲಿಕೆ ಸುಬ್ಬಯ್ಯ, ಆರ್ ಪರಮೇಶ್ ಗೌಡ, ಕಿರಣ್ ಗೌಡ,ಎಸ್ ಎನ್ ರಾಜೇಶ್, ಚೇತನ್, ನಂಜಪ್ಪ, ಬೈರತಿ ಲಿಂಗರಾಜು, ವಿನೋದ್ ಅರಸ್,ನಾಗೇಶ್ ಯಾದವ್, ಶ್ರೀನಿವಾಸ್, ಶ್ರವಣ್ ಮಾಲಿ, ಮಹಾನ್ ಶ್ರೇಯಸ್, ಅಮಿತ್, ನಾಣಿ ಗೌಡ, ಕೀರ್ತಿ, ಸುಚೇಂದ್ರ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?