ಮೈಸೂರು: ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಸಮೃದ್ಧಿ ಟ್ರಸ್ಟ್ ಹಾಗೂ ಕೆಎಂಪಿ ಕೆ ಟ್ರಸ್ಟ್ ಮತ್ತು ಜೆ ಸಿ ಐ ಮೈಸೂರು ಕಿಂಗ್ ಲೇಡೀಸ್ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಮಹಿಳೆಯರಿಗೆ ಆಯೋಜಿಸಿದ ರಂಗೋಲಿ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಕಿರಿಯರಿಂದ ಹಿರಿಯರವರೆಗೂ ಮಹಿಳೆಯರು ರಂಗೋಲಿಯಲ್ಲಿ ಶಿವನ ಚಿತ್ರವನ್ನು ಬಿಡಿಸಿದರು.
ಅತ್ಯುತ್ತಮ 5 ರಂಗೋಲಿ ಸ್ಪರ್ಧಿಗಳಾದ ರಾಮಾನುಜಾ ರಸ್ತೆಯ ನಿವಾಸಿ ಸುಶೀಲಾ, ಕಲ್ಯಾಣಗಿರಿಯ ಕೋಮಲಾ, ವಿದ್ಯಾರಣಿಪುರಂನ ವನಿತಾ ಸುಭಾಷ್,ಜನಿಷಾ ಎಂ.ಎಚ್. ಹಾಗೂ ಶ್ರೀರಾಂಪುರದ ಮಂಗಳಾ ರವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಿರಿಯ ಸಮಾಜ ಸೇವಕ ಡಾ. ಕೆ ರಘುರಾಮ್ ವಾಜಪೇಯಿ ಸಂಸ್ಕೃತಿ ಪರಂಪರೆ ಆಚಾರ ವಿಚಾರ ಉಳಿಸಿ ಬೆಳೆಸುವಲ್ಲಿ ಹಬ್ಬಗಳ ಪಾತ್ರ ಮಹತ್ವವಾಗಿದೆ.
ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ, ಮನುಷ್ಯ ಮನುಷ್ಯರ ನಡುವೆ ಬಾಂಧವ್ಯ ಬೆಳೆಸಲು ಹಬ್ಬಗಳು ಸಹಕಾರಿ, ಸದೃಢ ., ಸ್ವಾಸ್ಥ್ಯ,ಸಮಾಜ ನಿರ್ಮಾಣಕ್ಕೆ ಇಂತಹ ಹಬ್ಬಗಳ ಮೂಲಕ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ ವಾಜಪೇಯಿ, ಮಾಜಿನಗರ ಪಾಲಿಕಾ ಸದ್ಯಸ ಮಾ ವಿ ರಾಮಪ್ರಸಾದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಹರ್ಷಿ ಪಬ್ಲಿಕ್ ಶಾಲೆಯ ಸಿ ಇ ಓ ತೇಜಸ್ ಶಂಕರ್, ಸಮೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಹನಗೌಡ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ಸಾಯಿರಾಂ ಫೌಂಡೇಷನ್ ಅಧ್ಯಕ್ಷರು ಖುಷಿ,ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷರಾದ ಸವಿತಾ ಘಾಟ್ಕೆ , ವಕೀಲರಾದ ಜಯಶ್ರೀ ಶಿವರಾಮ್, ಸಂಧ್ಯಾ, ಸುಶೀಲ, ಮಹಾನ್ ಶ್ರೇಯಸ್, ಜೆ ಸಿ ಐ ಸದಸ್ಯರು ಮೋಹನ್ ರಾಚಯ್ಯ, ಗೌತಮ್ ಹಾಗೂ ಇನ್ನಿತರರು ಹಾಜರಿದ್ದರು