ಮೈಸೂರು-ಎಂ.ಎ-ವಿದ್ಯಾರ್ಥಿಗಳಿಗೆ-ಎಂ.ಎಸ್ಸಿ ಪ್ರಶ್ನೆ-ಪತ್ರಿಕೆ-ನೀಡಿ-ಪರೀಕ್ಷೆ-ಬರೆಸಿ- ಸಾವಿರಾರು-ವಿದ್ಯಾರ್ಥಿಗಳನ್ನು-ನಪಾಸು-ಮಾಡಿದ-ಕರಾಮುವಿ

ಪ್ರಶ್ನೇ ಪತ್ರಿಕೆಯನ್ನು ಮುದ್ರಿಸದೇ, ಬೇರೆ ಕೋರ್ಸ್‌ ನಾ ಪ್ರಶ್ನೆ ಪತ್ರಿಕೆಯನ್ನು ನೀಡಿ ಪರೀಕ್ಷೇ ಬರೆಸಿ ಲಕ್ಷಾಂತರ ವಿದ್ಯಾರ್ಥಿಗಳನ್ನು ನಪಾಸು ಮಾಡಿರುವಂತ ಘಟನೆ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ.

ಹೌದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು), ಮೈಸೂರು, ತನ್ನ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಾಧನೆಗಳಿಗೆ ಪ್ರಸಿದ್ಧವಾಗಿದೆ. ಇಂಥ ಕೆಎಸ್‌ಒಯು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಹುಡುಕಾಟವಾಡುತ್ತಿದ್ದೇಯೇ ಎಂಬ ಪ್ರಶ್ನೆ ವಿದ್ಯಾರ್ಥಿವಲಯದಲ್ಲಿ ಮೂಡಿದೆ.

ಘಟನೆ ವಿವರ : ಎಂ.ಎ ವಿದ್ಯಾರ್ಥಿಗಳಿಗೆ ಎಂ.ಎಸ್ಸಿ ಪ್ರಶ್ನೆ ಪತ್ರಿಕೆ

ಎಂ.ಎ ಸೋಷಿಯಲಾಜಿಯ  2024-25 ಜನವರಿ ಆವೃತ್ತಿಯ ಪರೀಕ್ಷೆಯು ಅಕ್ಟೋಬರ್‌- ನವೆಂಬರ್‌ ಲ್ಲಿ ನಡೆದಿದ್ದು,   ಅ 21, 2025 ರಲ್ಲಿ  Open Elective  ವಿಷಯವಾದ ಪರಿಸರ ವಿಜ್ಞಾನ (Environmental science) ಪ್ರಶ್ನಾ ಪತ್ರಿಕೆ ಮುದ್ರಿಸದೇ, ಎಂ.ಎಸ್ಸಿಯ ಪರಿಸರ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನೇ ನೀಡಿ ಪರೀಕ್ಷೆ ಬರೆಸಿದ್ದಾರೆ. Open Elective ವಿಷಯವಾಗಿ ಪರಿಸರ ವಿಜ್ಞಾನವನ್ನು ತೆಗೆದುಕೊಂಡವರಿಗೆ 40 ಅಂಕ ವಿರುವ ಪ್ರಶ್ನೇ  ಪತ್ರಿಕೆ ನೀಡಬೇಕಾಗಿತ್ತು. ಆದರೇ ಈ ಪ್ರಶ್ನೆ ಪತ್ರಿಕೆಯನ್ನಾ ಮುದ್ರಿಸದ ಕೆಎಸ್‌ಒಯು, ತನ್ನ ತಪ್ಪಾನ್ನು ಮುಚ್ಚಿಕೊಳ್ಳಲು,  80 ಅಂಕವಿರುವ ಎಂ.ಎಸ್ಸಿಯ ಪರಿಸರ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ನೀಡಿ, 40 ಅಂಕಗಳಿಗೆ ಉತ್ತರ ಬರೆಯುಲು ಸೂಚನೆಯನ್ನಾ ನೀಡಿ ಪರೀಕ್ಷೇಯನ್ನು ಬರೆಸಿದೆ.  ಈ ಪರೀಕ್ಷೆಯನ್ನು ಬರೆದ ಸಾವಿರಾರು ವಿದ್ಯಾರ್ಥಿಗಳು ಇಂದು ನಪಾಸಾಗಿದ್ದಾರೆ ಎಂದು ಫಲಿತಾಂಶವನ್ನು ಪ್ರಕಟಿಸಿ ದೊಡ್ಡ ಎಡವಟ್ಟನ್ನು ಮಾಡಿದೆ.

ವಿದ್ಯಾರ್ಥಿಗಳ ಅಳಲು :

ಅ. 21, 2025 ರಲ್ಲಿ  Open Elective- Environmental science  ಪರಿಕ್ಷೆ ಬರೆಯುವಾಗಲೇ ದ್ವಂದ್ವ ವಾತಾವರಣ ನಿರ್ಮಾಣವಾಗಿತ್ತು. ಪ್ರಶ್ನೇ ಪತ್ರಿಕೆ ನೀಡದೆ ಸಮಯ ವ್ಯರ್ಥವಾಗಿದ್ದು ಒಂದೇಡೆಯಾದರೇ,  ಸಿಕ್ಕ ಪ್ರಶ್ನೇ ಪತ್ರಿಕೆಯನ್ನು ಯಾವ ರೀತಿ ಉತ್ತರಿಸುವುದು ಎನ್ನುವುದು ಮತ್ತೊಂದು ದ್ವಂದ್ವ. ಪರೀಕ್ಷಾ ಕೊಠಡಿ ಪರೀವಿಕ್ಷಕರು, 40 ಅಂಕಗಳಿಗೆ ಯಾವುದಾದರೂ ಪ್ರಶ್ನೆಗಳನ್ನು ಉತ್ತರಿಸಿ ಎಂದು ಪರೀಕ್ಷೇ ಶುರುವಾದ ಎಷ್ಟೋ ಸಮಯದ ನಂತರ ಹೇಳಿದ್ರು. 1.30 ಗಂಟೆಯ ಸಮಯದಲ್ಲಿ ಅರ್ಧಗಂಟೆ ದ್ವಂದ್ವದಲ್ಲೇ ವ್ಯರ್ಥವಾಯಿತು.  ಇಲ್ಲಿ 40 ಅಂಕಗಳಿಗೆ ನಾವು ಎಷ್ಟೇ ಬರೆದರೂ ಅಂಕಗಳನ್ನು ಕೊಡದೇ, ನಾಪಾಸು ಮಾಡಿದ್ದಾರೆ. ರಿವ್ಯಾಲ್ಯುವೇಷನ್‌ ಗೆ ಹಾಕೋಣವೆಂದರೆ 1500 ರೂ. ಇದೆ. ಹಾಗೇ  ಉತ್ತರ ಪತ್ರಿಕೆಯನ್ನು ತರಿಸಿಕೊಳ್ಳೋಣವೆಂದರೆ 1250 ರೂ ಇದೆ.  ಕೆ.ಎಸ್‌ ಓ ಯು ಕಛೇರಿಗೆ  ಕರೆ ಮಾಡಿದರೆ ಸರಿಯಾಗಿ ಪ್ರತಿಕ್ರಿಯಿಸೋದಿಲ್ಲ. ಯುನಿರ್ವಸಿಟಿ ಮಾಡಿದ ತಪ್ಪಿಗೆ ನಮ್ಮ ಸಮಯ ಭವಿಷ್ಯ ಹಾಳಾಗುತ್ತಿದೆ.  ಅಲ್ಲದೇ ಸ್ವ- ಅಧ್ಯಾಯನಕ್ಕಾಗಿ  ಕನ್ನಡ ಮಾಧ್ಯಮದವರಿಗೆ ಸ್ಟಡಿ ಮೇಟಿರಿಯಲ್ಲನ್ನೂ ನೀಡಿಲ್ಲ. ಇಂಗ್ಲೇಷ್‌ನಲ್ಲಿರುವ ಪುಸ್ತಕದ ಪಿಡಿಎಫ್ ಹಾಕಿದ್ದಾರೆ.  ಕನ್ನಡ ಮಾಧ್ಯಮದವರನ್ನು ಕಡೆಗಣಿಸಿದ್ದಾರೆ.  ಬೇರೆ ಕಡೆಯಿಂದ ಮಾಹಿತಿ ಅಧ್ಯಾಯನ ನಡೆಸಿ ಪರೀಕ್ಷ ಬರೆದ್ರೇ, ಅಲ್ಲೂ ಮೋಸ ಮಾಡಿದ್ದಾರೆ ಎಂದು  ವಿದ್ಯಾರ್ಥಿಗಳು  ಬೇಸರ ವ್ಯಕ್ತಪಡಿಸುತ್ತಾರೆ.

ಕೆಎಸ್‌ ಒಯು ಅಂದರೆ ಲಕ್ಷಾಂತರ ವಿದ್ಯಾರ್ಥಿಗಳ ಆಶಾಬೆಳಕು. ಊನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ನೇರವಾಗುವ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದೆ. ಮೇ 19, 2023 ರಂದು, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ) ಕೆಎಸ್‌ಒಯುಗೆ ಎ-ಪ್ಲಸ್ ಗ್ರೇಡ್ ನೀಡಿದೆ. ಇಂಥ ಆಶಾ ಬೆಳಕೆ ಕತ್ತಲಾದರೆ ವಿದ್ಯಾರ್ಥಿಗಳಾ ಗೋಳು ಕೇಳೋರು ಯಾರು ಹೇಳಿ.  

ಇನ್ನೂ ಈ ವಿಷಯ ಸಂಬಂಧ ಕೆಎಸ್‌ ಒಯು ಜಾಣ ಕುರುಡು ಪ್ರದರ್ಶಿಸುತ್ತಿದಿಯೋ ಅಥವಾ ಅರಿವಿಲ್ಲದೇ ಆದ ತಪ್ಪೋ ಎಂಬ ಪ್ರಶ್ನೆಗೆ  ಕೆಎಸ್‌ ಒಯು ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *

× How can I help you?