ಮೈಸೂರು-ಮೇ 10ರಿಂದ ಕಥಕ್ ಶಾಸ್ತ್ರೀಯ ನೃತ್ಯ ತರಗತಿಗಳು ಪುನರಾರಂಭ

ಮೈಸೂರು, ಮೇ 7-ಕರ್ನಾಟಕ ಕಲಾಶ್ರೀ ಗುರು ಮೈಸೂರು ಬಿ.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಆರ್ಟಿಕ್ಯುಲೇಟ್ ಡ್ಯಾನ್ಸ್ ಸ್ಟುಡಿಯೋಸ್, ಮೈಸೂರು ನಗರದಲ್ಲಿ ಕಥಕ್ ಶಾಸ್ತ್ರೀಯ ನೃತ್ಯ ತರಗತಿಗಳನ್ನು ಮೇ 10ರಿಂದ ಪುನರಾರಂಭಿಸುವುದಾಗಿ ಹೆಮ್ಮೆಯಿಂದ ಘೋಷಿಸುತ್ತದೆ.

ವಯೋಮಿತಿ 6 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ಮತ್ತು ಮಹಿಳಾ ಉತ್ಸಾಹಿಗಳು ಲಕ್ನೋ ಘರನಾದ ಶುದ್ಧ ನೃತ್ಯ ಸಂಪ್ರದಾಯದ ಈ ತರಬೇತಿಯಲ್ಲಿ ದಾಖಲಾಗಬಹುದು.

ನೃತ್ಯ ಸಂಸ್ಥೆಯು ವಿದ್ಯಾರ್ಥಿಗಳು ಬಯಸಿದಲ್ಲಿ ಮಾನ್ಯತೆ ಪಡೆದ ಪರೀಕ್ಷೆಗಳನ್ನು ತೆಗೆದುಕೊಳ್ಳಲು ತರಬೇತಿ ನೀಡುತ್ತದೆ. ಮೈಸೂರು ನಗರ ರೈಲ್ವೆ ನಿಲ್ದಾಣದ ಬಳ ಇರುವ ಮಾಂಡೋವಿ ಮೋಟರ್ಸ್‌ ಪಕ್ಕದಲ್ಲಿರುವ, ಫೀನಿಕ್ಷ್ ಇಂಟರ್‌ನ್ಯಾಷನಲ್ ಅಕಾಡೆಮಿ, ಕೆ.ಆರ್.ಎಸ್. ರಸ್ತೆ ಇಲ್ಲಿ ವಾರಾಂತ್ಯದಲ್ಲಿ ತರಗತಿಗಳು ನಡೆಯುತ್ತವೆ.

ಹೆಚ್ಚಿನ ವಿವರಗಳಿಗಾಗಿ ಮೊಬೈಲ್ 9341288391 ಇಲ್ಲಿ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

× How can I help you?