ಮೈಸೂರು : ಅಗ್ರಹಾರದ ಉತ್ತರಾದಿ ಮಠದ ಶ್ರೀ ದೇವೇಂದ್ರ ತೀರ್ಥ ಪ್ರತಿಷ್ಠಾನ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನ ದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪಟ್ಟಾಭಿಷೇಕ ಹಾಗೂ ವರದಂತಿ ಮಹೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಪಂಚಾಮೃತ ಅಭಿಷೇಕ, ಹಾಲಿನ ಅಭಿಷೇಕ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೆರವೇರಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್
ಗುರುರಾಘವೇಂದ್ರ ರಾಯರು ಕಲಿಯುಗದ ಕಾಮಧೇನು ಕಲ್ಪತರು ಎಂದೆ ಖ್ಯಾತಿ, ನಾಲ್ಕು ಶತಮಾನದ ಹಿಂದೆಯೇ ಜನಿಸಿದ ರಾಯರು ತಿರುಪತಿ ವೆಂಕಟೇಶ್ವರರ ಕೃಪೆಯಿಂದ ಜಾತಿಮತ ಧರ್ಮದ ಬೇಧವಿಲ್ಲದೆ ಸಕಲ ಜೀವರಾಶಿಗೂ ಸಲುಹುತ್ತಿದ್ದಾರೆ, ಸಶರೀರವಾಗಿ ಬೃಂದಾವನಸ್ಥರಾಗಿರುವದರಿಂದ ಕಂಪನ ತರಂಗ ಸ್ಪಂದನ ರಾಯರ ಪವಾಡ ಗಳಿಸಿದ್ದ ತಪಸ್ ಶಕ್ತಿಯನ್ನು ಭಕ್ತಾಧಿಗಳಿಗೆ ಧಾರೆಯೆರಿದು ಕಷ್ಟಕಾರ್ಪಣ್ಯಗಳನ್ನ ನಿವಾರಿಸಿ ಕೋಟ್ಯಾಂತರ ಭಕ್ತರ ಮನೆಮನದಲಿದ್ದಾರೆ.

ಈ ಸಂದರ್ಭದಲ್ಲಿ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂಡಿತ್ ಅನಿರುದ್ಧ ಆಚಾರ್ ಪಾಂಡುರಂಗಿ, ಮಠದ ಪ್ರಧಾನ್ ಅರ್ಚಕರಾದ ಹರೀಶ್, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಎಸ್ ಬಿ ವಾಸುದೇವಮೂರ್ತಿ,