ಮೈಸೂರು– ಅಗ್ರಹಾರದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ಕಚೇರಿಯನ್ನು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2025- 2030 ನೇ ಸಾಲಿನ ಅಧ್ಯಕ್ಷೀಯ ಚುನಾವಣೆ, ರಾಜ್ಯದಲ್ಲಿ ಏಪ್ರಿಲ್ 13ರಂದು ಏಕಕಾಲಕ್ಕೆ ಚುನಾವಣೆ ನಡೆಯಲಿದ್ದು, ಹಾಲಿ ಅಧ್ಯಕ್ಷರು ಹಾಗೂ ಮಾಜಿ ಅಡ್ವಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿ ಮೈಸೂರು ಭಾಗದವರೇ ಆದ ವೈದಿಕ ವಿದ್ವಾಂಸರಾದ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ ರವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಮೈಸೂರು ಜಿಲ್ಲೆಯ ವಿವಿಧ ವಿಪ್ರ ಸಂಘಟನೆಯ ಪ್ರಮುಖರು ಮತ್ತು ಏಕೆಬಿಎಮ್ಎಸ್ ಸದಸ್ಯರು ಈಗಾಗಲೇ ಬೆಂಬಲ ಸೂಚಿಸಿದ್ದಾರೆ.
ಡಾ.ಭಾನುಪ್ರಕಾಶ್ ಶರ್ಮಾ ರವರು ಕಳೆದ 30 ವರ್ಷಗಳಿಂದ ವೈದಿಕ ಧರ್ಮದ ವೃತ್ತಿಯಲ್ಲಿ ತೊಡಗಿದ್ದು ಹಳೆ ಮೈಸೂರು ಭಾಗದಲ್ಲಿ ಮನೆ ಮಾತಾಗಿದ್ದಾರೆ ವಿಶ್ವ ಹಿಂದೂ ಪರಿಷತ್, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ, ಶ್ರೀರಂಗಪಟ್ಟಣ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಭಾನುಪ್ರಕಾಶ್ ಶರ್ಮ ಅವರನ್ನು ಬೆಂಬಲಿಸುವ ಮೂಲಕ ಧರ್ಮ ನಿರತ ಅಭ್ಯರ್ಥಿಯನ್ನು ಬೆಂಬಲಿಸೋಣ ಎಂದು ಕರೆ ನೀಡಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ವೇದ ಬ್ರಹ್ಮಶ್ರೀ ಭಾನುಪ್ರಕಾಶ್ ಶರ್ಮಾ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡಿ ಟಿ ಪ್ರಕಾಶ್ ಹಾಗೂ ಬ್ರಾಹ್ಮಣ ಯುವ ವೇದಿಕೆಯ ಕಡಕೊಳ ಜಗದೀಶ್ ರವರನ್ನು ಸಹ ಬೆಂಬಲಿಸಬೇಕೆಂದು ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವೆಂಗಿಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲರಾವ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ, ಬಬ್ಬೊರಕಮ್ಮೆ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಸೂರ್ಯನಾರಾಯಣ, ಎಚ್ ಡಿ ಕೋಟೆ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನಾಗೇಂದ್ರ, ಇಲವಾಲ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ರವಿಶಂಕರ್, ವಿಪ್ರ ಜಾಗೃತಿ ವೇದಿಕೆ ಅಧ್ಯಕ್ಷರಾದ ನಾಗರಾಜ್, ವಿಪ್ರ ಪ್ರೊಫೆಷನಲ್ ಫೋರಮ್ ಶ್ರೀನಿವಾಸ್ ಭಾಷ್ಯಂ, ಕಾರ್ಯದರ್ಶಿ ಸುಧೀಂದ್ರ, ಜ್ಯೋತಿ, ಲತಾ ಬಾಲಕೃಷ್ಣ, ಹೊಯ್ಸಳ ಕರ್ನಾಟಕ ಸಂಗ್ದ ಪದಾಧಿಕಾರಿಗಳು, ವೆಂಕಟೇಶ್ವರ ಪ್ರಾರ್ಥನಾ ಮಂದಿರದ ಪದಾಧಿಕಾರಿಗಳು ಹಾಗೂ ಇನ್ನಿತರ ವಿಪ್ರ ಮುಖಂಡರುಗಳು ಹಾಜರಿದ್ದರು.