ಮೈಸೂರು-ಬಿ ಎಸ್ ಯಡಿಯೂರಪ್ಪ- ಹುಟ್ಟುಹಬ್ಬದ-ಅಂಗವಾಗಿ- ವಿವಿಧ-ಸವಲತ್ತುಗಳ-ವಿತರಣೆ

ಮೈಸೂರು ಚಾಮುಂಡಿಪುರಂನ ಆರಾಧ್ಯ ಮಹಾಸಭಾದಲ್ಲಿ ವಾರ್ಡ್ ನಂಬರ್ 55ರ ಮಾಜಿನಗರ ಪಾಲಿಕಾ ಸದಸ್ಯ ಮಾ ವಿ ರಾಮಪ್ರಸಾದ್ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ನೇತಾರರು ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಮಹಿಳೆಯರಿಗೆ ಉಚಿತವಾಗಿ ಹೋಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ಔಷಧಿಗಳನ್ನು ನೀಡಲಾಯಿತು.


ಕೆ ಆರ್ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳು ಭಾರತೀಯ ಜನತಾ ಪಾರ್ಟಿಯನ್ನು ಪ್ರಾರಂಭದಿಂದಲೂ ಸಂಘಟಿಸಿ ರೈತರ ಪರವಾದಂತಹ ಹೋರಾಟಗಳನ್ನು ಮಾಡಿ ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಲು ಮೂಲ ಕಾರಣಕರ್ತರಾದ ಬಿ ಎಸ್ ವೈ ರವರು ಮುಖ್ಯಮಂತ್ರಿಗಳಾದಂತಹ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಭಾಗ್ಯಲಕ್ಷ್ಮಿ ಯೋಜನೆ, ರೈತರಿಗೆ ವಿದ್ಯುತ್ ಉಚಿತವಾಗಿ ನೀಡಿದರು ಎಂದರು.

ಈ ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ ರಾಜ ಅರಸ್, ಮಾಜಿನಗರಪಾಲಿಕ ಸದಸ್ಯರಾದ ಮಾವಿ ರಾಮಪ್ರಸಾದ, ಮೈಸೂರು ನಗರ ಬಿಜೆಪಿ ಪ್ರಧಾನಿ ಕಾರ್ಯದರ್ಶಿಗಳಾದ ಮಹೇಶ್, ಉಮಾಶಂಕರ್, ವಿದ್ಯಾ ಅರಸ್, ಪುರುಷೋತ್ತಮ್, ಮಂಜುನಾಥ್, ಸೋಮೇಶ್, ಮಂಜುಳಾ, ವಿಕ್ರಮ ಅಯ್ಯಂಗಾರ್, ಅರವಿಂದ್, ಮುಂತಾದವರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

× How can I help you?