ಮೈಸೂರು – ಮೈಸೂರು ಕೋ-ಅಪರೇಟಿವ್ ಬ್ಯಾಂಕ್ ನ 2025 – 2030ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯ 12 ಸ್ಥಾನಗಳನ್ನು ಆರ್. ಆನಂದ್ ರವರ ನೇತೃತ್ವದ ತಂಡ ಗೆಲುವನ್ನು ಸಾಧಿಸಿದ್ದು, ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್.ಆನಂದ್ ರವರು 2,690 ಮತಗಳನ್ನು ಗಳಿಸುವ ಮೂಲಕ ನಿರ್ದೇಶಕರಾಗಿ ಪುನರಾಯ್ಕೆರಾಗಿದ್ದಾರೆ.
ಈ ವೇಳೆ ಆರ್. ಆನಂದ್ ಬೆಂಬಲಿಗರು ತಮ್ಮ ಪುನರಾಯ್ಕೆ ನಿರ್ದೇಶಕರಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಡಿ.ಎ.ವಿ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿರವರು, ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ ರಿಷಿ ವಿಶ್ವಕರ್ಮ, ಭಾರತೀಯ ಜನತಾ ಪಕ್ಷದ ನಗರ ಉಪಾಧ್ಯಕ್ಷ ಜೋಗಿ ಮಂಜು, ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡರು, ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷರು ವಿಕ್ರಮ್ ಅಯ್ಯಂಗಾರ್ ರವರು ಉಪಸ್ಥಿತರಿದ್ದರು.