ಮೈಸೂರು-ಐಪಿಎಲ್-ಬೆಟ್ಟಿಂಗ್-ದಂಧೆಗೆ-ಕಡಿವಾಣ-ಹಾಕುವಂತೆ-ಮೈಸೂರು-ಸೈಬರ್-ಕ್ರೈಂಗೆ-ಕರ್ನಾಟಕ-ಹಿತರಕ್ಷಣಾ-ವೇದಿಕೆಯ ಸದಸ್ಯರುಗಳಿಂದ-ಮನವಿ

ಮೈಸೂರು- ಐಪಿಎಲ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವಂತೆ, ಮೈಸೂರಿನ ನಜರ್ಬಾದ್ ನ, ಸೈಬರ್ ಕ್ರೈಮ್ ಅಪರಾಧಗಳ ವಿಭಾಗದ ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ ನಂದೀಶ್ ಕುಮಾರ್ ರವರಿಗೆ ಕರ್ನಾಟಕ ಹಿತರಕ್ಷಣ ವೇದಿಕೆಯ ಸದಸ್ಯರುಗಳು ಮನವಿ ಸಲ್ಲಿಸಿದರು.

ಕರ್ನಾಟಕ ಹಿತರಕ್ಷಣ ವೇದಿಕೆಯ ಅಧ್ಯಕ್ಷರಾದ ವಿನಯ್ ಕುಮಾರ್ ಮಾತನಾಡಿ, ಮುಂದಿನ ವಾರದಿಂದ ಐಪಿಎಲ್ ನಡೆಯಲಿದ್ದು,
ಮುಂದಿನ ಎರಡು ತಿಂಗಳು ಯುವ ಸಮೂಹ ಈ ಕ್ರಿಕೆಟ್ ಹಬ್ಬದಲ್ಲಿ ಮುಳುಗೇಳಲಿದೆ. ಇತ್ತೀಚೆಗೆ ಗ್ರಾಮೀಣ ಭಾಗದ ಯುವಕರು, ವಿದ್ಯಾರ್ಥಿಗಳನ್ನು ಇವು ಹೆಚ್ಚಿಗೆ ಆಕರ್ಷಿಸುತ್ತಿವೆ.

ಜೊತೆಗೆ ಬೆಟ್ಟಿಂಗ್ ದಂಧೆಗೂ ಕಾರಣವಾಗಿವೆ. ಅನೇಕರು ಈ ದಂಧೆಯಲ್ಲಿ ಸಿಲುಕುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಆನ್‌ಲೈನ್ ಕ್ಲಾಸ್ ನೆಪ ಹೇಳಿಕೊಂಡು ಮೊಬೈಲ್‌ನಲ್ಲಿ ಕ್ರಿಕೆಟ್ ವೀಕ್ಷಿಸುತ್ತಾ ಬೆಟ್ಟಿಂಗ್ ದಂಧೆಯಲ್ಲಿ ತೊಡಗುತ್ತಿದ್ದಾರೆ. ಇವರಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು, ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಹಲವು ಯುವಕರು ಇದಕ್ಕಾಗಿ ಸಾಲ ಮಾಡಿ ಮೊಬೈಲ್, ಬೈಕ್ ಅಡಮಾನ ಮಾಡಿ ಕೈ ಸುಟ್ಟುಕೊಂಡಿದ್ದಾರೆ.

ಇದರಲ್ಲಿ ತೊಡಗಿದ ವಿದ್ಯಾರ್ಥಿಗಳು, ಯುವಕರು ಗೆದ್ದ ಖುಷಿಗೆ, ಸೋತ ದುಃಖಕ್ಕೆ ಮದ್ಯದ ಅಮಲಲ್ಲಿ ತೇಲಿದ ನಿದರ್ಶನಗಳು ಇವೆ. ಸಾಲ ತೀರಿಸಲಾಗದೆ ಊರು ಬಿಟ್ಟು ಹೋದ, ಆತ್ಮಹತ್ಯೆಗೆ ಶರಣಾದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ. ಇನ್ನಷ್ಟು ಜನ ಇಂತಹ ಸಂಕಷ್ಟಕ್ಕೆ ಸಿಲುಕದಂತೆ ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿದೆ.

ಈ ಬೆಟ್ಟಿಂಗ್ ದಂಧೆ ಫೋನ್ ಮೂಲಕವೇ ನಡೆಯುತ್ತಿದ್ದರು ಸೈಬರ್ ಕ್ರೈಂ ವಿಭಾಗದ ಪೊಲೀಸರು ಇದಕ್ಕೆ ಕಡಿವಾನ ಹಾಕಲು ಮುಂದಾಗಬೇಕು ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮವಹಿಸಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು

ಇದೇ ಸಂದರ್ಭದಲ್ಲಿ ಎಸ್ ಎನ್ ರಾಜೇಶ್, ಗುರುರಾಜ್ ಶೆಟ್ಟಿ, ಮಂಜುನಾಥ್, ರವಿಚಂದ್ರ, ಸಂತೋಷ್ ಕುಮಾರ್, ರಾಜು ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?