ಮೈಸೂರು: ರಾಜ್ಯ ಸರ್ಕಾರದ ನಿರ್ಲಕ್ಷ ಧೋರಣೆಯಿಂದ ಖರೀದಿ ಕೇಂದ್ರಗಳು ಆರಂಭವಾಗದೆ ಹೆಚ್ಚುವರಿ ಪ್ರೋತ್ಸಾಧನ ನೀಡದೇ ಇದ್ದ ಕಾರಣ ಭತ್ತ ಬೆಳೆದ ರೈತರು ಎಂ ಎಸ್ ಪಿ ಗಿಂತ ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡಿ ನಷ್ಟ ಅನುಭವಿಸುವಂತಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತರತ್ನ ಕುರುಬುರ್ ಶಾಂತಕುಮಾರ್ ಹೇಳಿದರು.

ಅವರು ಕೆರಗಳ್ಳಿಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಘಟಕವನ್ನು, ತೆಂಗಿನ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,
ರೈತ ಕೃಷಿಯಲ್ಲಿ ಜೂಜಾಟ ಆಡುತ್ತಿದ್ದಾನೆ. ಪ್ರಕೃತಿ ಮುನಿದಾಗ ಜೂಜಾಟದಲ್ಲಿ ಸೋಲುತ್ತಿದ್ದಾನೆ. ಕಳೆದ ವರ್ಷ ಶುಂಠಿ ಬೆಲೆ 12 ಸಾವಿರ ಇತ್ತು. ಈಗ 1ಸಾವಿರ ರೂಗೆ ಇಳಿದಿದೆ. ರೈತರ ಒತ್ತಾಯಕ್ಕೆ ಈಗ ರಾಜ್ಯ ಸರ್ಕಾರ 7,000 ರೂಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಕೇಂದ್ರಕ್ಕೆ ವರದಿ ಸಲ್ಲಿಸುತ್ತಿದೆ ರೈತರು ದಳ್ಳಾಳಿಗೆಗೆ ಮಾರಾಟ ಮಾಡದೆ ಸ್ವಲ್ಪ ದಿನ ಕಾಯುವಂತಾಗಬೇಕು ಇಂದು ಮಧ್ಯವರ್ತಿಗಳು ದಲ್ಲಾಳಿಗಳು ಬಂಡವಾಳ ಶಾಹಿಗಳು, ಭೂ ಮಾಫಿಯಾದವರು ರೈತರನ್ನ ಒಕ್ಕಲಿಬ್ಬಿಸುವ ಕಾರ್ಯದಲ್ಲಿ ಮುಂದಾಗುತ್ತಿದ್ದಾರೆ. ಸರ್ಕಾರದ ಇಬ್ಬಗೆಯ ನೀತಿಗಳು ರೈತರನ್ನ ಸಂಕಷ್ಟಕ್ಕೆ ತಳ್ಳುತ್ತಿವೆ. ತೊಗರಿ ಬೆಳೆಗೆ ಹೆಚ್ಚುವರಿ 500ರೂ ಪ್ರೋತ್ಸಾಹ ಧನ ನೀಡಿದ ರಾಜ್ಯ ಸರ್ಕಾರ ರಾಜ್ಯದಲ್ಲಿ 20 ಲಕ್ಷ ರೈತರು ಭತ್ತ ಬೆಳೆಯುತ್ತಿದ್ದರು. ಇಂತಹ ಇಬ್ಬಂದಿ ನೀತಿಗಳು ರೈತರನ್ನ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದರು.

ಕೇರಗಳ್ಳಿ ಘಟಕ ಅಧ್ಯಕ್ಷ ಸತೀಶ್ ರವರು ಮಾತನಾಡಿ ರಾಜ್ಯ ಸರ್ಕಾರ ಹಾಲು ಉತ್ಪಾದಕರ ಪ್ರೂತ್ಸಹ ಧನ 5 ರೂ ಬಿಡುಗಡೆಗೆ ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಮಾತನಾಡಿ ದೆಹಲಿ ರೈತರ ಹೋರಾಟ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ. ಭೂ ಮಾಫಿಯಾದವರು ರೈತರ ಜಮೀನು ಖರೀದಿಸಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಸಂಘಟನೆ ಕಾರ್ಯಕ್ರಮ ರೂಪಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕ ಅಧ್ಯಕ್ಷ ಪೈಲ್ವಾನ್ ವೆಂಕಟೇಶ್, ವಾಜಮಂಗಲ ಮಹದೇವ್. ನೀಲಕಂಠಪ್ಪ. ಕೇರಗಹಳ್ಳಿಘಟಕದ ಗೌರವ ಅಧ್ಯಕ್ಷ ನಾಗರಾಜು.ಶಿವಕುಮಾರ.ಬಾಲು.ವಿಜೇಯೆಂದ್ರ,ಮಹದೇವಸ್ವಾಮಿ, ವರಕೂಡು ನಾಗೇಶ.ಮಂಜುನಾಥ,ಉಪಾಧ್ಯಕ್ಷರು ಬಾಲು ಆರ್, ಉಪಾಧ್ಯಕ್ಷರು ಶಿವಕುಮಾರ್. ಬಿ ಸಂದೀಪ್ ಸಿ ಕಾರ್ಯದರ್ಶಿ, ಅಭಿಷೇಕ್ ಎಂ ಖಜಾಂಚಿ, ಮಂಜುನಾಥ್ ಸಂಘಟನಾ ಕಾರ್ಯದರ್ಶಿ ಹಾಗೂ ಗ್ರಾಮದ ಯಜಮಾನರು ಬಸವರಾಜ್, ಬಸವಗೌಡ,ಶಿವಪ್ಪ, ಮಲ್ಲೇಶ, ಬಸವರಾಜು, ದೊಳೇಗೌಡ್ರು, ನಾಗಣ್ಣ ಮುಂತಾದವರು ಹಾಜರಿದ್ದರು.