ಮೈಸೂರು-ವಿವಿಧ ಸ್ಥಳಗಳಿಗೆ-ರಸ್ತೆ ಹಾಗೂ ಚರಂಡಿ-ಕಾಮಗಾರಿಗೆ-ಗುದ್ದಲಿ ಪೂಜೆ- ನೇರವೇರಿಸಿದ-ಶಾಸಕ ತನ್ವೀರ್ ಸೇಠ್

ಮೈಸೂರು: 2024-25ನೇ ಸಾಲಿನ ಎಸ್.ಎಫ್.ಸಿ. ವಿಶೇಷ ಅನುದಾನದಡಿಯಲ್ಲಿ ಅಂದಾಜು ಮೊತ್ತ ರೂ. 100.00 ಲಕ್ಷಗಳಲ್ಲಿ ಕೈಗೊಳ್ಳುತ್ತಿರುವ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯ ಕಛೇರಿ-7ರ ಹನುಮಂತನಗರ ಮುಖ್ಯ ರಸ್ತೆಯಿಂದ ಉರ್ದು ಶಾಲೆಯವರೆಗೆ ದೊಡ್ಡ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ರವರು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಸಿ ಶೌಕತ್ ಪಾಷಾ, ಸೈಯದ್ ಇಕ್ಬಾಲ್, ಷಹೇನ್ ಷಾ ಅಹಮದ್, ಶೌಕತ್ ಅಲಿ ಖಾನ್ ಹಾಗೂ ಇನ್ನು ಮುಂತಾದವರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

× How can I help you?