ಮೈಸೂರು-ಮಂಕುತಿಮ್ಮನ-ಕಗ್ಗ-ಬದುಕಿಗೆ-ದಾರಿದೀಪ-ಕೆ.ರಘುರಾಮ್ ವಾಜಪಾಯಿ

ಮೈಸೂರು: ಡಿವಿಜಿಯವರ ಮೇರುಕೃತಿಗಳಲ್ಲೊಂದಾದ ಮಂಕುತಿಮ್ಮನ ಕಗ್ಗವು ಆಧುನಿಕ ಭಗವದ್ಗೀತೆಯೆಂದೇ ಜನಪ್ರಿಯವಾಗಿದ್ದು, ಅದರಲ್ಲಿರುವ ಪ್ರತಿಯೊಂದು ಮುಕ್ತಕಗಳೂ ಬದುಕಿಗೆ ದಾರಿದೀಪದಂತಿವೆ ಎಂದು ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಹೇಳಿದರು.

ನಗರದ ವಿದ್ಯಾರಣ್ಯಪುರಂನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗ ಉದ್ಯಾನವನದಲ್ಲಿ ಅಪೂರ್ವಸ್ನೇಹ ಬಳಗದ ವತಿಯಿಂದ ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕ ವಿಕ್ಯಾತರಾದ ಕನ್ನಡದ ಆಧುನಿಕ ಸರ್ವಜ್ಞ ಡಿ ವಿ ಗುಂಡಪ್ಪ ( ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) 138 ನೇ ಜನ್ಮದಿನಾಚರಣೆಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿ ನೀರು ಹಾಕಿ ಮಾತನಾಡಿದ ಅವರು, ಡಿ.ವಿ.ಗುಂಡಪ್ಪನವರು ಮಹಾನ್ ದಾರ್ಶನಿಕರಾಗಿದ್ದರು, ಕವಿ, ಸಾಹಿತಿ, ಪತ್ರಕರ್ತರಾಗಿ ಅವರ ಕೊಡುಗೆಗಳು ಅಪಾರವಾದುದು, ಮಂಕುತಿಮ್ಮನ ಕಗ್ಗವಂತೂ ಅತ್ಯಂತ ಜನಪ್ರಿಯ ಕೃತಿಯಾಗಿದ್ದು, ಇಂದಿಗೂ ಎಲ್ಲೆಲ್ಲೂ ಅದರ ಮುಕ್ತಕಗಳು ಕೇಳಿಬರುತ್ತಿವೆ, ಬದುಕಿಗೆ ಸ್ಫೂರ್ತಿ ತುಂಬುವ ಕಗ್ಗವನ್ನು ಮತ್ತಷ್ಟು ಪ್ರಚಾರ ಮಾಡಬೇಕು ಎಂದರು.

ನಂತರ ಮಾತನಾಡಿದ ಮಾಜಿನಗರ ಪಾಲಿಕಾ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಂಕುತಿಮ್ಮನ ಕಗ್ಗ” ಕೃತಿಯ ಮೂಲಕ ಜೀವನದ ಮೌಲ್ಯಗಳನ್ನು ಸಾರಿದ ಶ್ರೀಯುತರು, ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಅವಿಸ್ಮರಣೀಯ ಎಂದು ಹೇಳಿದರು

ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ ವಾಜಪೇಯಿ, ಮಾಜಿನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಜಗದೀಶ್, ಕಾ ಪು
ರಾಜಣ್ಣ , ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರುಪಕ ಅಜಯ್ ಶಾಸ್ತ್ರಿ, ಮಿರ್ಲೆ ಪನೀಶ್, ಜತ್ತಿ ಪ್ರಸಾದ್, ಶಿವಲಿಂಗ ಸ್ವಾಮಿ, ಪುಟ್ಟಣ್ಣ, ಮಹಾನ್ ಶ್ರೇಯಸ್, ಶಿವು, ಪ್ರಕಾಶ್, ನಿವೃತ್ತ ಶಿಕ್ಷಕರಾದ ಮಹಾದೇವಸ್ವಾಮಿ, ಹಾಗೂ ಇನ್ನಿತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

× How can I help you?